ETV Bharat / sitara

ಉಪೇಂದ್ರ ಮುಂದೆ ಶ್ರೀಮುರಳಿ ಇಟ್ಟ ಬೇಡಿಕೆ ಏನು ಗೊತ್ತಾ...? - UPENDRA

ಜನಪ್ರಿಯ ನಟ ಶ್ರೀಮುರಳಿ ಉಪೇಂದ್ರ ಅವರ ಮುಂದೆ ಒಂದು ಬೇಡಿಕೆ ಇಟ್ಟಿದ್ದಾರೆ. ಅದೇನು ಗೊತ್ತಾ... ಈ ಸುದ್ದಿ ನೋಡಿ

SRIMURALI
ಉಪೇಂದ್ರ
author img

By

Published : Aug 22, 2020, 2:39 PM IST

ರೋರಿಂಗ್ ಸ್ಟಾರ್ ಶ್ರೀಮುರಳಿ ಕೆಲವು ದಿನಗಳ ಹಿಂದೆ ಯುವ ಪ್ರತಿಭೆ ನಿರಂಜನ್ ಸುಧೀಂದ್ರ ಕುರಿತು ಭವಿಷ್ಯದ ಸೂಪರ್ ಸ್ಟಾರ್ ಎಂದು ಹೇಳಿದ್ದಾರೆ.

ಸೂಪರ್ ಸ್ಟಾರ್ ಟೀಸರ್ ಬಿಡುಗಡೆ ಸಂದರ್ಭದಲ್ಲಿ ಬಂದಿದ್ದ ಶ್ರೀಮುರಳಿ ಪಕ್ಕದಲ್ಲೇ ಇದ್ದ ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದೆ ಇದೇ ಛಾನ್ಸ್ ಎಂದು ಒಂದು ಬೇಡಿಕೆ ಇಟ್ಟೆ ಬಿಟ್ಟರು.

ಅದೇನು ಗೊತ್ತಾ... ಉಪ್ಪಿ ಅವರೇ ನನಗೆ ಒಂದು ಸಿನಿಮಾ ಮಾಡಿಕೊಡಿ ಎಂದು. ಕಲಾವಿದರುಗಳಿಗೆ ಉಪೇಂದ್ರ ಅವರನ್ನು ಕಂಡರೆ ಈ ರೀತಿಯ ಆಸೆ ಹುಟ್ಟುವುದು ಸಹಜವೇ. ಕಾರಣ 1993 ರಿಂದ ‘ತರ್ಲೆ ನನ್ ಮಗ’ ಚಿತ್ರದ ನಿರ್ದೇಶನದಿಂದ ಉಪ್ಪಿ ಹಾಕಿರುವ ಹವಾ ಹಾಗಿದೆ. ಉಪೇಂದ್ರ ಅವರು ‘ಎ’ ಮೂಲಕ 1998 ರಲ್ಲಿ ನಟರಾಗಿ ಸಹ ವಿಜೃಂಭಿಸಿದ್ದರು. ಆದರೂ ಅವರ ಅಭಿಮಾನಿಗಳು ನಿಮ್ಮ ನಿರ್ದೇಶನ ಯಾವಾಗ ಅಂತ ಕೇಳುತ್ತಲೇ ಇರುತ್ತಾರೆ.

ಇದೀಗ ಜನಪ್ರಿಯ ನಟ ಶ್ರೀಮುರಳಿ ಉಪೇಂದ್ರ ಅವರ ಮುಂದೆ ತನಗಾಗಿ ನಿರ್ದೇಶನ ಮಾಡಿಕೊಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ. ನಾನು ಮೊದಲಿನಿಂದಲೂ ಉಪೇಂದ್ರ ಅಭಿಮಾನಿ. ಗಾಂಧಿ ಕ್ಲಾಸ್ ಅಲ್ಲಿ ಒಮ್ಮೆ ಟಿಕೆಟ್ ಸಿಗಲಿಲ್ಲ ಎಂದು ಅವರ ಸಿನಿಮಾ ನೋಡಿದ್ದೇನೆ.

ಹೀಗೆ ಹೇಳುತ್ತಾ ಶ್ರೀಮುರಳಿ ‘ನಂಗೊಂದು ಸಿನಿಮಾ ಮಾಡಿಕೊಡಿ ಸಾರ್’ ಎಂದರು. ಅದಕ್ಕೆ ಉಪೇಂದ್ರ ಅವರ ನಗುವಷ್ಟೇ ಉತ್ತರವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.