ETV Bharat / sitara

ಎಸ್​.ಪಿ. ಬಾಲಸುಬ್ರಮಣ್ಯಂ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪುತ್ರ ಚರಣ್ - SP Balasubrahmanyam health stable

ಚೆನ್ನೈ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್​.ಪಿ. ಬಾಲಸುಬ್ರಮಣ್ಯಂ ಆರೋಗ್ಯದ ಬಗ್ಗೆ ಪುತ್ರ ಎಸ್​​​​​.ಪಿ. ಚರಣ್ ಫೇಸ್​​ಬುಕ್​​ ಲೈವ್​​​ನಲ್ಲಿ ಮಾಹಿತಿ ನೀಡಿದ್ದಾರೆ.

SPB health updates
ಎಸ್​​​.ಪಿ. ಬಾಲಸುಬ್ರಮಣ್ಯಂ
author img

By

Published : Aug 17, 2020, 5:39 PM IST

Updated : Aug 17, 2020, 5:51 PM IST

ಖ್ಯಾತ ಗಾಯಕ ಎಸ್​​​.ಪಿ. ಬಾಲಸುಬ್ರಮಣ್ಯಂ ಕೊರೊನಾ ಸೋಂಕಿಗಾಗಿ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಣ್ಯರು ಹಾಗೂ ಕೊಟ್ಯಂತರ ಅಭಿಮಾನಿಗಳು ಎಸ್​​​​ಪಿಬಿ ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸಿದ್ದಾರೆ.

  • " class="align-text-top noRightClick twitterSection" data="">

ತಂದೆ ಆರೋಗ್ಯದ ಬಗ್ಗೆ ನಿನ್ನೆ ಮಾಹಿತಿ ನೀಡಿದ್ದ ಎಸ್​​​ಪಿಬಿ ಪುತ್ರ ಎಸ್​​​.ಪಿ. ಚರಣ್ ಇಂದೂ ಕೂಡಾ ತಂದೆಯ ಫೇಸ್​ಬುಕ್​​​​​ ಪ್ರೊಫೈಲ್​​​ನಿಂದಲೇ ಲೈವ್ ಬಂದು ಅವರ ಆರೋಗ್ಯದ ಬಗ್ಗೆ ಅಪ್​​ಡೇಟ್ ನೀಡಿದ್ದಾರೆ. 'ನಿನ್ನೆಯಂತೆಯೇ ಅಪ್ಪನ ಆರೋಗ್ಯ ಸ್ಥಿರವಾಗಿದೆ. ಆದರೆ ಯಾವುದೇ ಅಪಾಯ ಇಲ್ಲ. ವೈದ್ಯರು ನನ್ನ ತಂದೆಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ನಿನ್ನೆಯಂತೆಯೇ ಆರೋಗ್ಯ ಸ್ಥಿರವಾಗಿದ್ದು ಆರೋಗ್ಯದಲ್ಲಿ ಏರುಪೇರು ಕಂಡು ಬಂದಿಲ್ಲದಿರುವುದು ವೈದ್ಯರಿಗೂ ಸಮಾಧಾನ ತಂದಿದೆ. ನಿಮ್ಮೆಲ್ಲರ ಪ್ರಾರ್ಥನೆ ಹಾಗೂ ಹಾರೈಕೆಗೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ, ಕಾಳಜಿಯಿಂದ ಅವರು ಶೀಘ್ರ ಗುಣಮುಖರಾಗಿ ವಾಪಸ್ ಬರುತ್ತಾರೆ, ಧನ್ಯವಾದಗಳು' ಎಂದು ಎಸ್​​​.ಪಿ. ಚರಣ್ ಹೇಳಿದ್ದಾರೆ.

SPB health updates
ಎಸ್​​​.ಪಿ. ಬಾಲಸುಬ್ರಮಣ್ಯಂ

ಮೆಚ್ಚಿನ ಗಾಯಕ ಎಸ್​​​​ಪಿಬಿ ಶೀಘ್ರ ಗುಣಮುಖರಾಗಿ ವಾಪಸ್ ಬರಲಿ ಎಂದು ದೇಶ ಮಾತ್ರವಲ್ಲ ವಿದೇಶದಲ್ಲಿರುವ ಅಭಿಮಾನಿಗಳು ಕೂಡಾ ಪ್ರಾರ್ಥಿಸುತ್ತಿದ್ದಾರೆ. ನಿನ್ನೆಯಷ್ಟೇ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ 'ಬಾಲು ಬೇಗ ಗುಣಮುಖನಾಗಿ ಬಾ' ಎಂದು ಹೇಳಿ ಹಾರೈಸಿದ್ದರು. ಇಂದು ನಟ ರಜನಿಕಾಂತ್ ಕೂಡಾ ಎಸ್​​​.ಪಿ. ಬಾಲಸುಬ್ರಮಣ್ಯಂ ಆರೋಗ್ಯ ಸುಧಾರಿಸಲಿ ಎಂದು ಹಾರೈಸಿದ್ದಾರೆ.

Last Updated : Aug 17, 2020, 5:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.