ETV Bharat / sitara

ಸಂಗೀತ ಪಯಣದ 50ನೇ ಹೊಸ್ತಿಲಲ್ಲಿ ಇಳಿಯರಾಜ ಜತೆ ಎಸ್​​ಪಿಬಿ ವೈಷಮ್ಯ.. ಯಾಕಂದ್ರೇ!!

ಇಳಯರಾಜ ತಮ್ಮ ಅನುಮತಿ ಇಲ್ಲದೆ ತಾವು ಸಂಯೋಜಿಸಿರುವ ಗೀತೆಗಳನ್ನು ಹಾಡುವಂತಿಲ್ಲವೆಂದು ಕಾನೂನು ನೋಟಿಸ್‌ ಕಳುಹಿಸಿದ್ದರು. ಈ ಬಗ್ಗೆ ಎಸ್‌ಪಿಬಿ ಫೇಸ್‌ಬುಕ್‌ನಲ್ಲಿ ಅತೀವ ಬೇಸರ ವ್ಯಕ್ತಪಡಿಸಿ ಸ್ಟೇಟಸ್‌ ಹಾಕಿದ್ದರು. ಆ ಬಳಿಕ ಅದು ಸುಖಾಂತ್ಯ ಕಂಡಿತ್ತು..

ಎಸ್​​ಪಿ ಬಾಲಸುಬ್ರಹ್ಮಣ್ಯಂ
SP Balasubrahmanyam
author img

By

Published : Sep 25, 2020, 4:03 PM IST

ಇಳಯರಾಜ ಮತ್ತು ಎಸ್‌ ಪಿ ಬಾಲಸುಬ್ರಹ್ಮಣ್ಯಂ ಸಂಗೀತ ಕ್ಷೇತ್ರದ ದಿಗ್ಗಜರು. ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದು, ಇಳಯರಾಜ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಸಾಕಷ್ಟು ಹಾಡುಗಳಿಗೆ ಎಸ್‌ಪಿಬಿ ದನಿಯಾಗಿ ಹಿಟ್ ನೀಡಿದ್ದರು. ಈ ಸ್ನೇಹದಲ್ಲಿ ಒಮ್ಮೆ ಬಿರುಕು ಕಾಣಿಸಿಕೊಂಡು ಇಡೀ ಭಾರತೀಯ ಚಿತ್ರರಂಗವೇ ಅಚ್ಚರಿ ಪಟ್ಟಿತ್ತು.

ಗಾಯಕ ಎಸ್‌ ಪಿ ಬಾಲಸುಬ್ರಹ್ಮಣ್ಯಂಗೆ ಸಂಗೀತ ನಿರ್ದೇಶಕ ಇಳಯರಾಜ್‌ ಅವರು ಲೀಗಲ್‌ ನೋಟಿಸ್‌ ಕಳುಹಿಸಿದ ವಿಚಾರಕ್ಕೆ ಕಾನೂನು ಸಮರಕ್ಕಿಂತ ಮಾತುಕತೆಯಲ್ಲಿ ಬಗೆಹರಿಸಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯ ಆಗ ವ್ಯಕ್ತವಾಗಿತ್ತು.

ಆಗ ಅಮೆರಿಕಾ ಪ್ರವಾಸದಲ್ಲಿದ್ದ ಎಸ್‌ಪಿಬಿ ಅವರು ಸಿನಿಮಾ ರಂಗಕ್ಕೆ ಬಂದು ಐವತ್ತು ವರ್ಷ ಆಗಿದ್ದರಿಂದ 'ಎಸ್‌ಪಿಬಿ-50' ಎಂಬ ಕಾರ್ಯಕ್ರಮವನ್ನು ಸಾಗರೋತ್ತರ ರಾಷ್ಟ್ರಗಳಲ್ಲಿ ಆಯೋಜಿಸಿದ್ದರು. ಆ ಕಾರ್ಯಕ್ರಮಗಳಲ್ಲಿ ಅವರು ಇಳಯರಾಜ ಅವರು ಕಂಪೋಸ್‌ ಮಾಡಿದ್ದ ಗೀತೆಗಳನ್ನು ಹಾಡುವವರಿದ್ದರು.

ಅದನ್ನರಿತ ಇಳಯರಾಜ ತಮ್ಮ ಅನುಮತಿ ಇಲ್ಲದೆ ತಾವು ಸಂಯೋಜಿಸಿರುವ ಗೀತೆಗಳನ್ನು ಹಾಡುವಂತಿಲ್ಲವೆಂದು ಕಾನೂನು ನೋಟಿಸ್‌ ಕಳುಹಿಸಿದ್ದರು. ಈ ಬಗ್ಗೆ ಎಸ್‌ಪಿಬಿ ಫೇಸ್‌ಬುಕ್‌ನಲ್ಲಿ ಅತೀವ ಬೇಸರ ವ್ಯಕ್ತಪಡಿಸಿ ಸ್ಟೇಟಸ್‌ ಹಾಕಿದ್ದರು. ಆ ಬಳಿಕ ಅದು ಸುಖಾಂತ್ಯ ಕಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.