ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಸುಳ್ಳು ಸುದ್ದಿಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿವೆ. ಹಸಿ ಹಸಿ ಸುಳ್ಳುಗಳು, ವಿಡಿಯೋ, ಪೋಟೋಗಳು ಜನರ ನೆಮ್ಮದಿಗೆ ಕೊಳ್ಳಿ ಇಡುತ್ತವೆ. ಅಷ್ಟೇ ಅಲ್ಲದೆ ಕೋಮು ಗಲಭೆ, ದಾಂಧಲೆಗಳಿಗೂ ಕಾರಣವಾಗುತ್ತಿವೆ.
ಸೋಷಿಯಲ್ ಮೀಡಿಯಾಗಳಲ್ಲಿ ಎಗ್ಗಿಲ್ಲದೆ ಹರಿದಾಡುವ ಫೇಕ್ನ್ಯೂ ಸ್, ರೂಮರ್, ಗಾಳಿ ಸುದ್ದಿಗಳ ತಡೆಗೆ ಈಗಾಗಲೇ ಸರ್ಕಾರ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಪ್ರಯತ್ನಿಸಿವೆ. ಇದೀಗ ದಕ್ಷಿಣ ಭಾರತ ಚಿತ್ರರಂಗದ ಗಣ್ಯರು ಸೋಷಿಯಲ್ ಮೀಡಿಯಾ ಸುಳ್ಳುಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪಣ ತೊಟ್ಟಿದ್ದಾರೆ.
- " class="align-text-top noRightClick twitterSection" data="">
ಮಲಯಾಳಂನ ಮೇರು ನಟ ಮೋಹನ್ ಲಾಲ್, ಮಂಜು ವಾರೀಯರ್, ತಮಿಳಿನ ವಿಜಯ್ ಸೇತುಪತಿ ಹಾಗೂ ಕನ್ನಡದ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಸೇರಿದಂತೆ ಕೆಲ ನಟಿಯರು ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಜಾಗೃತಿ ಮೂಡಿಸಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ಮಾಡಿರುವ ಅವರು, ಫೇಕ್ ನ್ಯೂಸ್ಗಳನ್ನು ತಡೆಯುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.