ಕೊರೊನಾ ಸಂಕಷ್ಟದಲ್ಲಿದ್ದವರಿಗೆ ಬಾಲಿವುಡ್ ನಟ ಸೋನು ಸೂದ್ ತುಂಬಾನೇ ಸಹಾಯ ಮಾಡಿದ್ದಾರೆ. ಕೊರೊನಾ ಲಾಕ್ಡೌನ್ ಆದಾಗಿನಿಂದ ಇಲ್ಲಿಯವರೆಗೆ ಒಂದಲ್ಲ ಒಂದು ರೀತಿಯಲ್ಲಿ ಸೋನು ಸೂದ್ ಸಹಾಯ ಮಾಡುತ್ತಲೇ ಬಂದಿದ್ದಾರೆ. ಎಷ್ಟರಮಟ್ಟಿಗೆ ಅಂದ್ರೆ ತನ್ನ ಆಸ್ತಿಯನ್ನು ಅಡಮಾನವಿಟ್ಟು ಆ ದುಡ್ಡಿನಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ದಾರೆ. ಅಲ್ಲದೇ ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ.
ದಬಾಂಗ್ ಚಿತ್ರ,, ಅರುಂಧತಿ ಹಾಗೂ ಕನ್ನಡದ ವಿಷ್ಣುವರ್ಧನ ಚಿತ್ರದಲ್ಲಿ ಖಳನಟನಾಗಿ ಪಾತ್ರ ನಿರ್ವಹಿಸಿದ್ದಾರೆ. ಇನ್ನು ತೆಲುಗು ಸಿನಿಮಾಗಳಾದ ದೂಕುಡು ಹಾಗು ಜುಲಾಯ್ ಚಿತ್ರದಲ್ಲಿಯೂ ವಿಲನ್ ಆಗಿ ಅಬ್ಬರಿಸಿದ್ದಾರೆ. ಇಷ್ಟೆಲ್ಲ ಚಿತ್ರಗಳಲ್ಲಿ ಖನಟನಾಗಿ ಕಾಣಿಸಿಕೊಂಡಿರುವ ನಟ, ಇನ್ನು ಮುಂದೆ ವಿಲನ್ ಆಗಿ ನಟಿಸುವುದಿಲ್ಲ ಎಂದು ನಿರ್ಧರಿಸಿದ್ದಾರೆ.
ಕೊರೊನಾದಿಂದ ಪಾಠ ಕಲಿತಿರುವ ಇವರು, ಕಳೆದ ಒಂದು ವರ್ಷದಲ್ಲಿ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇವೆಲ್ಲವೂ ಧನಾತ್ಮಕವಾಗಿಯೇ ಆಗಿವೆ. ಆದ್ದರಿಂದ ನಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಮತ್ತೊಂದು ಮಾಹಿತಿ ನೀಡಿದ್ದು, ಇನ್ನು ಮುಂದೆ ಪುಸ್ತಕ ಆಧಾರಿತ, ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಹೆಚ್ಚು ನಟಿಸುತ್ತೇನೆ ಎಂದಿದ್ದಾರೆ.