ಗಾಜಿಯಾಬಾದ್ (ಉತ್ತರ ಪ್ರದೇಶ): ಮಹಾಮಾರಿ ಕೊರೊನಾ ವೈರಸ್ ಬಿಕ್ಕಟ್ಟಿನ ಸಮಯದಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ಅನೇಕ ವರ್ಗದ ಜನರಿಗೆ ಸಹಾಯ ಮಾಡಿ ಎಲ್ಲರಿಂದಲೂ ಮೆಚ್ಚುಗೆಗೊಳಗಾಗಿರುವ ನಟ ಸೋನು ಸೂದ್ ಇದೀಗ ಮತ್ತೊಂದು ಮಹತ್ವದ ಕಾರ್ಯ ಮಾಡಿದ್ದಾರೆ.
ರಾಷ್ಟ್ರೀಯ ಕರಾಟೆ ಆಟಗಾರ್ತಿ ವಿಜೇಂದ್ರ ಕೌರ್ಗೆ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹಣಕಾಸಿನ ಸಹಾಯ ಮಾಡಿದ್ದು, ಈ ಮೂಲಕ ಎಲ್ಲರಿಗೂ ಮತ್ತಷ್ಟು ಹತ್ತಿರವಾಗಿದ್ದಾರೆ. ಜನವರಿ ತಿಂಗಳಲ್ಲಿ ಕರಾಟೆ ಅಭ್ಯಾಸ ಮಾಡುತ್ತಿದ್ದ ವೇಳೆ ವಿಜೇಂದ್ರ ಮೊಣಕಾಲಿನ ಮೂಳೆ ಮುರಿದಿತ್ತು. ಹೀಗಾಗಿ ಅವರು ಶಸ್ತ್ರಚಿಕಿತ್ಸೆಗೊಳಗಾಗಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿತ್ತು. ಆದರೆ ಹಣಕಾಸಿನ ತೊಂದರೆ ಕಾರಣ ಅದು ಸಾಧ್ಯವಾಗಿರಲಿಲ್ಲ. ಅನೇಕರ ಬಳಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಈ ವೇಳೆ ಟ್ವೀಟರ್ ಮೂಲಕ ಸೋನು ಸೂದ್ಗೆ ಈಕೆ ತನ್ನ ಸಂಕಷ್ಟ ಹೇಳಿಕೊಂಡಿದ್ದಳು.
-
You will be playing again🇮🇳
— sonu sood (@SonuSood) August 27, 2020 " class="align-text-top noRightClick twitterSection" data="
Have shared your reports.
Surgery will happen in a weeks time.
Get ready to be on your feet soon my friend 🥇@DRAKHIL66570451 https://t.co/PofoSjhv9u
">You will be playing again🇮🇳
— sonu sood (@SonuSood) August 27, 2020
Have shared your reports.
Surgery will happen in a weeks time.
Get ready to be on your feet soon my friend 🥇@DRAKHIL66570451 https://t.co/PofoSjhv9uYou will be playing again🇮🇳
— sonu sood (@SonuSood) August 27, 2020
Have shared your reports.
Surgery will happen in a weeks time.
Get ready to be on your feet soon my friend 🥇@DRAKHIL66570451 https://t.co/PofoSjhv9u
ಇದನ್ನು ಓದಿ: ಯಾದಗಿರಿಯ ಬಡ ಕುಟುಂಬಕ್ಕೆ ಸೋನು ಸೂದ್ ಸಹಾಯ... ಮತ್ತೆ ಮಾನವೀಯತೆ ಮೆರೆದ ನಟ
ಮಾಹಿತಿ ಪಡೆದುಕೊಳ್ಳುತ್ತಿದ್ದಂತೆ ಸೋನು ಸೂದ್ ಗಾಜಿಯಾಬಾದ್ನ ಸ್ನೇಹಿತ ಹಾಗೂ ಪ್ರಸಿದ್ಧ ವೈದ್ಯ ಅಖಿಲೇಶ್ ಯಾದವ್ ಜತೆ ಮಾತನಾಡಿದ್ದು, ಈ ವೇಳೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುವ ಭರವಸೆ ನೀಡಿದ್ದಾರೆ.
ಸೆಪ್ಟೆಂಬರ್ 1 ರಂದು ಡಾ. ಅಖಿಲೇಶ್ ಯಾದವ್ ತಮ್ಮ ವೈದ್ಯಕೀಯ ತಂಡದೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ ಕರಾಟೆ ಪ್ಲೇಯರ್ ವಿಜೇಂದ್ರ ಕೌರ್ ಚೇತರಿಸಿಕೊಳ್ಳುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ನಟ ಸೋನು ಸೂದ್ ಖುದ್ದಾಗಿ ವಿಡಿಯೋ ಕಾಲ್ ಮಾಡಿ ಡಾ. ಅಖಿಲೇಶ್ ಅವರೊಂದಿಗೆ ಮಾತನಾಡಿ ಕೌರ್ ಆರೋಗ್ಯದ ಮಾಹಿತಿ ಪಡೆದುಕೊಂಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಯಾದಗಿರಿ ನಗರದ ಸರ್ಕಾರಿ ಸಾರ್ವಜನಿಕ ಜಿಲ್ಲಾಸ್ಪತ್ರೆಯಲ್ಲಿ ಏಕಕಾಲಕ್ಕೆ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯ ಕುಟುಂಬಕ್ಕೆ ಬಾಲಿವುಡ್ ಸ್ಟಾರ್ ಸೋನು ಸೂದ್ ನೆರವು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.