ಬಾಲಿವುಡ್ ನಟಿ ಸೋನಮ್ ಕಪೂರ್ ಇಂದು ತಮ್ಮ ಪತಿ ಜೊತೆಗಿರುವ ಫೋಟೋಗಳನ್ನು ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಲಂಡನ್ನಲ್ಲಿ ಕಳೆದ ದಿನಗಳನ್ನು ನೆನೆದಿರುವ ನಟಿ ತಮ್ಮ ಗಂಡನ ಬಗ್ಗೆ ಅದ್ಭುತ ಸಾಲುಗಳನ್ನು ಬರೆದಿದ್ದಾರೆ.
ಲಂಡನ್ನಲ್ಲಿ ಹಿಮದ ನಡುವೆ ತಾವು ಮತ್ತು ತಮ್ಮ ಪತಿ ಆನಂದ್ ಜೊತೆಗೆ ಇರುವ ಫೋಟೋಗಳನ್ನು ಸೋನಮ್ ಶೇರ್ ಮಾಡಿದ್ದಾರೆ. ಈ ಫೋಟೋ ಶೇರ್ ಮಾಡಿ ಬರೆದಿರುವ ನಟಿ, ಐ ಲವ್ ಯು, ನೀನು ನನ್ನ ಪ್ರತೀ ದಿನಗಳನ್ನು ಅದ್ಭುತವಾಗಿಸುತ್ತೀಯ ಎಂದು ಬರೆದಿದ್ದಾರೆ.
- " class="align-text-top noRightClick twitterSection" data="
">
ಲಂಡನ್ನಲ್ಲಿ ಹಿಮದ ನಡುವೆ ನಗುತ್ತಾ ನಿಂತಿರು ಸೋನಮ್ ಮತ್ತು ಆನಂದ್ ಮುಖದಲ್ಲಿ ಕಿರುನಗೆ ಬೀರುತ್ತ ಎಂಜಾಯ್ ಮಾಡ್ತಿದ್ದಾರೆ. ಸೋನಮ್ ಹಾಕಿರುವ ಪೋಸ್ಟ್ಅನ್ನು ನಿರ್ಮಾಪಕ ಹೋಮಿ ಅದಜಾನಿಯಾ ಸೇರಿದಂತೆ ಎರಡು ಲಕ್ಷ ಜನ ಇಷ್ಟಪಟ್ಟಿದ್ದಾರೆ.