ETV Bharat / sitara

ಯೋಗರಾಜ್ ಭಟ್ಟರ 'ಗರಡಿ'ಯಿಂದ ಹೊರಬಂದ ರಚಿತಾ ರಾಮ್​... ಡಿಂಪಲ್​ ಕ್ವೀನ್ ಜಾಗಕ್ಕೆ ಸೋನಾಲ್​! - Sonal monteiro replaces Rachita ram

ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಲ್ಲಿ ಯಶಸ್ ಸೂರ್ಯಗೆ ನಾಯಕಿಯಾಗಿ ರಚಿತಾ ರಾಮ್ ನಟಿಸಲಿದ್ದಾರೆಂದು ಹೇಳಲಾಗಿತ್ತು, ಆದರೆ, ಕಾಲ್​ಶೀಟ್​​ ಸಮಸ್ಯೆಯಿಂದಾಗಿ ರಚಿತಾ ರಾಮ್ ಸಿನಿಮಾದಿಂದ ಹೊರ ನಡೆದಿದ್ದಾರೆ.

ಯೋಗರಾಜ್ ಭಟ್ಟರ ಗರಡಿ ಸಿನಿಮಾದಿಂದ ಹೊರಬಂದ ರಚಿತಾ ರಾಮ್

author img

By

Published : Feb 10, 2022, 4:20 AM IST

ಬಿ.ಸಿ ಪಾಟೀಲ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ ಬರ್ತಾ ಇರೋ ಸಿನಿಮಾ ಗರಡಿ. ಯಶಸ್ ಸೂರ್ಯ ಹೀರೋ ಆಗಿರುವ ಈ ಸಿನಿಮಾಗೆ ರಚಿತಾ ರಾಮ್ ನಾಯಕಿ ಅಂತ ಈ ಹಿಂದೆ ಸುದ್ದಿಯಾಗಿತ್ತು.ಇದರ ಜೊತೆಗೆ ರಚಿತಾ ರಾಮ್ ಕೂಡ, ಫಸ್ಟ್ ಟೈಮ್ ನಿರ್ದೇಶಕ ಯೋಗರಾಜ್ ಭಟ್ ಜೊತೆಗೆ ಕೆಲಸ ಮಾಡಲು ಎಕ್ಸೈಟ್ ಆಗಿದ್ದರು. ಆದರೆ, ಈ ಸಿನಿಮಾ ಶೂಟಿಂಗ್ ಶುರುವಾಗುವ ಮುನ್ನವೇ ಗರಡಿ ಚಿತ್ರತಂಡದಿಂದ ಬೇಸರದ ಸುದ್ದಿಯೊಂದು ಹೊರ ಬಿದ್ದಿದೆ.

Sonal monteiro replaces Rachita ram in Garadi movie
ಯೋಗರಾಜ್ ಭಟ್ಟರ 'ಗರಡಿ'ಯಿಂದ ಹೊರಬಂದ ರಚಿತಾ ರಾಮ್

ಗರಡಿ ಚಿತ್ರದಿಂದ ರಚಿತಾ ರಾಮ್​ ಹೊರಹೋಗಿದ್ದು, ಹೊಸ ನಾಯಕಿಯ ಆಗಮನವಾಗಿದೆ ಅಂತಾ ಹೇಳಲಾಗುತ್ತಿದೆ. ರಚಿತಾ ರಾಮ್ ಜಾಗಕ್ಕೆ ಯಾವ ನಟಿಯ ಎಂಟ್ರಿ ಆಗಿದೆ ಎಂದು ತಿಳಿದುಕೊಳ್ಳುವ ಮುಂಚೆ, ರಚಿತಾ ರಾಮ್ ಹೊರ ಹೋಗಲು ಕಾರಣ ಏನು ಎಂಬುದನ್ನ ತಿಳಿದುಕೊಳ್ಳೋಣ. ನಿರ್ದೇಶಕ ಯೋಗರಾಜ್ ಭಟ್ ಆಪ್ತರು ಹೇಳುವ ಹಾಗೇ ರಚಿತಾ ರಾಮ್ ಸಿನಿಮಾ ಕಾಲ್ ಶೀಟ್ ಅಂತಾ ಹೇಳಲಾಗುತ್ತಿದೆ. ಸದ್ಯ ರಚಿತಾ ರಾಮ್ ಕೈಯಲ್ಲಿರುವ ಸಿನಿಮಾಗಳ ಸಂಖ್ಯೆ. ರಚಿರಾ ಅಭಿನಯಿಸಿರುವ ಏಕ್ ಲವ್ ಯಾ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಮಾಟ್ನಿ, ಶಬರಿ, ಮಾನ್ಸೂನ್ ರಾಗ, ಬ್ಯಾಡ್ ಮ್ಯಾನರ್ಸ್, ಕ್ರಾಂತಿ ಹೀಗೆ ಐದಾರು ಸಿನಿಮಾಗಳಲ್ಲಿ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ.

ಇಷ್ಟೊಂದು ಸಿನಿಮಾಗಳಲ್ಲಿ ನಟಿಸುತ್ತಿರುವ ರಚಿತಾ ರಾಮ್​ಗೆ ಗರಡಿ ಸಿನಿಮಾಗೆ, ಕಾಲ್ ಶೀಟ್ ಹೊಂದಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಗರಡಿ ಚಿತ್ರದಿಂದ ಹೊರ ಬಂದಿದ್ದಾರೆ. ರಚಿತಾ ರಾಮ್ ಅವರ ಜಾಗಕ್ಕೆ ಯಾವ ನಟಿ ಬಂದಿದ್ದಾರೆ ಎಂಬ ಕುತೂಹಲ ಇತ್ತು. ಅದಕ್ಕೂ ಉತ್ತರ ಸಿಕ್ಕಿದೆ. ಈ ಹಿಂದೆ ನಿರ್ದೇಶಕ ಯೋಗರಾಜ್ ಭಟ್ ಪಂಚತಂತ್ರ ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಸೋನಲ್ ಮೊಂಥೆರೋ, ಗರಡಿ ಚಿತ್ರದ ಅಡ್ಡಕ್ಕೆ ಬಂದಿದ್ದಾರೆ. ಇನ್ನು ಸೋನಲ್ ಮೊಂಥೆರೋ ಕೂಡ ಜಯತೀರ್ಥ ನಿರ್ದೇಶನದ ಬನಾರಸ್, ಡಾರ್ಲಿಂಗ್ ಕೃಷ್ಣ ಜೊತೆಗೆ ಶುಗರ್ ಫ್ಯಾಕ್ಟರಿ,ಬುದ್ಧಿವಂತ 2 ಸಿನಿಮಾಗಳಲ್ಲಿ ನಟಿಸುತ್ತಿದ್ದು, ಈಗ ಮತ್ತೆ ಯೋಗರಾಜ್ ಭಟ್ ಅವರೊಂದಿಗೆ ಕೆಲಸ ಮಾಡಲು ರೆಡಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.