ETV Bharat / sitara

ಮನೆ ಖರೀದಿಸಿ ಕನಸು ನನಸಾಯ್ತು ಅಂದ್ರು ಸೋನಾಕ್ಷಿ - sonakshi sinha latest news

ಮುಂಬೈನ ಬಾಂದ್ರಾ ಪ್ರದೇಶದಲ್ಲಿ 4BHK ಮನೆಯನ್ನು ಸೋನಾಕ್ಷಿ ಕೊಂಡಿದ್ದಾರೆ. ಈ ಮೂಲಕ ನಾನು ನನ್ನ ಕನಸನ್ನು ನನಸು ಮಾಡಿಕೊಂಡಿದ್ದೇನೆ ಅಂತ ಹೇಳ್ಕೊಂಡಿದ್ದಾರೆ.

ಮನೆ ಖರೀದಿಸಿ ಕನಸು ನನಸಾಯ್ತು ಅಂದ್ರು ಸೋನಾಕ್ಷಿ

author img

By

Published : Jan 23, 2021, 4:52 PM IST

ಬಾಲಿವುಡ್​​​ ನಟಿ ಸೋನಾಕ್ಷಿ ಸಿನ್ಹಾ ಅಂತೂ ಇಂತು ಕಷ್ಟ ಪಟ್ಟು ದುಡಿದು ಒಂದು ಮನೆ ಖರೀದಿ ಮಾಡಿದ್ದಾರೆ. ಹೌದು.. ಈ ಬಗ್ಗೆ ಸ್ವತಃ ನಟಿಯೇ ಹೇಳಿಕೊಂಡಿದ್ದು, ಈ ಮನೆಯು ನಾನು ಕಷ್ಟ ಪಟ್ಟು ದುಡಿದ ದುಡ್ಡಿನಿಂದ ಖರೀದಿ ಮಾಡಿದ್ದೇನೆ ಎಂದಿದ್ದಾರೆ.

ಮುಂಬೈನ ಬಾಂದ್ರಾ ಪ್ರದೇಶದಲ್ಲಿ 4BHK ಮನೆಯನ್ನು ಸೋನಾಕ್ಷಿ ಕೊಂಡಿದ್ದಾರೆ. ಈ ಮೂಲಕ ನಾನು ನನ್ನ ಕನಸನ್ನು ನನಸು ಮಾಡಿಕೊಂಡಿದ್ದೇನೆ ಅಂತ ಹೇಳ್ಕೊಂಡಿದ್ದಾರೆ.

ಸದ್ಯ ನಟಿಯು ಮುಂಬೈನ ಜುಹುವಿನಲ್ಲಿರುವ ತಮ್ಮ ಮೂಲ ಮನೆ ರಾಮಾಯಣದಲ್ಲಿ ಕುಟುಂಬದ ಜೊತೆ ವಾಸ ಮಾಡುತ್ತಿದ್ದಾರೆ. ಹೊಸ ಮನೆ ಖರೀದಿ ಮಾಡಿದ್ರು ಕೂಡ, ಸದ್ಯ ಈ ಮನೆಯಿಂದ ನಾನು ಅಲ್ಲಿಗೆ ಹೋಗೋ ಪ್ಲಾನ್​​ ಇಲ್ಲ ಅಂತಿದ್ದಾರೆ. ಮತ್ತೊಂದು ಇಂಟರೆಸ್ಟಿಂಗ್​ ವಿಚಾರ ಅಂದ್ರೆ ಕಳೆದ ನವೆಂಬರ್​ನಲ್ಲಿ ಜುಹುನಲ್ಲಿರುವ ರಾಮಾಯಣ ಮನೆಯನ್ನು ತಮ್ಮ ಅಭಿರುಚಿಗೆ ತಕ್ಕಂತೆ ನವೀಕರಿಸಿದ್ರು.

ಸೋನಾಕ್ಷಿ ಮತ್ತೊಂದು ಮಾಹಿತಿ ಹಂಚಿಕೊಂಡಿದ್ದು, ಅವರು ಕೆಲಸ ಮಾಡಲು ಪ್ರಾರಂಭಿಸಿದಾಗಲೇ ತಮಗೆ 30 ವರ್ಷ ವಯಸ್ಸಾಗುವುದರೊಳಗೆ ಒಂದು ಮನೆ ಖರೀದಿ ಮಾಡುಬೇಕೆಂಬ ಕನಸು ಕಂಡಿದ್ರಂತೆ. ಆ ಕನಸು ಇಂದು ನನಸಾಗಿದೆ ಅಂತಾರೆ ಸೋನಾಕ್ಷಿ.

ಇನ್ನು ಇವರ ಸಿನಿಮಾ ವಿಚಾರಕ್ಕೆ ಬಂದ್ರೆ ಸದ್ಯ ಅಜಯ್​ ದೇವಗನ್​​ ನಟನೆಯ 'ಭುಜ್​​ : ದಿ ಪ್ರೈಡ್​​​ ಆಫ್​ ಇಂಡಿಯಾ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಸಂಜಯ್​ ದತ್​​, ಶರದ್​ ಕೇಲ್ಕರ್​​ ಸೇರಿದಂತೆ ಹಲವರು ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.