ETV Bharat / sitara

ಕೊನೆಗೂ ಕೊರೊನಾ ಸಂಕಟದಿಂದ ಹೊರಬಂದ ಕನಿಕಾ: ಆಸ್ಪತ್ರೆಯಿಂದ ಮನೆಗೆ ಮರಳಿದ ಪ್ರಸಿದ್ಧ ಗಾಯಕಿ - ಸಿಂಗರ್​ ಕನಿಕಾ ಕಪೂರ್​

ಬಾಲಿವುಡ್‌ನ ಖ್ಯಾತ ಗಾಯಕಿ​ ಕನಿಕಾ ಕಪೂರ್​ ಕೊರೊನಾ ಕಾಯಿಲೆಯಿಂದ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.

Singer Kanika Kapoor has been discharged from hospital

author img

By

Published : Apr 6, 2020, 10:51 AM IST

ಲಖನೌ: ಖ್ಯಾತ ಗಾಯಕಿ ಕನಿಕಾ ಕಪೂರ್​ ಮಹಾಮಾರಿ ಕೊರೊನಾ ಹಿಡಿತದಿಂದ ಬಚಾವ್‌ ಆಗಿದ್ದಾರೆ. ವಿದೇಶದಿಂದ ವಾಪಸ್‌ ಬರುತ್ತಾ ಸೋಂಕು ತಗುಲಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರಿಗೆ ನಡೆಸಲಾದ 6ನೇ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾಮುಕ್ತರಾಗಿದ್ದು ಖಾತ್ರಿಯಾಗಿದೆ. ಹೀಗಾಗಿ ಮೊಗದಲ್ಲಿ ನಗು ತುಂಬಿಕೊಂಡ ಸುಂದರಿ ಆಸ್ಪತ್ರೆಯಿಂದ ಮನೆ ಕಡೆಗೆ ತೆರಳಿದರು.

ಕಪೂರ್ ಲಖನೌದ ಸಂಜಯ್​ ಗಾಂಧಿ ಮೆಡಿಕಲ್​ ಕಾಲೇಜ್​​ನಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಈಕೆಗೆ 5ನೇ ಬಾರಿಗೆ ನಡೆಸಿದ ಪರೀಕ್ಷೆಯಲ್ಲಿ ವೈರಸ್​ ತಗುಲಿರುವುದು ಪತ್ತೆಯಾಗಿತ್ತು. ಹೀಗಾಗಿ ಪ್ರತಿ 48 ಗಂಟೆಗೊಮ್ಮೆ ಅವರ ರಕ್ತದ ಮಾದರಿಯನ್ನು ತಪಾಸಣೆ ಮಾಡಲಾಗುತ್ತಿತ್ತು.

ಲಂಡನ್​ನಿಂದ ಭಾರತಕ್ಕೆ ವಾಪಸ್​ ಆಗಿದ್ದ ಪ್ರಸಿದ್ಧ ಗಾಯಕಿಯಲ್ಲಿ ಕೊರೊನಾ ವೈರಸ್​ ಕಂಡು ಬಂದಿತ್ತು. ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನ ಅವರು ಸಾಕಷ್ಟು ಸಂತೋಷಕೂಟಗಳಲ್ಲಿ ಪಾಲ್ಗೊಂಡಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.