ETV Bharat / sitara

‘ಸೇನಾಪುರ’ದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಸಿಂಗರ್​​ ಅನನ್ಯ ಭಟ್​ - ಸಿಂಗರ್​​ ಅನನ್ಯಾ ಭಟ್​

ಸೋಜುಗಾದ ಸೂಜುಮಲ್ಲಿಗೆ ಹಾಡಿನ ಮೂಲಕ ಮನೆ ಮಾತಾಗಿದ್ದ ಅನನ್ಯ ಭಟ್ ಇದೀಗ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರಕ್ಕೆ ಗುರು ಸಾವನ್​ ನಿರ್ದೇಶನ ಮಾಡಿದ್ದರೆ. ಅನನ್ಯ ಭಟ್​​ ಅವರೇ ಸಂಗೀತ ನೀಡಿರುವುದು ವಿಶೇಷವಾಗಿದೆ. ಈ ಬಗ್ಗೆ ಈಟಿವಿ ಭಾರತದ ಜೊತೆ ಸಂತಸ ಹಂಚಿಕೊಂಡಿದ್ದಾರೆ.

singer-ananya-bhatt
ಸಿಂಗರ್​​ ಅನನ್ಯಾ ಭಟ್​
author img

By

Published : Sep 25, 2021, 7:47 PM IST

ತನ್ನ ವಿಶಿಷ್ಟ ಕಂಠದ ಮೂಲಕ‌ ಕನ್ನಡ ಹಾಗೂ ಬೇರೆ ಭಾಷೆಯಲ್ಲೂ ಹಾಡಿನ ಮೂಲಕ ಹೆಸರು ಮಾಡಿರುವ ಅನನ್ಯ ಭಟ್ ಇದೀಗ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ತೆರೆಮೇಲೆ ಬರಲು ಸಿದ್ಧರಾಗಿದ್ದಾರೆ.

ಸೇನಾಪುರ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಈ ಚಿತ್ರದ ಬಗ್ಗೆ ಹಲವು ವಿಚಾರಗಳ ಹಂಚಿಕೊಂಡಿದ್ದಾರೆ.

ಈಟಿವಿ ಭಾರತ್ ಜೊತೆ ಅನನ್ಯ ಭಟ್ ಮಾತು

ಇದೊಂದು ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು, ಮುಗ್ಧ ಹಳ್ಳಿ ಜನರ ಸಮಸ್ಯೆಗಳ ಎತ್ತಿ ಹಿಡಿಯುವ ಕಥೆಯಂತೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಅವರು ಗಾಯಕಿಯಾಗಲೂ ಸಹ ನಾಟಕವೇ ಕಾರಣವಾಗಿದೆ ಎಂದಿದ್ದಾರೆ.

ನಾನು ನಾಯಕಿಯಾಗಲು ಮಂಡ್ಯ ರಮೇಶ್ ಹಾಗೂ ರಾಜ್ ಅನಂತಸ್ವಾಮಿ ಕಾರಣ ಅವರಿಗೆ ನನ್ನ ಕೃತಜ್ಞತೆಗಳು. ಗಾಯಕಿಯಾಗಲು ರಘು ದೀಕ್ಷಿತ್, ಎಂ.ಡಿ ಪಲ್ಲವಿ, ಬಿ ಜಯಶ್ರೀ ಅಮ್ಮ ಅವರನ್ನ ಹತ್ತಿರದಿಂದ ನೋಡಿ ನಾನು ಸಹ ಗಾಯಕಿಯಾಗಬೇಕು ಎಂದುಕೊಂಡಿದ್ದೆ ಎಂದಿದ್ದಾರೆ.

ಇತ್ತ ಗಾಯಕಿ, ನಟಿ ಆಗಿಲ್ಲದಿದ್ದರೆ ಅನನ್ಯ ಭಟ್, ಡಾಕ್ಟರ್, ಬೈಕರ್, ಫ್ಯಾಷನ್ ಡಿಸೈನರ್​ ಹಾಗೆ ಒಳ್ಳೆಯ ಕುಕ್ ಆಗುವ ಕನಸು ಕಂಡಿದ್ದರಂತೆ.

ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಗ್ರೀನ್​ ಸಿಗ್ನಲ್​: ತೆರೆಗೆ ಸಿದ್ಧಗೊಂಡ ಟಾಪ್​ ನಟರ ಚಿತ್ರಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.