ETV Bharat / sitara

ಪ್ರತಿಯೊಬ್ಬರ ಜೀವನ ಪುಸ್ತಕ ಬರೆಯುವಂತಾಗಲಿ: ಕಿಚ್ಚ ಸುದೀಪ್ - ಕಿಚ್ಚ ಸುದೀಪ್ ಹೇಳಿಕೆ

ಬೆಂಗಳೂರು ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರ 25 ನೇ ಪುಸ್ತಕ ‘ಶುಭಂ’ ಮೊದಲ ಪ್ರತಿಯನ್ನು  ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು.

Actor sudeep statement
ಪ್ರತಿಯೊಬ್ಬರ ಜೀವನ ಪುಸ್ತಕ ಬರೆಯುವಂತಾಗಲಿ: ಕಿಚ್ಚ ಸುದೀಪ್
author img

By

Published : Nov 28, 2019, 10:09 AM IST

ಬೆಂಗಳೂರು ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರ 25 ನೇ ಪುಸ್ತಕ ‘ಶುಭಂ’ ಮೊದಲ ಪ್ರತಿಯನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು.

Shubham Book Release Ceremony
ಶುಭಂ ಪುಸ್ತಕ ಬಿಡುಗಡೆ ಸಮಾರಂಭ

ನಂತರ ಮಾತನಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಯ ಜೀವನ ಪುಸ್ತಕ ರೂಪದಲ್ಲಿ ದಾಖಲಾಗುವಂತೆ ಆಗಲಿ. ಗಣೇಶ್ ಕಾಸರಗೋಡು ಬರೆದಿರುವ ಪುಸ್ತಕದಲ್ಲಿ ಸಿನಿಮಾ ಪ್ರಪಂಚವೆ ಅಡಗಿದೆ ಎಂದು ಕೇಳಿದ್ದೇನೆ. ಅವರಿಗೆ ಬಹಳ ತಾಳ್ಮೆಯಿದ್ದರಿಂದ ಈ ರೀತಿಯ ದೊಡ್ಡ ಪುಸ್ತಕ ಬರೆಯಲು ಸಾಧ್ಯವಾಯಿತು. ಒಂದು ಕೈಯಲ್ಲಿ ‘ಶುಭಂ’ ಹಿಡಿದರೆ ಜಿಮ್ಮಿಗೆ ಹೋಗಬೇಕಿಲ್ಲ. ನನಗಂತೂ ಓದುವ ತಾಳ್ಮೆ ಇಲ್ಲ ಎಂದು ಮೊದಲ ಪ್ರತಿಯನ್ನು ಕಿಚ್ಚ ಸುದೀಪ್ ದೊಡ್ಡು ಕೊಟ್ಟು ಖರೀದಿ ಮಾಡಿದರು.

ಪತ್ರಕರ್ತ ರವಿ ಬೆಳೆಗೆರೆ ಮಾತನಾಡಿ ನಾನು ಬೆಂಗಳೂರಿನಲ್ಲಿ ಏನಾದರೂ ಅಗಿದ್ದೇನೆ ಅಂದರೆ ಗಣೇಶ್ ಕಾಸರಗೋಡು ಕಾರಣ. ಅವರನ್ನು ದಶಕಗಳಿಂದ ಬಲ್ಲೆ. ಅವರ ಕೋಪ ಸಹ ನನಗೆ ಚೆನ್ನಾಗಿ ಪರಿಚಯವಿದೆ. ನಾನು ಮುಂದಿನ ದಿನಗಳಲ್ಲಿ ಗಣೇಶ್ ಕಾಸರಗೋಡು ಬಗ್ಗೆಯೇ ಪುಸ್ತಕ ಬರೆಯುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರವಿ ಬೆಳೆಗೆರೆ, ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ತಾರಾ, ಶ್ರಾವಣ ಲಕ್ಷ್ಮಣ್ , ಹಿರಿಯ ನಿರ್ದೇಶಕರುಗಳಾದ ಎಸ್ ಕೆ ಭಾಗ್ವನ್ (ದೊರೈ ಭಾಗ್ವನ್ ಖ್ಯಾತಿ), ಸಿ ವಿ ಶಿವಶಂಕರ್, ಭಾರ್ಗವ, ಪದ್ಮಶ್ರೀ ದೊಡ್ಡ ರಂಗೆ ಗೌಡ, ವಾಣಿಜ್ಯ ಮಂಡಲಿ ಅಧ್ಯಕ್ಷ ಜಯರಾಜ್, ಸಾ ರಾ ಗೋವಿಂದು, ನಿರ್ಮಾಪಕ ಜ್ಯಾಕ್ ಮಂಜುನಾಥ್, ಡಿಂಗ್ರಿ ನಾಗರಾಜ್, ಸುಂದರ್ ರಾಜ್, ಟೆನ್ನಿಸ್ ಕೃಷ್ಣ, ಕೆ ಪಿ ನಂಜುಂಡಿ ಹಾಗೂ ಇನ್ನಿತರರು ಹಾಹರಿದ್ದರು.

‘ಶುಭಂ’ ಪುಸ್ತಕ ಅಮ್ಮ ಪ್ರಕಾಶನದಲ್ಲಿ ಹೊರಬಂದಿದ್ದು, ಗಣೇಶ್ ಕಾಸರಗೋಡು ಅವರ 40 ವರ್ಷಗಳ ಸಿನಿಮಾ ಸಹವಾಸ, ಪತ್ರಕರ್ತನಾಗಿ 900 ಪುಟಗಳಲ್ಲಿ ಮೂಡಿಬಂದಿದೆ.

ಪ್ರತಿಯೊಬ್ಬರ ಜೀವನ ಪುಸ್ತಕ ಬರೆಯುವಂತಾಗಲಿ – ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಮಾತಿಗೆ ನಿಂತರೆ ಅಲ್ಲಿ ಅರ್ಥ ಅಡಗಿರುತ್ತದೆ. ನಿನ್ನೆ ಬೆಂಗಳೂರು ಮೆಡಿಕಲ್ ಕಾಲೇಜು ಸಭಾಂಗಣಕ್ಕೆ ರಾತ್ರಿ 7.30 ಕ್ಕೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರ 25 ನೇ ಪುಸ್ತಕ ಶುಭಂ ಮೊದಲ ಪ್ರತಿಯನ್ನು ಸ್ವೀಕರಿಸುತ್ತಾ ಕಿಚ್ಚ ಸುದೀಪ್ ಪ್ರತಿಯೊಬ್ಬ ವ್ಯಕ್ತಿಯ ಜೀವನ ಪುಸ್ತಕ ರೂಪದಲ್ಲಿ ಧಾಖಲಾಗುವಂತೆ ಆಗಲಿ ಎಂದು ಅನಿಸಿಕೆ ವ್ಯಕ್ತ ಮಾಡಿದರು. ಗಣೇಶ್ ಕಾಸರಗೋಡು ಬರೆದಿರುವ ಪುಸ್ತಕದಲ್ಲಿ ಸಿನಿಮಾ ಪ್ರಪಂಚವೆ ಅಡಗಿದೆ ಎಂದು ಕೇಳಿದ್ದೇನೆ. ಅವರಿಗೆ ಬಹಳ ತಾಳ್ಮೆ ಇದ್ದರೆ ಈ ರೀತಿಯ ದೊಡ್ಡ ಪುಸ್ತಕ ಬರೆಯಲು ಸಾಧ್ಯ. ಒಂದೊಂದು ಕೈಯಲ್ಲಿ ಒಂದು ಪುಸ್ತಕ ಶುಭಂ ಹಿಡಿದರೆ ಜಿಮ್ಮಿಗೆ ಹೋಗಬೇಕಿಲ್ಲ. ನನಗಂತೂ ಓದುವ ತಾಳ್ಮೆ ಇಲ್ಲ ಎಂದು ಮೊದಲ ಪ್ರತಿಯನ್ನು ಕಿಚ್ಚ ಸುದೀಪ್ ದೊಡ್ಡು ಕೊಟ್ಟು ಖರೀದಿ ಮಾಡಿದರು. ಮತ್ತೆ ಅವರಿಗೆ ಮೀಸಲಾಗಿದ್ದ ಹಾರ ಹಾಗೂ ಶಾಲನ್ನು ಕಿಚ್ಚ ಸುದೀಪ್ ಸ್ವೀಕರಿಸಲಿಲ್ಲ.

ಶ್ರೀ ವಿಷ್ಣುವಿನ ನರಸಿಂಹಾವತಾರ ಯಕ್ಷಗಾನ ಸಂದರ್ಭವನ್ನು ನಾಟಕಕಾರ ಕೃಷ್ಣಮೂರ್ತಿ ಕವತಾರ್ ನಿರ್ದೇಶನದಲ್ಲಿ ಏರ್ಪಾಟು ಮಾಡಲಾಗಿತ್ತು. ಶ್ರೀ ನರಸಿಂಹ ಕಂಬದಿಂದ ಬಂದು ಹಿರಣ್ಯಕಶಿಪು ಸಂಹಾರ ಮಾಡಿ ಪುಸ್ತಕವನ್ನು ತೆಗೆಯುವ ಪ್ರಸಂಗ ಸಹ ಪ್ರಸ್ತುತ ಪಡಿಸಲಾಯಿತು.

ಮೊದಲ ಪ್ರತಿ ಕಿಚ್ಚ ಸುದೀಪ್ ಸ್ವೀಕಾರ ಮಾಡುವ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ರವಿ ಬೆಳೆಗೆರೆ, ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ತಾರಾ, ಶ್ರಾವಣ ಲಕ್ಷ್ಮಣ್ ಸಹ ವೇದಿಕೆಯಲ್ಲಿ ಇದ್ದರು.

ಪತ್ರಕರ್ತ ರವಿ ಬೆಳೆಗೆರೆ ನಾನು ಬೆಂಗಳೂರಿನಲ್ಲಿ ಏನಾದರೂ ಅಗಿದ್ದೇನೆ ಅಂದರೆ ಗಣೇಶ್ ಕಾಸರಗೋಡು ಕಾರಣ. ಅವರನ್ನು ದಶಕಗಳಿಂದ ಬಲ್ಲೆ. ಅವರ ಕೋಪ ಸಹ ನನಗೆ ಚನ್ನಾಗಿ ಪರಿಚಯವಿದೆ. ನಾನು ಮುಂದಿನ ದಿನಗಳಲ್ಲಿ ಗಣೇಶ್ ಕಾಸರಗೋಡು ಬಗ್ಗೆಯೇ ಪುಸ್ತಕ ಬರೆಯುತ್ತೇನೆ ಎಂದು ಹೇಳಿಕೊಂಡರು.

ಶುಭಂ ಪುಸ್ತಕ ಅಮ್ಮ ಪ್ರಕಾಶನದಲ್ಲಿ ಹೊರಬಂದಿದೆ. ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಆಚರಿಸಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2019 ಕಾರ್ಯಕ್ರಮದ ಅಂತ್ಯದಲ್ಲಿ ನಿನ್ನೆ ರಾತ್ರಿ ಶುಭಂ’...ಹಳೆಯ ಸಿನಿಮಾದ ಕೊನೆಯ ಫ್ರೇಮು ಬಿಡುಗಡೆ ಆಗಿದೆ. ಗಣೇಶ್ ಕಾಸರಗೋಡು ಅವರ 40 ವರ್ಷಗಳ ಸಿನಿಮಾ ಸಹವಾಸ ಪತ್ರಕರ್ತನಾಗಿ 900 ಪುಟಗಳಲ್ಲಿ ಮೂಡಿಬಂದಿದೆ.

ಹಿರಿಯ ನಿರ್ದೇಶಕರುಗಳಾದ ಎಸ್ ಕೆ ಭಾಗ್ವನ್ (ದೊರೈ ಭಾಗ್ವನ್ ಖ್ಯಾತಿ), ಸಿ ವಿ ಶಿವಶಂಕರ್, ಭಾರ್ಗವ, ಪದ್ಮಶ್ರೀ ದೊಡ್ಡ ರಂಗೆ ಗೌಡ, ವಾಣಿಜ್ಯ ಮಂಡಲಿ ಅಧ್ಯಕ್ಷ ಜಯರಾಜ್, ಸಾ ರಾ ಗೋವಿಂದು, ನಿರ್ಮಾಪಕ ಜ್ಯಾಕ್ ಮಂಜುನಾಥ್, ಡಿಂಗ್ರಿ ನಾಗರಾಜ್, ಸುಂದರ್ ರಾಜ್, ಟೆನ್ನಿಸ್ ಕೃಷ್ಣ, ಕೆ ಪಿ ನಂಜುಂಡಿ ಹಾಗೂ ಇನ್ನಿತರರು ಆಗಮಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.