ETV Bharat / sitara

ಮೀಟೂ ಪ್ರಕರಣದ ನಂತರ ಮತ್ತೆ ನಟನೆಯತ್ತ ಮುಖ ಮಾಡಿದ ಶ್ರುತಿ ಹರಿಹರನ್ - ನಟ-ನಿರ್ದೇಶಕ ಅರ್ಜುನ್ ಸರ್ಜಾ

ಶ್ರುತಿ ಹರಿಹರನ್ ಇದೀಗ ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ವಿವಾದದಿಂದ ತೆರೆಗೆ ಸರಿದಿದ್ದ ಶ್ರುತಿ ಇದೀಗ ಮತ್ತೆ ಬೆಳ್ಳಿತೆರೆ ಮೇಲೆ ಕಾಲಿಡುತ್ತಿದ್ದಾರೆ.

Shruthi Hariharan
ಶ್ರುತಿ ಹರಿಹರನ್
author img

By

Published : Sep 6, 2021, 11:23 AM IST

ಮೂರು ವರ್ಷಗಳ ಹಿಂದೆ, ನಟ-ನಿರ್ದೇಶಕ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಶ್ರುತಿ ಹರಿಹರನ್ ಇದೀಗ ಮತ್ತೆ ಬೆಳ್ಳಿತೆರೆಯತ್ತ ಮುಖ ಮಾಡಿದ್ದಾರೆ. ವಿಸ್ಮಯ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ತಮ್ಮ ಜತೆಗೆ ಅರ್ಜುನ್ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಶ್ರುತಿ ಆರೋಪಿಸಿದ್ದರು. ಆದರೆ, ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ ಸರ್ಜಾ, ಇದಕ್ಕೆ ಪ್ರತಿಯಾಗಿ ಐದು ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹಾಕಿದ್ದರು.

ಈ ಪ್ರಕರಣದಿಂದ ತಮಗೆ ಕನ್ನಡ ಚಿತ್ರಗಳಲ್ಲಿ ಅವಕಾಶಗಳು ಸಿಗುವುದು ಕಡಿಮೆಯಾಗಿದೆ ಎಂದು ಶ್ರುತಿ ಹೇಳಿಕೊಂಡಿದ್ದರು. ಆ ನಂತರ ಸದ್ದಿಲ್ಲದೆ ಮದುವೆಯಾಗಿದ್ದ ಶ್ರುತಿ, ಜಾನಕಿ ಎಂಬ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಈ ಮಧ್ಯೆ, ಅವರೊಂದು ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಇತ್ತಾದರೂ, ಆ ಚಿತ್ರ ಯಾವುದು ಎಂಬ ಕುರಿತು ಯಾರಿಗೂ ಸರಿಯಾದ ಮಾಹಿತಿ ಇರಲಿಲ್ಲ.

ಹೀಗಿರುವಾಗಲೇ, ಶ್ರುತಿ ಇದೀಗ ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ, ಧನಂಜಯ್ ಅಭಿನಯದ ರಾಟೆ ಚಿತ್ರದಲ್ಲಿ ಶ್ರುತಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ಧನಂಜಯ್​ಗೆ ಜೋಡಿಯಾಗಿ ಶ್ರುತಿ ಹರಿಹರನ್ ನಟಿಸಿದ್ದರು. ಈಗ ನಾಲ್ಕು ವರ್ಷಗಳ ನಂತರ ಧನಂಜಯ್ ಜೊತೆಗೆ ಹೆಡ್ ಬುಷ್ ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಮೊದಲಿಗೆ ಯೋಗಿ ಸಹ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆ ನಂತರ ವಸಿಷ್ಠ ಸಿಂಹ ಬಂದು ಸೇರಿಕೊಂಡರು. ಇದೀಗ ಶ್ರುತಿ ಹರಿಹರನ್ ಸಹ ತಂಡದಲ್ಲಿರುವ ಸುದ್ದಿ ಬಂದಿದೆ. ಇದು ಸ್ಯಾಂಪಲ್ ಅಷ್ಟೇ, ಮುಂದಿನ ದಿನಗಳಲ್ಲಿ ಇನ್ನೂ ಹಂತ ಹಂತವಾಗಿ ಹಲವು ನಟ - ನಟಿಯರು ಈ ಚಿತ್ರತಂಡವನ್ನು ಸೇರಿಕೊಂಡು, ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೆಡ್ ಬುಷ್ ಚಿತ್ರದಲ್ಲಿ ಧನಂಜಯ್, ಬೆಂಗಳೂರಿನ ಮಾಜಿ ಡಾನ್ ಎಂ.ಪಿ. ಜಯರಾಜ್ ಅವರ ಪಾತ್ರವನ್ನು ಮಾಡುತ್ತಿದ್ದಾರಂತೆ. 70 - 80ರ ದಶಕದ ಬೆಂಗಳೂರಿನ ಭೂಗತ ಜಗತ್ತಿನ ಕುರಿತಾದ ಈ ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ ಬರೆದರೆ, ಶೂನ್ಯ ನಿರ್ದೇಶನ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.