ತೆಲುಗಿನ 'ಇಷ್ಟಂ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿ ತೆಲುಗು, ತಮಿಳು, ಹಿಂದಿ, ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಶ್ರಿಯಾ ಶರಣ್ 'ಚಂದ್ರ' ಹಾಗೂ 'ಅರಸು' ಚಿತ್ರಗಳ ಮೂಲಕ ಕನ್ನಡದಲ್ಲೂ ಗುರುತಿಸಿಕೊಂಡಿದ್ದಾರೆ.
ಶ್ರಿಯಾ ಶರಣ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ನಟಿಸಿದ್ದ 'ಶಿವಾಜಿ' ಸಿನಿಮಾ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ರೂಪಾ ಅಯ್ಯರ್ ನಿರ್ದೇಶನದ 'ಚಂದ್ರ' ಸಿನಿಮಾದಲ್ಲಿ ಲವ್ಲಿಸ್ಟಾರ್ ಪ್ರೇಮ್ ಜೊತೆ ಹಾಗೂ 'ಅರಸು' ಸಿನಿಮಾದಲ್ಲಿ ಗೆಸ್ಟ್ ರೋಲ್ನಲ್ಲಿ ಶ್ರಿಯಾ ನಟಿಸಿದ್ದರು. ಕಳೆದ ವರ್ಷ ಮಾರ್ಚ್ನಲ್ಲಿ ರಷ್ಯನ್ ಬಾಯ್ಫ್ರೆಂಡ್ ಆ್ಯಂಡ್ರಿ ಕೊಸ್ಚಿವ್ ಕೈಹಿಡಿದಿರುವ ಶ್ರಿಯಾ ನಂತರ ಕೂಡಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಎನ್ಟಿಆರ್ ಬಯೋಪಿಕ್ 'ಕಥಾನಾಯಕುಡು' ಸಿನಿಮಾದಲ್ಲಿ ಕೂಡಾ ಶ್ರಿಯಾ ನಟಿಸಿದ್ದಾರೆ.
- " class="align-text-top noRightClick twitterSection" data="
">
ಇತ್ತೀಚೆಗೆ ಶ್ರಿಯಾ ಶರಣ್ ಬಿಡುವಿನ ಸಮಯದಲ್ಲಿ ತಮ್ಮ ಪತಿ ಜೊತೆ ರಷ್ಯಾದ ಮ್ಯೂಸಿಯಂವೊಂದಕ್ಕೆ ಭೇಟಿ ನೀಡಿದ್ದಾರೆ. ಸ್ವಿಮ್ಸೂಟ್ ಮೇಲೆ ಪಾರದರ್ಶಕವಾದ ಗೌನ್, ಸನ್ ಗ್ಲಾಸ್ ಧರಿಸಿರುವ ಶ್ರಿಯಾ ಫೋಟೊವೊಂದರ ಮುಂದೆ ವಿಚಿತ್ರವಾಗಿ ಡ್ಯಾನ್ಸ್ ಮಾಡಿದ್ದಾರೆ. ಆ ಫೋಟೋ ಮನುಷ್ಯನಿಂದ ಕೋತಿ ರೂಪಕ್ಕೆ ಬದಲಾಗುತ್ತಿರುತ್ತದೆ. ಪತಿ ಆ್ಯಂಡ್ರಿ ಶ್ರಿಯಾ ಡ್ಯಾನ್ಸನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಶ್ರಿಯಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ ಇದನ್ನು ನೋಡಿದ ಕೆಲವರು ನಕ್ಕು ಸುಮ್ಮನಾದರೆ ಮತ್ತೆ ಕೆಲವರು ಅಪಹಾಸ್ಯ ಮಾಡುತ್ತಾ ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಶ್ರಿಯಾ ಶರಣ್ ಈ ವಿಡಿಯೋ ನಗೆಪಾಟಲಿಗೀಡಾಗಿದೆ.