ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯದ ಭಜರಂಗಿ -2 ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ನೃತ್ಯ ನಿರ್ದೇಶಕ ಕಂ ನಿರ್ದೇಶಕ ಎ. ಹರ್ಷ ಹಾಗೂ ಶಿವರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದು.
-
ನೀವೆಲ್ಲರೂ ಕುತೂಹಲದಿಂದ ಕಾಯುತ್ತಿರುವ ಭಜರಂಗಿ 2 ಚಿತ್ರದ ನೆಕ್ಸ್ಟ್ ಲೆವೆಲ್ ಬೊಂಬಾಟ್ ಪೋಸ್ಟರ್ ತಪ್ಪದೇ ಶೇರ್ ಮಾಡಿ.#Bhajarangi2 #DrShivarajkumar #AHarsha #JayannaFilms #Bhajarangi2Poster #HappySankranthi pic.twitter.com/M6Rd9o0Jbr
— Dr.Shivarajkumar (@Shivarajkumar_) January 14, 2020 " class="align-text-top noRightClick twitterSection" data="
">ನೀವೆಲ್ಲರೂ ಕುತೂಹಲದಿಂದ ಕಾಯುತ್ತಿರುವ ಭಜರಂಗಿ 2 ಚಿತ್ರದ ನೆಕ್ಸ್ಟ್ ಲೆವೆಲ್ ಬೊಂಬಾಟ್ ಪೋಸ್ಟರ್ ತಪ್ಪದೇ ಶೇರ್ ಮಾಡಿ.#Bhajarangi2 #DrShivarajkumar #AHarsha #JayannaFilms #Bhajarangi2Poster #HappySankranthi pic.twitter.com/M6Rd9o0Jbr
— Dr.Shivarajkumar (@Shivarajkumar_) January 14, 2020ನೀವೆಲ್ಲರೂ ಕುತೂಹಲದಿಂದ ಕಾಯುತ್ತಿರುವ ಭಜರಂಗಿ 2 ಚಿತ್ರದ ನೆಕ್ಸ್ಟ್ ಲೆವೆಲ್ ಬೊಂಬಾಟ್ ಪೋಸ್ಟರ್ ತಪ್ಪದೇ ಶೇರ್ ಮಾಡಿ.#Bhajarangi2 #DrShivarajkumar #AHarsha #JayannaFilms #Bhajarangi2Poster #HappySankranthi pic.twitter.com/M6Rd9o0Jbr
— Dr.Shivarajkumar (@Shivarajkumar_) January 14, 2020
ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, 'ಎಲ್ಲಾ ಕಣ್ಣುಗಳಿಂದ ಪ್ರಪಂಚ ಕಂಡರೆ ಕೆಲವು ಕಣ್ಣುಗಳಲ್ಲೇ ಪ್ರಪಂಚ ಕಾಣಿಸಿಬಿಡುತ್ತೆ, ಕಾಣದ್ದು ಕಂಡುಹಿಡಿಯಲು, ಕಂಡದ್ದು ಕಾಣಲು, ಭಜರಂಗಿ ಮತ್ತೆ ಬರುತ್ತಿದ್ದಾನೆ' ಎಂದು ಕ್ಯಾಪ್ಷನ್ ಹಾಕಿದೆ. ‘ಭಜರಂಗಿ-2' ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ ಎನ್ನಲಾಗಿದೆ. ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್ನಲ್ಲಿ ಶಿವರಾಜ್ಕುಮಾರ್ ಅವರ ಎರಡೂ ಕಣ್ಣುಗಳನ್ನು ಹೈಲೈಟ್ ಮಾಡಲಾಗಿದ್ದು, ಚಾಣಕ್ಯನ ಪಾತ್ರಧಾರಿ ದೀಪ ಹಿಡಿದು ಶಿವರಾಜ್ಕುಮಾರ್ ಮುಖವನ್ನು ನೋಡುವ ದೃಶ್ಯವನ್ನು ಪೋಸ್ಟರ್ನಲ್ಲಿ ನೋಡಬಹುದು.
ಚಿತ್ರದ ಕಥೆ ಹಾಗೂ ಇನ್ನಿತರ ಪಾತ್ರಗಳ ಬಗ್ಗೆ ನಿದೇಶಕ ಎ. ಹರ್ಷ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಭಜರಂಗಿ ಮುಂದುವರೆದ ಕಥೆಯಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಭಜರಂಗಿ-2 ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಜಯಣ್ಣ ಹಾಗೂ ಭೋಗೇಂದ್ರ ಸಿನಿಮಾದ ನಿರ್ಮಾಪಕರು. ಚಿತ್ರದ ಪೋಸ್ಟರನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಶಿವಣ್ಣ 'ನೀವೆಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಭಜರಂಗಿ-2 ಚಿತ್ರದ ನೆಕ್ಸ್ಟ್ ಲೆವೆಲ್ ಬೊಂಬಾಟ್ ಪೋಸ್ಟರನ್ನು ತಪ್ಪದೆ ಶೇರ್ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.