ETV Bharat / sitara

ನಾಳೆ 'ಕವಲುದಾರಿ' ರಿಲೀಸ್​​​​​​​: ಪುನೀತ್​​​​ಗೆ ಶುಭ ಕೋರಿದ ಶಿವಣ್ಣ, ರಾಕಿ ಭಾಯ್​​​ - undefined

ಅನಂತ್​ನಾಗ್ ಹಾಗೂ ರಿಷಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಪಿಆರ್​ಕೆ ಪ್ರೊಡಕ್ಷನ್ ಬ್ಯಾನರ್​​​​ ಅಡಿ ತಯಾರಾದ ಮೊದಲ ಸಿನಿಮಾ 'ಕವಲುದಾರಿ' ನಾಳೆ ಬಿಡುಗಡೆಯಾಗುತ್ತಿದ್ದು, ಚಿತ್ರತಂಡಕ್ಕೆ ಎಲ್ಲರೂ ಶುಭ ಕೋರಿದ್ದಾರೆ.

ಶಿವರಾಜ್​​​ಕುಮಾರ್, ಯಶ್​
author img

By

Published : Apr 11, 2019, 11:45 PM IST

ಪುನೀತ್ ರಾಜ್​ಕುಮಾರ್ ಪಿಆರ್​​ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯಾರಾದ ಮೊದಲ ಸಿನಿಮಾ 'ಕವಲುದಾರಿ' ನಾಳೆ ಬಿಡುಗಡೆಯಾಗುತ್ತಿದ್ದು, ಚಿತ್ರಕ್ಕೆ ಸಾಕಷ್ಟು ಸೆಲಬ್ರಿಟಿಗಳು ಶುಭ ಕೋರಿದ್ದಾರೆ.

ಸಿನಿಮಾಗೆ ಶುಭ ಕೋರಿದ ಶಿವಣ್ಣ, ಯಶ್​, ವಿನಯ್​ ರಾಜ್​​ಕುಮಾರ್​​​

ಹಿರಿಯ ನಟ ಅನಂತ್​​​ನಾಗ್ ಹಾಗೂ 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ರಿಷಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಕವಲುದಾರಿ. ಈ ಸಿನಿಮಾ ಆರಂಭದಿಂದಲೇ ದೊಡ್ಡ ಸೆನ್ಸೇಷನ್ ಸೃಷ್ಟಿಸಿತ್ತು. ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಅನಂತ್​​ನಾಗ್ ನಟಿಸಿದ್ದಾರೆ. 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ಖ್ಯಾತಿಯ ಹೇಮಂತ್ ರಾವ್​​ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಪುನೀತ್ ಪತ್ನಿ ಅಶ್ವಿನಿ ಸಿನಿಮಾವನ್ನು ನಿರ್ಮಿಸಿದ್ದಾರೆ.

ಇನ್ನು ಪುನೀತ್ ಸಾಹಸಕ್ಕೆ ಅಣ್ಣ ಶಿವರಾಜ್​​ಕುಮಾರ್​​​​​​ ವಿಶ್ ಮಾಡಿದ್ದಾರೆ. 'ನಾಳೆ ಕವಲುದಾರಿ ಸಿನಿಮಾ ಬಿಡುಗಡೆಯಾಗುತ್ತಿದೆ. ಪುನೀತ್ ಬ್ಯಾನರ್​​ನ ಮೊದಲ ಸಿನಿಮಾ ಇದು. ನನಗೆ ಬಹಳ ಖುಷಿಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಹರಸಿ. ಇಡೀ ಚಿತ್ರತಂಡಕ್ಕೆ ಆಲ್​ ದಿ ಬೆಸ್ಟ್' ಎಂದು ಶಿವಣ್ಣ ವಿಶ್ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಕೂಡಾ ಸಿನಿಮಾಗೆ ವಿಶ್ ಮಾಡಿದ್ದಾರೆ. 'ಪಿಆರ್​​ಕೆ ಬ್ಯಾನರ್​​​ನಲ್ಲಿ ತಯಾರಾದ ಮೊದಲ ಸಿನಿಮಾ ಇದು. ನನಗೂ ಸಿನಿಮಾ ನೋಡಬೇಕು ಎನಿಸುತ್ತಿದೆ. ಅನಂತ್​ನಾಗ್ ಕೂಡಾ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ನೋಡಿ ಹರಸಿ' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.

ಇನ್ನು ರಾಘವೇಂದ್ರ ರಾಜ್​​​ಕುಮಾರ್​ ಪುತ್ರ ವಿನಯ್ ರಾಜ್​​ಕುಮಾರ್ ಕೂಡಾ ಚಿತ್ರತಂಡಕ್ಕೆ ವಿಶ್ ಮಾಡಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ.

ಪವರ್ ಸ್ಟಾರ್ ಪ್ರೊಡಕ್ಷನ್ ನ ಮೊದಲ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಮೆಚ್ಚುಗೆ!!

ಕನ್ನಡ ಚಿತ್ರರಂಗದಲ್ಲಿ  ಕ್ರೈಂ ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಇಂತಂಹದ್ದೇ ಸಬ್ಜೇಕ್ಟ್ ಇಟ್ಟು ಕವಲುದಾರಿ ಸಿನಿಮಾ ಬರ್ತಾ ಇದೆ..ಹಿರಿಯ ನಟ ಅನಂತ್​ನಾಗ್​ -ಆಪರೇಷನ್ ಆಲಮೇಲಮ್ಮ ಖ್ಯಾತಿಯ ರಿಷಿ ಮುಖ್ಯ ಪಾತ್ರದಲ್ಲಿ ನಟಿಸಿರೋ ಸಿನಿಮಾ ಕವಲುದಾರಿ, ಈ ಸಿನಿಮಾ ಆರಂಭದಿಂದಲೇ ದೊಡ್ಡ ಸೆನ್ಸೇಷನ್ ಸೃಷ್ಟಿಸಿತ್ತು.ಈ ಸಿನಿಮಾಕ್ಕೆ ಈಗ ದೊಡ್ಮನೆ ಮಗ ಶಿವರಾಜ್ ಕುಮಾರ್ ಅಪ್ಪು ಸಾಹಸಕ್ಕೆ
ಆಲ್ ದಿ ಬೆಸ್ಟ್ ತಿಳಿಸಿದ್ದಾರೆ.ಪವರ್ ಸ್ಟಾರ್ ಪ್ರೊಡಕ್ಷನ್​ನಲ್ಲಿ  ನಿರ್ಮಾಣ ಆಗಿರೋ ಪಿಆರ್​ಕೆ ಆಡಿಯೋ – ಪಿಆರ್​ಕೆ ಪ್ರೊಡಕ್ಷನ್​ನಿಂದ ಹೊಸ ಪ್ರತಿಭೆಗಳಿಗೆ ಬೆನ್ನು ತಟ್ಟಲು ಮುಂದಾಗಿದ್ದಾರೆ. ಪಿಆರ್​ಕೆ ಪ್ರೊಡಕ್ಷನ್​ನ ಮೊದಲ ಬತ್ತಳಿಕೆಯಾದ ಕವಲುದಾರಿ ನಾಳೆ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಅಪ್ಪು ನಿರ್ಮಾಣದ ಮೊದಲ ಪ್ರಯತ್ನವಾದ್ದರಿಂದ ಸಿನಿಮಾಗೆ ಶಿವರಾಜ್ ಕುಮಾರ್ ಹಾಗು ಮಗ ವಿನಯ್ ರಾಜ್ ಕುಮಾರ್ ಶುಭಾಶಯ ಹೇಳಿದ್ದಾರೆ.. ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಸಿನಿಮಾವನ್ನ ನಿರ್ದೇಶನ ಮಾಡಿದ್ದ, ಹೇಮಂತ್ ರಾವ್ ನಿರ್ದೇಶನದ ಎರಡನೇ ಸಿನಿಮಾ..ಹೀಗಾಗಿ ಸಹಜವಾಗಿ ಕವಲುದಾರಿ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ..

--
Sent from Fast notepad

Sent from my Samsung Galaxy smartphone.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.