ETV Bharat / sitara

ಬಂಡಿಯಪ್ಪ ಅವರೊಂದಿಗೆ ಕರಗ ಹೊರಲಿದ್ದಾರಂತೆ ಶಿವರಾಜ್​​ಕುಮಾರ್ - Chandrashekhar bandiyappa new movie

ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದಲ್ಲಿ 'ವೈರಮುಡಿ' ಎಂಬ ಚಿತ್ರದಲ್ಲಿ ಶಿವಣ್ಣ ನಟಿಸಲಿದ್ದಾರೆ ಎನ್ನಲಾಗಿತ್ತು. ಈ ಚಿತ್ರದೊಂದಿಗೆ 'ಕರಗ' ಎಂಬ ಹೊಸ ಚಿತ್ರ ಕೂಡಾ ಘೋಷಣೆಯಾಗಿದೆ. ಸದ್ಯಕ್ಕೆ ಶಿವರಾಜ್​ಕುಮಾರ್ ಭಜರಂಗಿ 2 ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ.

Shivarajkumar in Karaga movie
ಶಿವರಾಜ್​​ಕುಮಾರ್
author img

By

Published : Sep 29, 2020, 9:29 AM IST

ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಕರಗ ಹೊರಲಿದ್ದಾರೆ. ಹೌದಾ, ಈ ಸಮಯದಲ್ಲಿ ಕರಗ ಹೊರಲಿದ್ದಾರಾ ಎಂದು ಹುಬ್ಬೇರಿಸಬೇಡಿ. 'ಕರಗ' ಎಂಬ ಸಿನಿಮಾದಲ್ಲಿ ಶಿವರಾಜ್​ಕುಮಾರ್ ನಟಿಸಲಿದ್ದು ಚಂದ್ರಶೇಖರ್ ಬಂಡಿಯಪ್ಪ ಈ ಚಿತ್ರವನ್ನು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ.

Shivarajkumar in Karaga movie
ಶಿವರಾಜ್​​ಕುಮಾರ್

ಈ ಚಿತ್ರ ಬಹಳ ವಿಭಿನ್ನವಾಗಿ ಮೂಡಿಬರಲಿದೆ ಎನ್ನುತ್ತಾರೆ ಮಂಡ್ಯದ ಚಂದ್ರಶೇಖರ್ ಬಂಡಿಯಪ್ಪ. ಇವರು 'ರಥಾವರ' ಚಿತ್ರದ ಮೂಲಕ ಹೆಸರಾದವರು. ನಂತರ 'ತಾರಾಕಾಸುರ' ಚಿತ್ರವನ್ನು ನಿರ್ದೇಶಿಸಿ ನಿರ್ಮಾಪಕ ನರಸಿಂಹಲು ಪುತ್ರ ವೈಭವ್​​​​​​ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಈ ಎರಡೂ ಸಿನಿಮಾಗಳೂ ಯಶಸ್ಸು ಕಂಡವು. ಆದರೆ ನಂತರ ಅವರು ನಿರ್ದೇಶಿಸಿದ 'ಆನೆ ಪಟಾಕಿ' ಬಾಕ್ಸ್ ಆಫೀಸಿನಲ್ಲಿ ಸಿಡಿಯಲಿಲ್ಲ.

Shivarajkumar in Karaga movie
ಚಂದ್ರಶೇಖರ್ ಬಂಡಿಯಪ್ಪ

ಈ ಬಾರಿ ಜುಲೈ 12 ಶಿವರಾಜ್​ಕುಮಾರ್ ಹುಟ್ಟುಹಬ್ಬದಂದು ಬಂಡಿಯಪ್ಪ ಶಿವರಾಜ್​​​ಕುಮಾರ್ ಜೊತೆ 'ವೈರಮುಡಿ' ಎಂಬ ಚಿತ್ರ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಇದೀಗ ಈ ಚಿತ್ರದೊಂದಿಗೆ 'ಕರಗ' ಎಂಬ ಹೊಸ ಚಿತ್ರವನ್ನು ಕೂಡಾ ಚಂದ್ರಶೇಖರ್ ಬಂಡಿಯಪ್ಪ ಮಾಡಲಿದ್ದಾರಂತೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ 'ಚೌಕಿದಾರ' ಎಂಬ ಚಿತ್ರವನ್ನು ಕೂಡಾ ಚಂದ್ರಶೇಖರ್ ಮಾಡಲಿದ್ದಾರೆ ಎನ್ನಲಾಗಿದೆ.

Shivarajkumar in Karaga movie
'ಕರಗ'ದೊಂದಿಗೆ 'ವೈರಮಡಿ' ಚಿತ್ರದಲ್ಲೂ ನಟಿಸಲಿರುವ ಶಿವಣ್ಣ

ಚಂದ್ರಶೇಖರ್ ಸಿನಿಮಾ ಜೊತೆಗೆ ವ್ಯವಸಾಯ ಕೂಡಾ ಮಾಡುತ್ತಾರೆ. ಅವರಿಗೆ ಸುಮಾರು 20 ಎಕರೆ ಭೂಮಿ ಇದ್ದು ನಾನು ಸಿನಿಮಾವನ್ನು ನಂಬಿ ಜೀವನ ಮಾಡುತ್ತಿಲ್ಲ, ನನಗೆ ಮೊದಲಿನಿಂದಲೂ ಭೂಮಿ ತಾಯಿ ಸೇವೆ ಮಾಡುವುದು ಎಂದರೆ ಬಹಳ ಇಷ್ಟ ಎನ್ನುತ್ತಾರೆ ಚಂದ್ರಶೇಖರ್ ಬಂಡಿಯಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.