ETV Bharat / sitara

ಕನ್ನಡ ಚಿತ್ರರಂಗದ ನಾಯಕನಾಗಿ ಹೊಣೆ‌ ಹೊತ್ತ ಶಿವರಾಜ್​​​​​ಕುಮಾರ್ - Kannada film industry

ರೆಬಲ್ ಸ್ಟಾರ್ ಅಂಬರೀಶ್ ನಿಧನರಾದ ನಂತರ ಕನ್ನಡ ಚಿತ್ರರಂಗ ಸೂಕ್ತ ನಾಯಕನಿಗೆ ಜವಾಬ್ದಾರಿ ನೀಡಲು ನಿರ್ಧರಿಸಿತ್ತು. ಅದರಂತೆ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಹೆಗಲಿಗೆ ಈ ಜವಾಬ್ದಾರಿ ಬಿದ್ದಿದ್ದು ಇನ್ನುಮುಂದೆ ಶಿವಣ್ಣ ಚಿತ್ರರಂಗದ ಹಿರಿಯಣ್ಣನಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Kannada film industry
ಶಿವರಾಜ್​​​​​ಕುಮಾರ್
author img

By

Published : Jul 24, 2020, 3:40 PM IST

ಡಾ. ರಾಜ್​​ಕುಮಾರ್​​​​​​​​​​​​​​​​​ ಬಳಿಕ ಕನ್ನಡ ಚಿತ್ರರಂಗದಲ್ಲಿ ಹಿರಿಯಣ್ಣನಾಗಿ ರೆಬಲ್ ಸ್ಟಾರ್ ಅಂಬರೀಶ್​​​​​ , ಚಿತ್ರರಂಗದ ಸಮಸ್ಯೆಗಳನ್ನು ಬಗೆ ಹರಿಸುತ್ತಿದ್ರು. ಆದರೆ ಅಂಬರೀಶ್ ಅಗಲಿಕೆಯಿಂದ ಕನ್ನಡ ಚಿತ್ರರಂಗದಲ್ಲಿ ಯಾರಿಗೆ ನಾಯಕತ್ವದ ಹೊಣೆ ನೀಡಬೇಕು ಎಂಬ ಚರ್ಚೆ ನಡೆಯುತ್ತಲೇ ಇತ್ತು. ಇದೀಗ ಈ ಚರ್ಚೆಗೆ ಫುಲ್ ಸ್ಟಾಪ್ ಸಿಕ್ಕಿದೆ.

ಚಿತ್ರರಂಗದ ಜವಾಬ್ದಾರಿ ಹೊತ್ತ ಶಿವರಾಜ್​ಕುಮಾರ್​​

ಡಾ. ರಾಜ್​ಕುಮಾರ್ ಪುತ್ರ, ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಸ್ಯಾಂಡಲ್​​ವುಡ್​ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ, ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ, ನಾಗವಾರದಲ್ಲಿರುವ ಶಿವರಾಜ್​​​​​​​​​​ಕುಮಾರ್ ನಿವಾಸದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಟ ಸಾಧು ಕೋಕಿಲ, ನಿರ್ಮಾಪಕರಾದ ಸಾ.ರಾ. ಗೋವಿಂದ್, ಜಯಣ್ಣ, ಸೂರಪ್ಪ ಬಾಬು, ಚಿನ್ನೇಗೌಡ, ಭೋಗೇಂದ್ರ, ರಾಮು, ಭಾ.ಮಾ.ಹರೀಶ್, ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್​​​ ಸೇರಿದಂತೆ ಚಿತ್ರರಂಗದ ಬಹುತೇಕ ಎಲ್ಲಾ ಗಣ್ಯರು ಹಾಜರಿದ್ದರು.

Kannada film industry
ಶಿವಣ್ಣ ನಿವಾಸದಲ್ಲಿ ಸಭೆ

ಈ ಸಭೆಯಲ್ಲಿ ಚಿತ್ರರಂಗದ ನಾಯಕರಾಗಿ ಚಿತ್ರರಂಗವನ್ನು ಮುನ್ನಡೆಸುವಂತೆ ಮನವಿ ಮಾಡಲಾಯಿತು. ಎಲ್ಲರ ಮನವಿ ಮೇರೆಗೆ ಶಿವಣ್ಣ ಕೂಡಾ ಇದಕ್ಕೆ ಒಪ್ಪಿಕೊಂಡರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್​ಕುಮಾರ್, ಚಿತ್ರರಂಗದ ಎಲ್ಲಾ ವಿಭಾಗಗಳ ಗಣ್ಯರು ಜೊತೆ ಸೇರಿರುವುದು ಖುಷಿಯ ವಿಚಾರ. ನಿಮ್ಮೆಲರ ಸಹಕಾರದಿಂದ ಇನ್ಮುಂದೆ ನಾಯಕತ್ವದ ಹೊಣೆ ವಹಿಸಿಕೊಳ್ಳುತ್ತೇನೆ. ಇನ್ಮುಂದೆ ನಾವೆಲ್ಲರೂ ಒಟ್ಟಾಗಿ ಹೋಗೋಣ,ಕನ್ನಡ ಚಿತ್ರರಂಗವನ್ನು ಮಾದರಿಯನ್ನಾಗಿ ಮಾಡೋಣ ಎಂದು ಹೇಳಿದರು.

Kannada film industry
ಶಿವರಾಜ್​​​​​ಕುಮಾರ್

ಸದ್ಯಕ್ಕೆ ಕೊರೊನಾ ಹಾವಳಿಯಿಂದ ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಬಹಳಷ್ಟು ಸಮಸ್ಯೆಗಳಿವೆ. ಇದರ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳೋಣ ಎಂದು ಶಿವರಾಜ್​ಕುಮಾರ್ ಹೇಳಿದರು. ಇನ್ನು ಕೆಲ ದಿನಗಳಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ಒಂದು ಸಭೆ ಕರೆದು, ಶಿವರಾಜ್​​​ಕುಮಾರ್ ನೇತೃತ್ವದಲ್ಲಿ ಚಿತ್ರಮಂದಿರಗಳ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ವಾಣಿಜ್ಯ ಮಂಡಳಿ ನಿರ್ಧರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.