ETV Bharat / sitara

ಡೈರೆಕ್ಟರ್ ಟೋಪಿ ತೊಟ್ಟು 'ವಿಂಡೋ ಸೀಟ್' ನಲ್ಲಿ ಕುಳಿತ ಶೀತಲ್ ಶೆಟ್ಟಿ..! - ನಿರೂಪ್ ಭಂಡಾರಿ ಹೊಸ ಸಿನಿಮಾ

ಪತ್ರಕರ್ತೆ, ನಿರೂಪಕಿ, ನಟಿ, ಮಾಡೆಲ್ ಆಗಿ ಗುರುತಿಸಿಕೊಂಡಿರುವ ಶೀತಲ್ ಶೆಟ್ಟಿ ಇದೀಗ ನಿರ್ದೇಶಕಿಯಾಗಿ ಕೂಡಾ ಹೆಸರು ಮಾಡಲು ಹೊರಟಿದ್ದಾರೆ. 'ವಿಂಡೋ ಸೀಟ್​​' ಎಂಬ ಚಿತ್ರವನ್ನು ಶೀತಲ್ ನಿರ್ದೇಶಿಸಿದ್ದು ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದಾರೆ.

Sheetal shetty
ಶೀತಲ್ ಶೆಟ್ಟಿ
author img

By

Published : Jun 22, 2020, 2:38 PM IST

ಸುದ್ದಿ ವಾಚಕಿಯಾಗಿ ಕೆಲಸ ಆರಂಭಿಸಿದ್ದ ಶೀತಲ್ ಶೆಟ್ಟಿ ನಂತರ ಸಿನಿಮಾಗಳಲ್ಲಿ ಕೂಡಾ ನಟಿಸಲು ಆರಂಭಿಸಿದರು. ಬಿಗ್​​​​​​​​​​​​​ಬಾಸ್​​​​ಗೆ ಕೂಡಾ ಹೋಗಿ ಬಂದ್ರು. ಇದೀಗ ಅವರು ನಿರೂಪ್ ಭಂಡಾರಿ ಜೊತೆ 'ವಿಂಡೋ ಸೀಟ್​​'ನಲ್ಲಿ ಕೂತಿದ್ಧಾರೆ.

ಶೀತಲ್ ಶೆಟ್ಟಿ ಎಲ್ಲಿಗಾದರೂ ಟ್ರಿಪ್ ಹೋಗ್ತಿರಬಹುದು ಎಂದುಕೊಳ್ಳಬೇಡಿ. 'ವಿಂಡೋ ಸೀಟ್' ಎನ್ನುವುದು ಸಿನಿಮಾ ಹೆಸರು. ಶೀತಲ್ ಶೆಟ್ಟಿ ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ವಿಶೇಷ ಎಂದರೆ ಈಗ ಅವರು ನಿರ್ದೇಶನಕ್ಕೂ ಕೈ ಹಾಕಿದ್ಧಾರೆ. 'ವಿಂಡೋ ಸೀಟ್' ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರೊಮ್ಯಾಂಟಿಕ್​, ಥ್ರಿಲ್ಲರ್ ಕಥೆ ಹೊಂದಿರುವ 'ವಿಂಡೋ ಸೀಟ್' ಚಿತ್ರಕ್ಕೆ ಶೀತಲ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿ ನಿರ್ದೇಶನಕ್ಕೆ ಇಳಿದಿದ್ದಾರೆ. 'ರಂಗಿ ತರಂಗ' ಖ್ಯಾತಿಯ ನಿರೂಪ್ ಭಂಡಾರಿ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು. ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗಾರ್ ನಾಯಕಿಯರಾಗಿ ನಟಿಸಿದ್ದಾರೆ.

window seat
ನಿರೂಪ್ ಭಂಡಾರಿ

ಈಗಾಗಲೇ ಈ ಚಿತ್ರದ ಶೂಟಿಂಗ್ ಮುಗಿದಿದ್ದು ಸದ್ಯಕ್ಕೆ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದೆ. ಮಲೆನಾಡಿನ ಸುಂದರ ಪ್ರದೇಶಗಳಲ್ಲಿ ಸಿನಿಮಾ ಶೂಟಿಂಗ್ ಮಾಡಲಾಗಿದ್ದು, ಚಿತ್ರಕ್ಕೆ ನಿರ್ಮಾಪಕ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದು, ಬಾಲಿವುಡ್​​​ನ 'ಥಗ್ಸ್ ಆಪ್ ಇಂಡಿಯಾ' ಚಿತ್ರದಲ್ಲಿಅಸೋಸಿಯೇಟ್​​​​​​​​​​ ಕ್ಯಾಮರಾ ಮ್ಯಾನ್ ಆಗಿ ಕೆಲಸ ಮಾಡಿದ್ದ ವಿಘ್ನೇಶ್ ರಾಜ್, ಈ ಚಿತ್ರಕ್ಕೂ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ.

ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು ಖಳನಟನಾಗಿ ರವಿಶಂಕರ್ ನಟಿಸಿದ್ದರೆ ಉಳಿದಂತೆ ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ್ ,ಲೇಖಾ ಹಾಗೂ ಇನ್ನಿತರರು ನಟಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.