ETV Bharat / sitara

ಡಾ. ರಾಜ್​ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಶಾಲಿನಿ ಹಾಗೂ ತಂಡ

author img

By

Published : Apr 24, 2020, 10:53 PM IST

ವರನಟ ಡಾ. ರಾಜ್​ಕುಮಾರ್ ಹುಟ್ಟುಹಬ್ಬಕ್ಕೆ ಕಿರುತೆರೆ ಹಾಗೂ ಹಿರಿತೆರೆ ನಟ-ನಟಿಯರು ಸೇರಿ ರಾಜ್​ಕುಮಾರ್ ಅಭಿನಯದ ಚಿತ್ರಗಳ ಹಾಡು ಹಾಗೂ ಡೈಲಾಗ್ ಹೇಳುವ ಮೂಲಕ ಬಹಳ ವಿಶೇಷವಾಗಿ ಆಚರಿಸಿದ್ದಾರೆ.

Rajkumar birthday
ಡಾ. ರಾಜ್​ ಕುಮಾರ್ ಹುಟ್ಟುಹಬ್ಬ

ರಾಜ್ಯದೆಲ್ಲೆಡೆ ಇಂದು ಅಭಿಮಾನಿಗಳು ಡಾ. ರಾಜ್​ ಕುಮಾರ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ಕೆಲವೆಡೆ ಅಣ್ಣಾವ್ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಕ್ಕಳ ಕೈಯ್ಯಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರೆ ಮತ್ತೆ ಕೆಲವೆಡೆ ಬಡವರಿಗೆ ಹಣ್ಣು, ಹಂಫಲು, ಆಹಾರ ಪದಾರ್ಥಗಳನ್ನು ನೀಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಲಾಗಿದೆ.

ಕಿರುತೆರೆ ಹಾಗೂ ಬೆಳ್ಳಿತೆರೆ ನಟ-ನಟಿಯರು ಕೂಡಾ ಇಂದು ತಮ್ಮ ತಮ್ಮ ಮನೆಗಳಲ್ಲೇ ವರನಟನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಈ ನಟ-ನಟಿಯರು ಒಬ್ಬರಿಂದ ಒಬ್ಬರಿಗೆ ಮೈಕ್ ಪಾಸ್ ಮಾಡುವ ಕಾನ್ಸೆಪ್ಟ್ ಮೂಲಕ ಅಣ್ಣಾವ್ರ ಸಿನಿಮಾದ ಹಾಡುಗಳು, ಡೈಲಾಗ್​​​ಗಳನ್ನು ಹೇಳಿದ್ದಾರೆ. ಆದರೆ ಇವರೆಲ್ಲಾ ತಮ್ಮ ತಮ್ಮ ಮನೆಯಲ್ಲಿದ್ದುಕೊಂಡೇ ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ನಟಿ, ನಿರೂಪಕಿ ಶಾಲಿನಿ ಅವರ ಕಾನ್ಸೆಪ್ಟ್ ಇದು. ಶಾಲಿನಿ ತಮ್ಮ ಇನ್ಸ್​​​ಟಾಗ್ರಾಮ್​​​ನಲ್ಲಿ ಈ ವಿಡಿಯೋ ಷೇರ್ ಮಾಡಿಕೊಂಡಿದ್ದಾರೆ. ಮೊದಲು ಶಾಲಿನಿ, ರಾಜ್​ ಕುಮಾರ್ ಅಭಿನಯದ 'ಆಪರೇಷನ್ ಡೈಮಂಡ್ ರಾಕೆಟ್ ' ಚಿತ್ರದ 'ಇಫ್​ ಯು ಕಮ್ ಟುಡೆ ' ಹಾಡನ್ನು ಹಾಡಿ ನಂತರ ಮೈಕನ್ನು ಸೌರಭ್ ಕುಲಕರ್ಣಿಗೆ ಪಾಸ್ ಮಾಡಿದ್ದಾರೆ. ಸೌರಭ್, 'ಬಬ್ರುವಾಹನ ' ಚಿತ್ರದ ಖ್ಯಾತ ಡೈಲಾಗ್​​​ವೊಂದನ್ನು ಹೇಳುವ ಮೂಲಕ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

ಸೌರಭ್ ನಂತರ ನೆನಪಿರಲಿ ಪೇಮ್ ಮೈಕ್ ಪಡೆದು 'ಗಿರಿಕನ್ಯೆ' ಚಿತ್ರದ 'ಏನೆಂದು ನಾ ಹೇಳಲಿ' ಹಾಡನ್ನು ಹಾಡಿದ್ದಾರೆ. ನಂತರ ಶ್ವೇತಾ ಚಂಗಪ್ಪ, ಹಿತಾ ಕಿರಣ್, ಅನುಪಮಾ ಗೌಡ, ಸಂಗೀತ ರವಿಕಿರಣ್​​​​​​​​​​​​​​​​​​​​​​​​​​​​​​​, ರ್‍ಯಾಪರ್ ಅಲೋಕ್, ಅಕುಲ್ ಬಾಲಾಜಿ, ಆ್ಯಂಕರ್ ಅನುಶ್ರೀ, ವಿಜಯ್ ಸೂರ್ಯ, ಕೀರ್ತಿ ಶಂಕರಘಟ್ಟ, ಸುಧಾರಾಣಿ ಹಾಗೂ ಕೊನೆಗೆ ಮಿಮಿಕ್ರಿ ದಯಾನಂದ್ ಅಣ್ಣಾವ್ರ ಹಾಡು, ಡೈಲಾಗ್​​​ಗಳನ್ನು ಹೇಳಿದ್ದಾರೆ. ಸುಧಾರಾಣಿ ತಾವೇ ಅಣ್ಣಾವ್ರ ಜೊತೆ ನಟಿಸಿರುವ 'ದೇವತಾ ಮನುಷ್ಯ' ಚಿತ್ರದ 'ನಿನ್ನಂಥ ಅಪ್ಪ ಇಲ್ಲ' ಹಾಡನ್ನು ಹೇಳಿಕೊಂಡು ಹೆಜ್ಜೆ ಹಾಕುವ ಮೂಲಕ ವರನಟನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.