Bajaj Auto Launches Two New Bikes: ಪ್ರಮುಖ ಆಟೋಮೊಬೈಲ್ ಕಂಪನಿ ಬಜಾಜ್ ಆಟೋ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆರಡು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಬ್ರಿಟಿಷ್ ಮೋಟಾರ್ ಸೈಕಲ್ ಬ್ರ್ಯಾಂಡ್ ಟ್ರಯಂಫ್ ಜೊತೆಗೆ ಟ್ರಯಂಫ್ ಸ್ಪೀಡ್ 400 ಮತ್ತು ಸ್ಕ್ರ್ಯಾಂಬ್ಲರ್ 400X ಅನ್ನು ಬಿಡುಗಡೆ ಮಾಡಿದ್ದ ಬಜಾಜ್, ಇತ್ತೀಚೆಗೆ ಇನ್ನೆರಡು ಬೈಕ್‌ಗಳನ್ನು ಮಾರುಕಟ್ಟೆಗೆ ತಂದಿದೆ. ಟ್ರಯಂಫ್ ಅವುಗಳನ್ನು ಸ್ಪೀಡ್ T4 ಮತ್ತು ಸ್ಪೀಡ್ 400 MY25 ಎಂದು ಹೆಸರಿಸಿದೆ. ಭಾರತದಲ್ಲಿ ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗದಲ್ಲಿ ತನ್ನ ವ್ಯಾಪಾರ ವಿಸ್ತರಿಸುವ ಭಾಗವಾಗಿ ಬಜಾಜ್ ಆಟೋ ಹೊಸ ಬೈಕ್‌ಗಳನ್ನು ರಿಲೀಸ್ ಮಾಡುತ್ತಿದೆ.
Triumph speed T4 Features:
ಎಂಜಿನ್: 400cc
ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಯುನಿಟ್
ಪವರ್: 7,000 rpm ನಲ್ಲಿ 30.6 bhp
ಟಾರ್ಕ್: 5,000 rpm ನಲ್ಲಿ 36Nm
ಗರಿಷ್ಠ ವೇಗ: 135 kmph
ಎಲ್ಇಡಿ ಲೈಟಿಂಗ್ ಸಿಸ್ಟಮ್
ಡಿಜಿಟಲ್ ಡಿಸ್ಪ್ಲೇ
ಬ್ಲೂಟೂತ್ ಕನೆಕ್ಟಿವಿಟಿ
ಟ್ರಾಕ್ಷನ್ ಕಂಟ್ರೋಲ್
ಬಣ್ಣ ಆಯ್ಕೆಗಳು: ಟ್ರಯಂಫ್ ಸ್ಪೀಡ್ T4 ಬೈಕ್ ಮಾರುಕಟ್ಟೆಯಲ್ಲಿ ಮೂರು ಬಣ್ಣಗಳಲ್ಲಿ ಲಭ್ಯವಿದೆ.
ಟ್ರಯಂಫ್ ಸ್ಪೀಡ್ T4 ಬೆಲೆ: ₹2.17 ಲಕ್ಷ (ಎಕ್ಸ್ ಶೋ ರೂಂ)
Triumph Speed 400 MY25 Features:
ಎಂಜಿನ್: 398cc
ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್
ಪವರ್: 8,000 rpm ನಲ್ಲಿ 39 bhp
ಟಾರ್ಕ್: 6,500 rpm ನಲ್ಲಿ 37.5 Nm
ಬಣ್ಣ ಆಯ್ಕೆಗಳು: ಟ್ರಯಂಫ್ ಸ್ಪೀಡ್ 400 MY25 ಬೈಕ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.
ಡ್ಯುಯಲ್ ಎಬಿಎಸ್
ಟ್ರಯಂಫ್ ಸ್ಪೀಡ್ 400 MY25 ಬೆಲೆ: ₹2.40 ಲಕ್ಷ (ಎಕ್ಸ್ ಶೋ ರೂಂ)
ಯಾವ ಬೈಕ್ಗಳಿಗೆ ಪೈಪೋಟಿ?: ಬಜಾಜ್-ಟ್ರಯಂಫ್ ಸಹಭಾಗಿತ್ವದಲ್ಲಿ ಬಂದಿರುವ ಈ ಎರಡು ಹೊಸ ಬೈಕ್‌ಗಳು ಜಾವಾ 42ಎಫ್‌ಜೆ, ರಾಯಲ್ ಎನ್‌ಫೀಲ್ಡ್ ಹಂಟರ್ 350 ಮತ್ತು ಹೀರೋ ಮೇವರಿಕ್ 440 ಮಾದರಿಗಳಿಗೆ ಕಠಿಣ ಪೈಪೋಟಿ ನೀಡಲಿವೆ.
ಇದನ್ನೂ ಓದಿ: ಲೈಟ್ ಕಮರ್ಷಿಯಲ್ ವಿಭಾಗಕ್ಕೆ ಲಗ್ಗೆಯಿಟ್ಟ ಮಹೀಂದ್ರಾ ವೀರೊ: ಇದರ ಬೆಲೆ ಎಷ್ಟು ಗೊತ್ತಾ!? - Mahindra Veero LCV Launched