ಶಕೀಲಾ ಚಿತ್ರ ಟೈಟಲ್ ಹಾಗೂ ಟ್ರೇಲರ್ನಿಂದಲೇ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿದ ಚಿತ್ರ. ಕನ್ನಡದ ಸ್ಟೈಲಿಷ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರ್ದೇಶನದ, ರೀಚಾ ಚಡ್ಡಾ ಹಾಗೂ ಪಂಕಜ್ ತ್ರಿಪಾಠಿ ಮುಖ್ಯ ಭೂಮಿಕೆಯಲ್ಲಿರೋ ಶಕೀಲಾ ಸಿನಿಮಾ ಕರ್ನಾಟಕ ಸೇರಿದಂತೆ ದೇಶದ್ಯಾಂತ 2000 ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ.
ಇದನ್ನೂ ಓದಿ : Photos: ಕ್ರಿಸ್‌ಮಸ್ ಸಂಭ್ರಮದಲ್ಲಿ ಮಿಂದೆದ್ದ ನಟ ರಾಮ್ಚರಣ್ ಕುಟುಂಬ
90ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ತನ್ನದೇ ಛಾಪು ಮೂಡಿಸಿದ ಸೌತ್ ನಟಿ ಶಕೀಲಾ ಜೀವನಧಾರಿತ ಕಥೆ ಆಧರಿಸಿರುವ ಶಕೀಲಾ ಸಿನಿಮಾವನ್ನು ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಗಾಂಧಿನಗರದ ಕೆ.ಜಿ. ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಶಕೀಲಾ ರಿಲೀಸ್ ಆಗಿದೆ. ಆದರೆ ಕೊರೊನಾ ಭಯಕ್ಕೆ ಸಿನಿಮಾ ಪ್ರೇಕ್ಷಕರು ಮಾತ್ರ ಥಿಯೇಟರ್ ಕಡೆ ಬರುವ ಮನಸ್ಸು ಮಾಡಿಲ್ಲ.
ಅದರಲ್ಲಿ ಸಿನಿಮಾ ನೋಡಿದ ಕೆಲ ಪ್ರೇಕ್ಷಕರು ಸಿನಿಮಾ ಚೆನ್ನಾಗಿದೆ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಶಕೀಲಾ ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ಶಕೀಲಾ ಸಿನಿಮಾ ಮಾಡಿದ ಹೆಮ್ಮೆ ಇದೆ ಅಂತಾ ಹೇಳಿದರು. ಇನ್ನು ರೀಚಾ ಚಡ್ಡಾ ಶಕೀಲಾ ಪಾತ್ರದಲ್ಲಿ ಮಿಂಚಿದ್ರೆ, ಸ್ಟಾರ್ ಹೀರೋ ಸಲೀಂ ಭಾಯ್ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ಕಾಣಿಸಿಕೊಂಡಿದ್ದಾರೆ.