‘ಸೇವಂತಿ’ ಜನಪ್ರಿಯ ತಮಿಳು ಧಾರಾವಾಹಿ 'ರೋಜಾ'ದ ರಿಮೇಕ್ ಎಂದು ಹೇಳಲಾಗಿದ್ದರೂ, ಕನ್ನಡದಲ್ಲಿ ಆಸಕ್ತಿದಾಯಕ ಕಥೆ ಮತ್ತು ಪಾತ್ರವರ್ಗ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಮೂಲಕ ಈ ಧಾರಾವಾಹಿ ಇದೀಗ 600 ಸಂಚಿಕೆಗಳನ್ನು ಪೂರ್ಣಗೊಳಿಸಿದೆ.
ಈ ಧಾರಾವಾಹಿಯ ಮೂಲಕ ಕನ್ನಡದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಕಿರುತೆರೆಗೆ ಪುನರಾಗಮನ ಮಾಡಿದರೂ ಕೆಲವು ದಿನಗಳ ನಂತರ ಅವರ ಪಾತ್ರದಲ್ಲಿ ಆಶಾಲತಾ ನಟಿಸಿದರು. ಮೊದಲಿಗೆ ಈ ಧಾರಾವಾಹಿಯಲ್ಲಿ ಪಲ್ಲವಿ ಗೌಡ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ ಇವರು ಹಿರಿತೆರೆಯುತ್ತ ಗಮನಹರಿಸಲು ಧಾರಾವಾಹಿಯಿಂದ ಹೊರಗುಳಿದರು. ಮತ್ತೆ ಅವರ ಸ್ಥಾನಕ್ಕೆ ನಟಿ ಮೇಘನಾ ಖುಷಿ ಬಂದರು. ಆದರೆ ಅಂತಿಮವಾಗಿ ದೀಪಿಕಾ ಧಾರಾವಾಹಿಯಲ್ಲಿ ನಾಯಕಿ ಪಾತ್ರ ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ, ಸೇವಂತಿ ಧಾರಾವಾಹಿಯಲ್ಲಿ ದೀಪಿಕಾ ‘ಸೇವಂತಿ’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಶಿಶಿರ್ ಶಾಸ್ತ್ರಿ ನಾಯಕನಾಗಿ ನಟಿಸುತ್ತಿದ್ದಾರೆ. ಇದರಲ್ಲಿ ಅವರು ವಕೀಲನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಮಂಜುನಾಥ್ ಭಟ್, ಹಂಸ, ಮೈಕೋ ಶಿವು, ಕೃಷ್ಣ ಅಡಿಗ ಮತ್ತು ಸಂಗೀತಾ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವಿನೋದ್ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.
ಇದೀಗ ಧಾರಾವಾಹಿ 600 ಕಂತುಗಳು ಪೂರೈಸಿರುವುದರಿಂದ ದೀಪಿಕಾ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಧಾರವಾಹಿಯನ್ನು ವೀಕ್ಷಿಸಿ ಪ್ರೋತ್ಸಾಹಿಸುತ್ತಿರುವ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ದೀಪಿಕಾ ‘ಬಹಳ ಪ್ರೀತಿ, ಆಶೀರ್ವಾದ ಮತ್ತು ಬೆಂಬಲವನ್ನು ನೀಡಿದ ಎಲ್ಲರಿಗೂ ಧನ್ಯವಾದಗಳು. ನಾವು 600 ಸಂಚಿಕೆಗಳನ್ನು ಪೂರ್ಣಗೊಳಿಸಿದ್ದೇವೆ. ಭವಿಷ್ಯದಲ್ಲಿ 1000+ ತಲುಪಲು ನಮಗೆಲ್ಲರಿಗೂ ಇದೇ ರೀತಿಯ ಬೆಂಬಲ ಮತ್ತು ಪ್ರೀತಿಯನ್ನು ನೀಡುವಂತೆ ನಾನು ವಿನಂತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.