ETV Bharat / sitara

'ಅಪ್ಪು' ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ: ಪುನೀತ್ ನೆನೆದು ಕಣ್ಣೀರಿಟ್ಟ ರಮೇಶ್​​ ಅರವಿಂದ್ - Senior Actor Ramesh Aravind emotion

'100' ಸಿನಿಮಾ ಮಾಧ್ಯಮಗೋಷ್ಠಿಯಲ್ಲಿ ಪವರ್ ಸ್ಟಾರ್ ಫೋಟೋಗೆ ನಮನ ಸಲ್ಲಿಸಿ ಮಾತನಾಡಿದ ರಮೇಶ್ ಅರವಿಂದ್ ಭಾವುಕರಾದರು. ಗುರು ಕಿರಣ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪುನೀತ್ ರಾಜ್‍ಕುಮಾರ್ ಜತೆ ಕಳೆದ ಹೊತ್ತು, ಮಾತನಾಡಿದ ವಿಷಯಗಳ ಬಗ್ಗೆ ನೆನೆದು ಕಂಬನಿ ಮಿಡಿದರು.

Senior Actor Ramesh Aravind
ಪುನೀತ್ ನೆನೆದು ಕಣ್ಣೀರಿಟ್ಟ ಹಿರಿಯ ನಟ ರಮೇಶ್​​ ಅರವಿಂದ್
author img

By

Published : Nov 6, 2021, 1:25 PM IST

ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಹುಡ್ಗನಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಾರದ ಲೋಕಕ್ಕೆ ಪಯಣ ಬೆಳೆಸಿ 9 ದಿನಗಳು ಕಳೆದಿವೆ. ಆದರೆ ಯುವರತ್ನನ ಆ ನಗು, ಸಮಾಜಮುಖಿ ಕೆಲಸಗಳು ಅಜರಾಮರವಾಗಿ ಉಳಿದಿವೆ.

'100' ಸಿನಿಮಾ ಮಾಧ್ಯಮಗೋಷ್ಠಿಯಲ್ಲಿ ಪವರ್ ಸ್ಟಾರ್ ಫೋಟೋಗೆ ನಮನ ಸಲ್ಲಿಸಿ ಮಾತನಾಡಿದ ರಮೇಶ್ ಅರವಿಂದ್

ಪುನೀತ್ ರಾಜ್‍ಕುಮಾರ್ ಸಾವಿಗೂ ಮುನ್ನ ಸಂಗೀತ ನಿರ್ದೇಶಕ ಗುರು ಕಿರಣ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು‌. ಈ ಸಮಯದಲ್ಲಿ ಹಿರಿಯ ನಟ ರಮೇಶ್ ಅರವಿಂದ್ ಅವರು ಪುನೀತ್ ರಾಜ್‍ಕುಮಾರ್ ಅವರೊಂದಿಗೆ ಸಾಕಷ್ಟು ವಿಚಾರಗಳನ್ನ ಮಾತನಾಡಿದ್ದರು‌. ಆ ಕ್ಷಣವನ್ನ ನೆನೆದು ಇಂದು ರಮೇಶ್ ಅರವಿಂದ್ ಭಾವುಕರಾದರು.

ರಮೇಶ್ ಅರವಿಂದ್ ನಿರ್ದೇಶನ ಮಾಡಿ, ನಟಿಸಿರುವ '100' ಸಿನಿಮಾ ಮಾಧ್ಯಮಗೋಷ್ಠಿಯಲ್ಲಿ ಪವರ್ ಸ್ಟಾರ್ ಫೋಟೋಗೆ ನಮನ ಸಲ್ಲಿಸಿ ಮಾತನಾಡಿದ ಅವರು, ಆ ರಾತ್ರಿ ಪುನೀತ್ ರಾಜ್‍ಕುಮಾರ್ ಜತೆ ಕಳೆದ ಹೊತ್ತು, ಮಾತನಾಡಿದ ವಿಷಯಗಳ ಬಗ್ಗೆ ನೆನೆದು ಕಂಬನಿ ಮಿಡಿದರು.

ಸತತ ಎರಡು ಗಂಟೆಗಳ ಕಾಲ ಪುನೀತ್ ರಾಜ್‍ಕುಮಾರ್ ಅವರ ಜತೆ ಮಾತನಾಡಿದ್ದ ರಮೇಶ್ ಅರವಿಂದ್, ಸಿನಿಮಾ, ಕ್ರಿಕೆಟ್ ಹಾಗೇ ಬೇರೆ ಬೇರೆ ವಿಷಯಗಳ ಬಗ್ಗೆಯೂ ಮಾತನಾಡಿದ್ದರು. ಪುನೀತ್ ರಾಜ್‍ಕುಮಾರ್ ಸ್ಥಾನವನ್ನ ಯಾರಿಂದಲೂ ತುಂಬಲು ಸಾಧ್ಯವಿಲ್ಲ, ಆ ಸ್ಥಾನ ಯಾವತ್ತೂ ಶೂನ್ಯತೆಯಿಂದ ಕೂಡಿರುತ್ತೆ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ನಟನೆಯಲ್ಲಿ ಪಳಗಿದ್ದ ಪುನೀತ್​: ಹಿರಿಯ ನಟ ಹೊನ್ನವಳ್ಳಿ ಕೃಷ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.