ಕೆಜಿಎಫ್ ಸಿನಿಮಾದ ಕಥೆ ಎಳೆ ಎಳೆಯಾಗಿ ಬಿಚ್ಚಿಟ್ಟ ಅನಂತ್, ಕವಚ ಚಿತ್ರದಲ್ಲೂ ಶಿವಣ್ಣನ ಕಥೆ ಹೇಳಲಿದ್ದಾರೆ. ಈ ಸಿನಿಮಾ ಆರಂಭವನ್ನು ಅನಂತ್ ನಾಗ್ ಮಾಡಲಿದ್ದಾರಂತೆ. ಇಂದು ತಮ್ಮ ಮನೆಯಲ್ಲಿ ಈ ಸಿನಿಮಾದ ನಿರೂಪಣೆ ಮಾಡಿದ್ದಾರೆ. ಕೆಜಿಎಫ್ ಶೈಲಿಯಲ್ಲೇ ಚಿತ್ರಕಥೆ ರಿವೀಲ್ ಮಾಡಲಿದ್ದಾರಂತೆ.
ಇನ್ನು 2016ರಲ್ಲಿ ತೆರೆ ಕಂಡಿದ್ದ ಮಲಯಾಳಂನ 'ಒಪ್ಪಂ' ಚಿತ್ರದ ರೀಮೇಕ್ ಸಿನಿಮಾ ಕವಚ. ಜಿವಿಆರ್ ವಾಸು ನಿರ್ದೇಶನದ ಈ ಚಿತ್ರದಲ್ಲಿ ಕೃತಿಕಾ ಜಯಕುಮಾರ್, ಇಶಾ ಕೊಪ್ಪಿಕರ್, ಬೇಬಿ ಮೀನಾಕ್ಷಿ, ವಸಿಷ್ಠ ಸಿಂಹ ನಟಿಸಿದ್ದಾರೆ.