ದಕ್ಷಿಣ ಭಾರತದ ಖ್ಯಾತ ನಿರ್ದೇಶಕರಲ್ಲಿ ಶೇಖರ್ ಕಮ್ಮುಲ ದೊಡ್ಡ ಹೆಸರು ಮಾಡಿದ್ದಾರೆ. ಇವರ ನಿರ್ದೇಶನದಲ್ಲಿ ಸಾಯಿ ಪಲ್ಲವಿ ಅಭಿನಯದ ಫಿದಾ ಚಿತ್ರ 2017ರಲ್ಲಿ ತೆರೆ ಕಂಡಿದೆ. ಇನ್ನು ತಮ್ಮ ನೆಚ್ಚಿನ ನಿರ್ದೇಶಕರ ಬಗ್ಗೆ ಸಾಯಿ ಪಲ್ಲವಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ನಿರ್ದೇಶಕ ಶೇಖರ್ ಬಗ್ಗೆ ಮಾತನಾಡಿರುವ ನಟಿ, ಅವರು ನನಗೆ ನಿರ್ದೇಶಕರಿಗಿಂತ ಹೆಚ್ಚು. ಫಿದಾ ಶೂಟಿಂಗ್ ಸೆಟ್ನಲ್ಲಿ ನನಗೆ ಸಾಕಷ್ಟು ವಿಚಾರಗಳನ್ನು ಹೇಳಿಕೊಟ್ಟಿದ್ದಾರೆ. ನನ್ನ ಈ ದಾರಿಗೆ ಸಲಹೆ ನೀಡಿದ್ದಾರೆ. ಅಲ್ಲದೆ ಎಲ್ಲರ ಮುಂದೆ ನಿಂತು ಮಾತನಾಡಲು ನನಗೆ ಕಲಿಸಿದ್ದಾರೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.
ಫಿದಾ ಶೂಟಿಂಗ್ ಸೆಟ್ನಲ್ಲಿ ನನಗೆ ಹಲವಾರು ವಿಷಯಗಳನ್ನು ಹೇಳಿಕೊಟ್ಟಿರುವ ಶೇಖರ್, ಒಬ್ಬ ಮಹಿಳೆಯಾಗಿ ಹೇಗೆ ಇರಬೇಕೆಂದು ತಿಳಿಸಿದ್ದಾರೆ. ಇಲ್ಲದಿದ್ದರೆ ನಾನು ಇನ್ನೂ ಮಗುವಾಗಿಯೇ ಇರುತ್ತಿದ್ದೆ ಎಂದಿದ್ದಾರೆ.
ಸದ್ಯ ರೌಡಿ ಬೇಬಿ ಶೇಖರ್ ನಿರ್ದೇಶನದ 'ಲವ್ ಸ್ಟೋರಿ' ಸಿನಿಮಾದ ರಿಲೀಸ್ಗೆ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಜೊತೆ ನಾಗಚೈತನ್ಯ ಬಣ್ಣ ಹಚ್ಚಿದ್ದಾರೆ.