ಕುತೂಹಲದ ಗೂಡಾಗಿರುವ ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ನೋಡುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಇದೀಗ ಬಿಗ್‌ಬಾಸ್ ನೋಡುಗರಿಗೆ ಮತ್ತೊಂದು ಹೊಸ ಸುದ್ದಿ ಸಿಕ್ಕಿದೆ. ಅದೇನಂದ್ರೆ, ಬಿಗ್ ಬಾಸ್ ಮನೆಗೆ 2ನೇ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ.
ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಯಾರು ಎಂಬುದು ಎಲ್ಲರ ಕೂತೂಹಲ ಹೆಚ್ಚಿಸಿದೆ. ಮೂಲಗಳ ಪ್ರಕಾರ ಈಕೆ ಮೇ 1 ಸಿನಿಮಾದಲ್ಲಿ ನಟಿಸಿರುವ ರಕ್ಷಾ ಸೋಮಶೇಖರ್.
ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿರುವವರು ಬಿಗ್ ಬಾಸ್ ಮನೆಯೊಳಗೆ ಯಾರಿಗೂ ಪರಿಚಯ ಇಲ್ಲ ಎಂಬಂತಿದೆ. ಆದರೆ, ಕಿಶನ್ ಆಕೆಯನ್ನು ತಬ್ಬಿಕೊಂಡು ಮಾತಾಡಿರುವುದನ್ನು ನೋಡಿದರೆ ಈ ಮೊದಲೇ ಪರಿಚಯ ಇದೆ ಎನ್ನಲಾಗುತ್ತಿದೆ.
ಮೊದಲ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಆರ್ ಜೆ ಪೃಥ್ವಿ ಎಂಟ್ರಿ ಕೊಟ್ಟಿದ್ದು, ಮನೆಯೊಳಗೆ ಉತ್ತಮವಾಗಿ ಆಟವಾಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ 2ನೇ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದು ಬಿಗ್ ಬಾಸ್ ಮನೆ ಇನ್ನುಮುಂದೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.