ಪುನೀತ್ ರಾಜ್ಕುಮಾರ್ ನಟನೆಯ 'ಯುವರತ್ನ' ಸಿನಿಮಾ ಇದೀಗ ಸಿನಿಪ್ರಿಯರ ಕುತೂಹಲ ಹೆಚ್ಚಿಸುತ್ತಿದೆ. ಅದ್ರಲ್ಲೂ ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ 'ಪವರ್ ಆಫ್ ಯೂತ್' ಹಾಡು ಯುವಕರನ್ನು ಹುಚ್ಚೆಬ್ಬಿಸಿದೆ. ಮತ್ತೊಂದು ವಿಶೇಷ ಅಂದ್ರೆ, ಈ ಹಾಡಿಗೆ ಸ್ಟೆಪ್ ಹಾಕುವಂತೆ ಚಿತ್ರತಂಡ ಯುವಕರಿಗೆ ಚಾಲೆಂಜ್ ಕೂಡಾ ಹಾಕಿತ್ತು. ಚಿತ್ರದ ಹೈವೋಲ್ಟೇಜ್ ಸಾಂಗ್ ಆಗಿರುವ ಪವರ್ ಆಫ್ ಯೂತ್ ಚಾಲೆಂಜ್ ಇದೀಗ ಸದ್ದು ಮಾಡುತ್ತಿದೆ.
ಓದಿ : ಹೊಸ ವರ್ಷಕ್ಕೆ ಹೆದರಿಸಲು ಬರ್ತಿದ್ದಾರೆ ಶಾನ್ವಿ!
ಈ ಹಾಡಿಗೆ ಹೆಜ್ಜೆ ಹಾಕಿರುವ ಸಯ್ಯೇಶಾ ಸೈಗಲ್ ಕನ್ನಡದ ಹುಡುಗಿಯರಿಗೆ ಒಂದು ಚಾಲೆಂಜ್ ಹಾಕಿದ್ದಾರೆ. ಟ್ವಿಟರ್ನಲ್ಲಿ ಚಾಲೆಂಜ್ ಮಾಡಿರುವ ಅವರು, ತಾವು ಕುಣಿದಿರುವ ಒಂದು ವಿಡಿಯೋ ತುಣುಕನ್ನು ಟ್ವೀಟ್ ಮಾಡಿದ್ದಾರೆ. ಈ ಮೂಲಕ ನೀವೂ ಕೂಡಾ ಪವರ್ ಆಫ್ ಯೂತ್ ಹಾಡಿಗೆ ಹೆಜ್ಜೆ ಹಾಕಿ ನಿಮ್ಮ ಪವರ್ ತೋರಿಸಿ. ಆ ವಿಡಿಯೋವನ್ನು #PowerOfYouthDanceChallenge ಎಂದು ಬರೆದು ಪೋಸ್ಟ್ ಮಾಡಿ ಎಂದಿದ್ದಾರೆ.
-
Challenging the girls of Karnataka and all over to show us your power...dance away! 💃💃
— Sayyeshaa (@sayyeshaa) December 15, 2020 " class="align-text-top noRightClick twitterSection" data="
Post your videos and use the hashtag #PowerOfYouthDanceChallenge #Yuvarathnaa @hombalefilms @PuneethRajkumar @VKiragandur @SanthoshAnand15 @MusicThaman @KRG_Connects pic.twitter.com/P0b4FrIIbN
">Challenging the girls of Karnataka and all over to show us your power...dance away! 💃💃
— Sayyeshaa (@sayyeshaa) December 15, 2020
Post your videos and use the hashtag #PowerOfYouthDanceChallenge #Yuvarathnaa @hombalefilms @PuneethRajkumar @VKiragandur @SanthoshAnand15 @MusicThaman @KRG_Connects pic.twitter.com/P0b4FrIIbNChallenging the girls of Karnataka and all over to show us your power...dance away! 💃💃
— Sayyeshaa (@sayyeshaa) December 15, 2020
Post your videos and use the hashtag #PowerOfYouthDanceChallenge #Yuvarathnaa @hombalefilms @PuneethRajkumar @VKiragandur @SanthoshAnand15 @MusicThaman @KRG_Connects pic.twitter.com/P0b4FrIIbN
ಚಿತ್ರನಿರ್ದೇಶಕ ಸಂತೋಷ್ ಆನಂದ್ ರಾಮ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಎಸ್.ಎಸ್.ತಮನ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಪುನೀತ್‌ಗೆ ಜೋಡಿಯಾಗಿ ಸಯ್ಯೇಶಾ ಕಾಣಿಸಿಕೊಂಡಿದ್ದಾರೆ. ಸೋನು ಗೌಡ, ಧನಂಜಯ್, ಪ್ರಕಾಶ್ ರಾಜ್, ದಿಗಂತ್, ವಸಿಷ್ಠ ಸಿಂಹ ಸೇರಿದಂತೆ ಹಲವರು ನಟಿಸಿದ್ದಾರೆ.