ಇಂದು ಬಾಲಿವುಡ್ ನಟ ಸಂಜಯ್ ದತ್ ಹುಟ್ಟಿದ ದಿನ. ಕೆಜಿಎಫ್-2 ಸಿನಿಮಾದಲ್ಲಿ ಸಂಜಯ್ ದತ್ ನಟಿಸುವುದು ಖಚಿತವಾಗಿದ್ದು ಇಂದು ಅವರ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ಸಂಜಯ್ ದತ್ ಫಸ್ಟ್ಲುಕ್ ಬಿಡುಗಡೆ ಮಾಡಿದೆ.
ಆಶ್ಚರ್ಯ ಎಂದರೆ ಈ ಪೋಸ್ಟರ್ ಬಿಡುಗಡೆಯಾದ 53 ನಿಮಿಷಗಳಲ್ಲಿ ಸುಮಾರು 23.4 ಸಾವಿರ ಜನರು ಪೋಸ್ಟರ್ಗೆ ಪ್ರತಿಕ್ರಿಯಿಸಿದ್ದು ಟ್ವಿಟ್ಟರ್ ಇಂಡಿಯಾ ಟ್ರೆಂಡ್ನಲ್ಲಿ ಈ ಪೋಸ್ಟರ್ ಎರಡನೇ ಸ್ಥಾನದಲ್ಲಿದೆ. ಚಿತ್ರದಲ್ಲಿ ಸಂಜಯ್ ದತ್ 'ಅಧೀರ' ಎಂಬ ಪಾತ್ರದಲ್ಲಿ ನಟಿಸುತ್ತಿದ್ದು ತಲೆಗೆ ಪೇಟ ಹಾಗೂ ಬಾಯಿಗೆ ಬಟ್ಟೆ ಮುಚ್ಚಿಕೊಂಡಿರುವ ಸಂಜಯ್ ದತ್ ಪೋಸ್ಟರ್ ಇದಾಗಿದೆ. ಹೊಂಬಾಳೆ ಫಿಲಮ್ಸ್ ಬ್ಯಾನರ್ ಅಡಿ ಕೆಜಿಎಫ್ 2 ನಿರ್ಮಾಣವಾಗುತ್ತಿದ್ದು ಪ್ರಶಾಂತ್ ನೀಲ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಇನ್ನಿತರ ಸ್ಥಳಗಳಲ್ಲಿ ಬೃಹತ್ ಸೆಟ್ ಹಾಕಿ ಚಿತ್ರದ ಶೂಟಿಂಗ್ ಮಾಡಲಾಗುತ್ತಿದೆ.
ಇನ್ನು ಇಂದು ಸಂಜಯ್ ದತ್ ಹುಟ್ಟುಹಬ್ಬವಾಗಿದ್ದು ನಟ ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಂಗದೂರು ಸೇರಿ ಕೆಜಿಎಫ್ ಚಿತ್ರತಂಡ ಹಾಗೂ ಚಿತ್ರರಂಗದ ಗಣ್ಯರು ಸಂಜಯ್ ದತ್ಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.