ETV Bharat / sitara

ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್ : ಹೈದರಾಬಾದ್​ ಮೂಲದ ಇಬ್ಬರು ಉದ್ಯಮಿಗಳಿಗೆ ನೋಟಿಸ್ - ಗೋವಿಂದಪುರ ಪೊಲೀಸ್​​ ಠಾಣೆಯ ಡ್ರಗ್ಸ್​ ಪ್ರಕರಣ

ಪೆಡ್ಲರ್ ಬಳಿ ಡ್ರಗ್ಸ್ ತರಿಸಿಕೊಂಡು ಪಾರ್ಟಿ ಆಯೋಜಿಸ್ತಿದ್ದ ಕಲಹಾರ್ ರೆಡ್ಡಿ, ಬೆಂಗಳೂರು ಸೇರಿ ಹೈದರಾಬಾದ್​ನಲ್ಲೂ ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದರು. ಶಂಕರೇಗೌಡನ ಮೂಲಕ ಹೈದರಾಬಾದ್​ಗೆ ಡ್ರಗ್ಸ್ ತರಿಸಿಕೊಂಡು ಪಾರ್ಟಿ ಮಾಡುತ್ತಿದ್ದರು..

ಸ್ಯಾಂಡಲ್‌ವುಡ್ ಡ್ರಗ್ ಕೇಸ್
ಸ್ಯಾಂಡಲ್‌ವುಡ್ ಡ್ರಗ್ ಕೇಸ್
author img

By

Published : Apr 4, 2021, 3:29 PM IST

ಬೆಂಗಳೂರು : ಗೋವಿಂದಪುರ ಪೊಲೀಸ್​​ ಠಾಣೆಯಲ್ಲಿ ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್ ದಾಖಲಾಗಿದೆ. ನಾಳೆ ವಿಚಾರಣೆಗೆ ಹಾಜರಾಗುವಂತೆ ಇಬ್ಬರು ಹೈದರಾಬಾದ್ ಮೂಲದ ಉದ್ಯಮಿಗಳಾದ ರತನ್ ರೆಡ್ಡಿ ಮತ್ತು ಕಲಹಾರ್ ರೆಡ್ಡಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ನಿರ್ಮಾಪಕ ಶಂಕರೇಗೌಡ ಸಂಪರ್ಕದಲ್ಲಿದ್ದ ಈ ಉದ್ಯಮಿಗಳು, ಅವರ ಜೊತೆ ಸೇರಿ ಹಲವಾರು ಕಡೆ ಡ್ರಗ್ಸ್ ಪಾರ್ಟಿ ಆಯೋಜಿಸಿದ್ದರು. ಈ ಮೊದಲು ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ರತನ್ ರೆಡ್ಡಿ ಹಾಗೂ ಕಲಹಾರ್ ರೆಡ್ಡಿ ಪಾರ್ಟಿ ಆಯೋಜಿಸ್ತಿದ್ದರು.

ತೆಲಂಗಾಣ ಮೂಲದ ಶಾಸಕರನ್ನು ಕೂಡ ಡ್ರಗ್ಸ್ ಪಾರ್ಟಿಗೆ ಕರೆತರುತ್ತಿದ್ದ. ಐದಾರು ಬಾರಿ ನಾಲ್ವರು ಶಾಸಕರು ಬಂದು ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಈ ನಾಲ್ವರು ಶಾಸಕರನ್ನು ಡ್ರಗ್ಸ್ ಪಾರ್ಟಿಗೆ ನಿರಂತರವಾಗಿ ಕರೆತರುತ್ತಿದ್ದ.

ನಾಲ್ಕೈದು ಬಾರಿ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ಕಲೆ ಹಾಕಿರುವ ಇನ್ಸ್‌ಪೆಕ್ಟರ್ ಪ್ರಕಾಶ್, ಕಲಹಾರ್ ರೆಡ್ಡಿ ವಿಚಾರಣೆ ಬಳಿಕ ನಾಲ್ವರು ಶಾಸಕರಿಗೂ ನೋಟಿಸ್ ನೀಡಲು ಸಿದ್ಧತೆ‌ ನಡೆಸಿದ್ದಾರೆ.

ಪೆಡ್ಲರ್ ಬಳಿ ಡ್ರಗ್ಸ್ ತರಿಸಿಕೊಂಡು ಪಾರ್ಟಿ ಆಯೋಜಿಸ್ತಿದ್ದ ಕಲಹಾರ್ ರೆಡ್ಡಿ, ಬೆಂಗಳೂರು ಸೇರಿ ಹೈದರಾಬಾದ್​ನಲ್ಲೂ ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದರು. ಶಂಕರೇಗೌಡನ ಮೂಲಕ ಹೈದರಾಬಾದ್​ಗೆ ಡ್ರಗ್ಸ್ ತರಿಸಿಕೊಂಡು ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.