ETV Bharat / sitara

ಚಂದನವನದ ಹಿರಿಯ ಚೇತನ ಶಿವರಾಮಣ್ಣ ನೆನೆದು ಕಣ್ಣೀರಿಟ್ಟ ಕನ್ನಡ ಚಿತ್ರರಂಗ: VIDEO

author img

By

Published : Dec 4, 2021, 8:18 PM IST

ಕನ್ನಡ ಚಿತ್ರರಂಗದ ಹಿರಿಯ ಚೇತನ ನಟ ಎಸ್​.ಶಿವರಾಮ್​ ಅವರ ಅಗಲಿಕೆ ಚಂದನವನವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಶಿವರಾಮಣ್ಣ, ಶಿವರಾಂ ಗುರುಸ್ವಾಮಿ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ಸ್ಯಾಂಡಲ್​ವುಡ್​​ ಕಲಾವಿದರ ಸಂಘದ ಶ್ರಮೀಕರನ್ನು ನೆನೆದು ಇಡಿ ಚಿತ್ರರಂಗ ಕಣ್ಣೀರಿಡುತ್ತಿದೆ. ಅಂತಿಮ ದರ್ಶನ ಪಡೆದ ನಟ, ನಟಿಯರು ಶಿವರಾಮ ಅವರನ್ನು ನೆನಪಿಸಿಕೊಂಡು ಕಣ್ಣೀರಾದರು.

actor-shivaram
ಹಿರಿಯ ನಟ ಶಿವರಾಮ್​ ನಿಧನ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್​ ನಿಧನ ಹಿನ್ನೆಲೆ ಸ್ಯಾಂಡಲ್​ವುಡ್​ ನಟ, ನಟಿಯರು ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶಿವರಾಮಣ್ಣನ ಜೊತೆಗಿನ ಒಡನಾಟ ಮತ್ತು ವ್ಯಕ್ತಿತ್ವದ ಕುರಿತು ಮಾತುಗಳನ್ನಾಡಿ, ಅವರ ಅಗಲಿಕೆಗೆ ಸಂತಾಪ ಸೂಚಿಸಿದರು.

ಚಂದನವನದ ಹಿರಿಯ ಚೇತನ ಶಿವರಾಮಣ್ಣರನ್ನು ನೆನೆದರು ಕಣ್ಣೀರಿಟ್ಟ ಕನ್ನಡ ಚಿತ್ರರಂಗ

ಶಿವರಾಮ್ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ, ಹಿರಿಯ ನಟಿ ಗಿರೀಜಾ ಲೊಕೇಶ್ , ನಾವು ಹಿರಿಯ ಜೀವವನ್ನು ಕಳೆದುಕೊಂಡಿದ್ದೇವೆ. ಅವರು ಲೈಬ್ರರಿ ಸ್ಥಾಪಿಸಿ ಸಿನಿಮಾದ ಬಗ್ಗೆ ಮಾಹಿತಿಯನ್ನು ಸಂಗ್ರಹ ಮಾಡಿದ್ದಾರೆ. ಆ ಗ್ರಂಥಾಲಯದಲ್ಲಿ ಈಗಿನ ಯುವ ಪೀಳಿಗೆಗೆ ಬೇಕಾದ ಅಂಶಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಜೀವನದಲ್ಲಿ ಅವರು ಸಾಕಷ್ಟು ಮಂದಿಗೆ ಸಹಾಯ ಮಾಡಿ, ತುಂಬು ಜೀವನದ ಸಾರ್ಥಕತೆ ಮೆರೆದಿದ್ದಾರೆ. ಶಿವರಾಮಣ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.

ಇನ್ನು ಹಿರಿಯ ನಟ ಅನಂತನಾಗ್​ ಮಾತನಾಡಿ, ಪ್ರೀತಿಯ ಶಿವರಾಮಣ್ಣ ಇಂದು ನಮ್ಮನ್ನು ಅಗಲಿದ್ದಾರೆ. ಅವರ ನನ್ನ ಪರಿಚಯ ಸುಮಾರು 40 ವರ್ಷ ಹಳೆಯದು. ಅವರ ಜೊತೆ ನಾನು ಅನೇಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಅವರು ಚಾಣಾಕ್ಷ ರಾಜಕಾರಣಿ ಪಾತ್ರದಲ್ಲಿ ಅರ್ಥ ಗರ್ಭಿತವಾಗಿ ನಟಿಸುತ್ತಿದ್ದರು. ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ನಾವಿಬ್ಬರು ಹೆಚ್ಚಾಗಿ ದೂರವಾಣಿಯಲ್ಲಿ ಮಾತನಾಡುತ್ತಿದ್ದೆವು. ಸಿನಿಮಾರಂಗದಲ್ಲಿ ಸಂಘಟನೆ ಕಟ್ಟಿದ್ರು. ಡಾ‌. ರಾಜ್ ಜೊತೆ ಕಲಾವಿದರಿಗಾಗಿ ಶ್ರಮಿಸಿದ್ದರು. ಸಿನಿಮಾ ಮಂದಿಯ ಏಳಿಗೆಗಾಗಿ ಅವರು ಶ್ರಮಿಸಿದ್ದರು. ಕಲಾವಿದರ ಸಂಘದ ಮೂಲ ಪುರುಷ ಶಿವರಾಮಣ್ಣ. ಆದರೆ ಅಂತಹ ವ್ಯಕ್ತಿತ್ವವನ್ನು ಇಂದು ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ಶಿವರಾಮಣ್ಣರ ನಿಧನಕ್ಕೆ ಸಂತಾಪ ಸೂಚಿಸಿದ ಹಿರಿಯ ನಟ ಅಶೋಕ್, 1975 ರಿಂದ ನನಗೆ ಶಿವರಾಮಣ್ಣ ಆತ್ಮೀಯರು. ಅವರು ನನಗೆ ಅಣ್ಣನ ರೀತಿ ಇದ್ರು. ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಶಿವಾರಾಮಣ್ಣ ನಮ್ಮನ್ನು ಅಗಲಿದ್ದು, ತುಂಬಾ ನೋವಾಗಿದೆ. ಅವರ ಸಾವನ್ನು ನಂಬಲು ನನಗೆ ಆಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಹಿರಿಯ ನಟ ಶ್ರೀನಿವಾಸ ಮೂರ್ತಿ ಮಾತನಾಡಿ, ಶಿವರಾಮಣ್ಣ ಎಲ್ಲರನ್ನೂ ಸಹೋದರಂತೆ ಕಾಣುತ್ತಿದ್ದರು. ನನ್ನ ಅವರ ಸ್ನೇಹ ತುಂಬಾ ಹಳೆಯದು. ಅವರ ನಿಧನ ತುಂಬಾ ನೋವು ತಂದಿದೆ. ಏನೇ ಕಷ್ಟ ಸುಖ ಬಂದ್ರು ನನ್ನ ಜೊತೆಯಲ್ಲಿರುತ್ತಿದ್ದರು. ಎಂತಹ ಪಾತ್ರ ಕೊಟ್ರು ಅವರು ನಟಿಸಿ ಸೈ ಎನ್ನಿಸಿಕೊಂಡಿದ್ದರು. ಅವರು ಪಾತ್ರಗಳಲ್ಲಿ ಬಹಳ ನ್ಯಾಚುರಲ್ ಆಗಿ ನಟಿಸುತ್ತಿದ್ದರು.

ಕಲಾವಿದರ ಸಂಘದ ಪ್ರಾರಂಭದಲ್ಲಿ ಸಾಕಷ್ಟು ಶ್ರಮಿಸಿದ ಜೀವ ಅದು. ಕಲಾವಿರ ಸಂಘಕ್ಕಾಗಿ ಅವರು ಸಾಕಷ್ಟು ದುಡಿದಿದ್ದಾರೆ. ಅಪ್ಪಟ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದ ಶಿವರಾಮಣ್ಣ 150 ರಿಂದ 200 ಬಾರಿ ಶಬರಿಮಲೆ ಯಾತ್ರೆ ಮಾಡಿದ್ದರು. ಅವರ ನಮ್ಮನ್ನು ಅಗಲಿದ್ದು ಸಾಕಷ್ಟು ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಾತನಾಡಿದರು.

ಹಿರಿಯ ನಟನ ಅಗಲಿಕೆಗೆ ಸಂತಾಪ ಸೂಚಿಸಿದ ನಟ ರಮೇಶ್ ಅರವಿಂದ್, ನಮ್ಮ ಪ್ರೊಡಕ್ಷನ್​ಲ್ಲಿ ಶಿವರಾಮಣ್ಣ ಆ್ಯಕ್ಟ್ ಮಾಡುತ್ತಿದ್ದರು. ಅವರ ನಟನೆ, ಡೈಲಾಗ್ ನೋಡಿ ಎಲ್ಲರೂ ಶಾಕ್ ಆಗಿದ್ರು. ಅವರ ಶಿಸ್ತು, ಬುದ್ದಿವಂತಿಕೆ ಎಲ್ಲರೂ ಮೆಚ್ಚುವಂತದ್ದು. ಎಲ್ಲ ಇವೆಂಟ್ಸ್​ಗಳಲ್ಲೂ ಸಖತ್ ಆಕ್ಟಿವ್ ಆಗಿರುತ್ತಿದ್ದರು. ಅವರು ಆ ಕಾಲದಲ್ಲಿ ಬಾಡಿಬಿಲಡ್ಡರ್ ಆಗಿದ್ದರು. ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಸಹ ಮಾಡುತ್ತಿದ್ದರು. ಅವರ ಚಿತ್ರಗಳು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳುವಂತದ್ದು. ಅವರ ನಿಧನ ನೋವು ತಂದಿದೆ ಎಂದು ಬಾವುಕರಾದರು.

ಎಲ್ಲರಿಗೂ ಅವರು ಶಿವರಾಂ ಸ್ವಾಮಿ ಎಂದು ಪರಿಚಯ. ನಮಗೆ ಗುರು ಸ್ವಾಮಿಗಳಾಗಿದ್ದರು. ತುಂಬಾ ದೊಡ್ಡ ಮನುಷ್ಯ. ಸಿನೆಮಾ ರಂಗಕ್ಕೆ ಏನೇ ಸಮಸ್ಯೆ ಬಂದರೂ ನಿಲ್ಲುತ್ತಿದ್ದರು. ಅವರಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲ್ಲು ಆಗುತ್ತಿಲ್ಲ. ನಾನು ಶಬರಿಮಲೆಗೆ ಪ್ರತಿ ಭಾರಿ ಹೋಗಿದ್ದು ಅವರೊಂದಿಗೆ ಎಂದು ನಟ ಶಿವರಾಮ್​ ಅವರನ್ನು ನೆನೆದು ಭಾವುಕರಾಗಿ ನಟ ರಾಘವೇಂದ್ರ ರಾಜ್​ಕುಮಾರ್​ ಕಣ್ಣೀರಿಟ್ಟರು.

ಇನ್ನು ನಟ, ಸಚಿವ ಬಿ. ಸಿ. ಪಾಟೀಲ್​ ಅವರು, ನಟ ಶಿವರಾಮ್​ ಅಗಲಿಕೆ ಚಿತ್ರರಂಗಕ್ಕೆ ತುಂಬ ನೋವುಂಟು ಮಾಡಿದೆ. ಅವರ ಜೊತೆ ನಟನೆ ಮಾಡಲು ನನಗೂ ಕೌರವದಲ್ಲಿ ಅವಕಾಶ ಸಿಕ್ಕಿತ್ತು. ಎಲ್ಲರ ಜೊತೆಯೂ ಖುಷಿಯಾಗಿ ಇರುತ್ತಿದ್ದರು. ಕೌರವ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಯಾವಾಗ್ಲೂ ನಗುನಗುತ್ತಾ ಇರ್ತಿದ್ರು.

ಬೆಳಗ್ಗೆಯೇ ನೋಡ್ಬೇಕು ಅನ್ಕೊಂಡೆ ಆದ್ರೆ ಕಾರಣಾಂತರಗಳಿಂದ ಆಗ್ಲಿಲ್ಲ. ಮಧ್ಯಾಹ್ನ ಬಂದ ಸುದ್ದಿ ಬಹಳ ಆಘಾತವನ್ನುಂಟು ಮಾಡಿತು. ಕುಟುಂಬದವರಿಗೆ ಅವರ ಅಗಲಿಕೆ ಸಹಿಸುವ ಶಕ್ತಿ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಚಿವರು ಪ್ರಾರ್ಥಿಸಿದರು.

ನಟ ಸುಂದರ್ ರಾಜ್ ಅವರು ಶಿವರಾಮಣ್ಣ ಅಂತಿಮ ದರ್ಶನ ಪಡೆದು ಮಾತನಾಡಿ, ಶಿವರಾಮಣ್ಣ ಬಹುಮುಖ ಪ್ರತಿಭೆ. ಮತ್ತೊಬ್ಬ ಶಿವರಾಮಣ್ಣ ಹುಟ್ಟೊದ್ಕೆ ಸಾಧ್ಯವಿಲ್ಲ. ಕಲಾವಿದರ ಸಂಘ ಬೆಳೆಯೋಕೆ ಇವರೇ ಕಾರಣ. ಸ್ಥಾಪಕ ಕಾರ್ಯದರ್ಶಿಯಾಗಿ ಶಿವರಾಮಣ್ಣ ಜವಾಬ್ದಾರಿ ಹೊಂದಿದ್ದರು. ಶಿವರಾಮಣ್ಣ ಮಾಡಿದ ಲೈಬ್ರರಿ ಮಾಡಿದ್ದಾರೆ ಎಲ್ಲ ಕಿರಿ ನಟರು ಬಳಸಿದ್ರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತೆ. ನನ್ನ ಅಳಿಯ ಚಿರುಯಿಂದ ಶುರುವಾದ ಸಾವು ಪುನೀತ್ ಗೆ ನಿಲ್ಲುತ್ತದೆ ಅಂತ ಅನ್ಕೊಂಡಿದ್ವಿ. ಆದರೆ ಅದು ಅಲ್ಲಿಗೆ ನಿಲ್ಲಲಿಲ್ಲ. ಈ ನೋವು ಭರಿಸುವ ಶಕ್ತಿ ಕುಟುಂಬಕ್ಕೆ ಲಭಿಸಲಿ ಎಂದು ಕಂಬನಿ ಮಿಡಿದರು.

ಹಿರಿಯ ನಟ ಶಿವರಾಮ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ ಚಿತ್ರ ನಟಿ ಪ್ರೇಮಾ, ಅವರ ಬಗ್ಗೆ ಎಷ್ಟೇ ಹೇಳಿದ್ರು ನಾನು ಚಿಕ್ಕವಳು. ಅವರಿಲ್ಲ ಅನ್ನೊ ಸುದ್ದಿ ತುಂಬ ಬೇಸರ ಆಗುತ್ತೆ. ನನ್ನ ತಂದೆ ಪಾತ್ರ ಮಾಡ್ತಿದ್ರು. ನನ್ನ ತಂದೆಯೂ ಇಲ್ಲ ಅವರು ಇಲ್ಲ. ಅವರ ಆತ್ಮಕ್ಕೆ ‌ಶಾಂತಿ ಸಿಗಲಿ ಎಂದು ಕಂಬನಿ ಮಿಡಿದರು.

ನಟ ಥ್ರಿಲ್ಲರ್ ಮಂಜು ಮಾತನಾಡಿ, ಎಲ್ಲೇ ಸಿಕ್ಕಿದ್ರೂ ಪ್ರೀತಿ ವಿಶ್ವಾಸದಿಂದ ಮಾತಾಡ್ತಿದ್ರು. ಅವರ ಜೊತೆ ನಟಿಸಿದ್ದೀನಿ. ಎರಡು ತಿಂಗಳ ಹಿಂದೆ ಸಮಾರಂಭವೊಂದ್ರಲ್ಲಿ ಭೇಟಿಯಾಗಿದ್ವಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದರು.

ಹಿರಿಯ ನಟ ಶಿವರಾಮಣ್ಣರ ಅಂತಿಮ ದರ್ಶನ ಪಡೆದು ಮಾತನಾಡಿದ ಹಾಸ್ಯ ನಟ ರವಿ ಶಂಕರ್, ಕಳೆದ ಎರಡು ವರ್ಷದಿಂದ ಚಿತ್ರರಂಗದಲ್ಲಿ ದುರಂತಗಳು‌ ನಡೆಯುತ್ತಿವೆ. ಎಲ್ಲರೂ ಬಿಟ್ಟು ಹೋಗ್ತಿದ್ದಾರೆ. ಶಿವರಾಮಣ್ಣ ಅಣ್ಣವರ ಸಿನೆಮಾ ಪ್ರಡ್ಯೂಸ್ ಮಾಡಿದ್ದು, ಮೊನ್ನೆ ಮೊನ್ನೆ ಸಿನೆಮಾ ಮಾಡುವಾಗ‌ ನೆನಪು ಮಾಡಿಕೊಂಡಿದ್ವಿ. ತಪ್ಪುಗಳನ್ನು ತಿದ್ದುವವರು ಕಡಿಮೆಯಾಗ್ತಿದ್ದಾರೆ. ಕರ್ನಾಟಕದಲ್ಲಿ ಹುಟ್ಟಿ ಸಿನೆಮಾ ರಂಗಕ್ಕೆ ಸೇರಿದ್ದು ನಿಜಕ್ಕೂ ಹೆಮ್ಮೆ. ವಿಶ್ರಾಂತಿಗಾಗಿ ಹೋಗ್ತಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.

ನಟ ದೇವರಾಜ್, ಶಿವರಾಮ್​ ಅವರ ಅಗಲಿಕೆಗೆ ಸಂತಾಪ ಸೂಚಿಸಿದರು. ಕನ್ನಡ ಇಂಡಸ್ಟೀಯ ಅಣ್ಣ ಶಿವರಾಮಣ್ಣನನ್ನು ಕಳೆದುಕೊಂಡ್ವಿ. ಶಿವರಾಮಣ್ಣ ಗುರು ಸ್ವಾಮಿ ಹಾಗೆ ಅವರು ತುಂಬ ಹಿರಿಯರು. ಸಣ್ಣ ಸಣ್ಣ ಸಲಹೆ ನೀಡಿ ತಿದ್ದಿದ ಗುರು ಅವರು. ಕಲಾವಿದರ ಸಂಘ ಅಂದ್ರೆ ಅವರು ಮುಂದಾಳತ್ವದಲ್ಲಿ ಬಂದದ್ದು. ಕಷ್ಟದಲ್ಲಿದ್ದ ಕಲಾವಿದರು ಸಹಾಯ ಮಾಡುವವರು. ನಗುವ ಮನುಷ್ಯ ಅವರು ಶಿಸ್ತು ಇಲ್ಲ ಅಂದ್ರೆ ಮಾತ್ರ ಕೋಪ ಬರುತ್ತಿತ್ತು. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸಿದರು.

ಶಿವರಾಮಣ್ಣ ಅಂತಿಮ ದರ್ಶನ ಪಡೆದು ಮಾತನಾಡಿದ ನಟ ಧರ್ಮ, ನಟ ಶಿವರಾಂ ಅವರ ಜೊತೆ ಬಹಳ ಸಿನಿಮಾಗಳಲ್ಲಿ ನಟಿಸಿದ್ದೆ. ಒಳ್ಳೆಯ ಬಾಂಧವ್ಯ ಇತ್ತು. ಡಾ.ವಿಷ್ಣುವರ್ಧನ್ ಅವರ ಸ್ನೇಹಲೋಕದ ಬೆನ್ನೆಲುಬಾಗಿದ್ರು. ಅವರನ್ನು ಕಳೆದುಕೊಂಡಿದ್ದು ಬಹಳ ನೋವಾಗಿದೆ. ಚಿತ್ರರಂಗದಲ್ಲಿ ಪ್ರತಿದಿನ ನೋವಿನ ವಿಚಾರಗಳನ್ನು ಕೇಳ್ತಿದ್ದೀವಿ. ಬಹಳ ಬೇಸರವಾಗ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು

ಹಿರಿಯ ಜೀವ ನಟ ಶಿವರಾಮಣ್ಣರ ಅಗಲಿಕೆಗೆ ಮಿಡಿದ ನಟ ಶ್ರೀಮುರಳಿ, ಶಿವರಾಂ ಅಂಕಲ್ ಜೊತ ನನಗೆ ಬೇರೆ ರೀತಿಯ ನಂಟು. ಚಿಕ್ಕಮಕ್ಕಳಾಗಿದ್ದಾಗ ನಾವು ಅವರ ಜೊತೆಗೆ ಶಬರಿಮಲೆಗೆ ಹೋಗ್ತಿದ್ವಿ. ಸುಮಾರು 8-9 ಬಾರಿ ಅವರ ಜೊತೆ ಶಬರಿಮಲೆಗೆ ಹೋಗಿದ್ದೆ. ಶಬರಿಮಲೆ ಅಂದ ತಕ್ಷಣ ನೆನಪಾಗೋದೇ ಶಿವರಾಂ ಅಂಕಲ್. ಚಿತ್ರರಂಗಕ್ಕೆ ದೊಡ್ಡ ಲಾಸ್ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.