ETV Bharat / sitara

ದಾಖಲೆ ಬರೆದ 'ಪೊಗರು' ಚಿತ್ರದ ಕರಾಬು ಹಾಡು..ಸ್ಯಾಂಡಲ್​​​ವುಡ್ ಗಣ್ಯರಿಂದ ಶುಭ ಹಾರೈಕೆ - Karabu song make record

ನಂದಕಿಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ 'ಪೊಗರು' ಚಿತ್ರದ ಕರಾಬು ಹಾಡು ಇದುವರೆಗೂ 100 ಮಿಲಿಯನ್ ವೀಕ್ಷಣೆ ಆಗಿದೆ. ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಹಾಗೂ ಪವನ್ ಒಡೆಯರ್ ಶುಭ ಕೋರಿದ್ದಾರೆ.

Karabu song
'ಪೊಗರು' ಚಿತ್ರ
author img

By

Published : Aug 10, 2020, 4:19 PM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ ಕರಾಬು ಹಾಡು ಹೊಸ ದಾಖಲೆ ಬರೆದಿದೆ. ಕಳೆದ ವಾರ ಈ ಹಾಡು ತೆಲುಗಿನಲ್ಲಿ ಕೂಡಾ ಬಿಡುಗಡೆಯಾಗಿದ್ದು ಟಾಲಿವುಡ್​​​ನಲ್ಲಿ ಕೂಡಾ ಹವಾ ಎಬ್ಬಿಸಿದೆ. ಕನ್ನಡದಲ್ಲಿ ಈ ಹಾಡು 100 ಮಿಲಿಯನ್ ವೀಕ್ಷಣೆ ಆಗಿದೆ.

'ಪೊಗರು' ಚಿತ್ರಕ್ಕೆ ಶುಭ ಕೋರಿದ ಪ್ರೇಮ್​

ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕರಾಬು ಹಾಡಿನ ಹವಾ ಬಹಳ ಜೋರಾಗಿದೆ ಎಂದೇ ಹೇಳಬಹುದು. ಈ ಕರಾಬು ಹಾಡಿಗೆ ಸ್ಯಾಂಡಲ್​​ವುಡ್ ಸೆಲಬ್ರಿಟಿಗಳು ಶುಭ ಕೋರಿದ್ದಾರೆ. ನಿರ್ದೇಶಕ ಪವನ್ ಒಡೆಯರ್, ನಟ, ನಿರ್ದೇಶಕ ಪ್ರೇಮ್, ಹಾಗೂ ಹಾಸ್ಯನಟ ಕುರಿ ಪ್ರತಾಬ್​​​​​​​​​​​​​​​​​​​​​​​​ಕೂಡಾ ಕರಾಬು ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕನ್ನಡ ಸಿನಿಮಾ ಹಾಡೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿರುವುದು ಹೆಮ್ಮಯ ವಿಷಯ ಎಂದು ಸಂತೋಷ ವ್ಯಕ್ತಪಡಿಸಿ 'ಪೊಗರು' ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ನಿರ್ದೇಶಕ ಪವನ್ ಒಡೆಯರ್ ಶುಭ ಹಾರೈಕೆ

ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಪೊಗರು' ಚಿತ್ರದ ಬಿಡುಗಡೆ ದಿನಾಂಕ ಕೊರೊನಾ ಸಮಸ್ಯೆಯಿಂದ ಮುಂದಕ್ಕೆ ಹೋಗುತ್ತಿದೆ. ಸಿನಿಮಾದ ಕೆಲವೊಂದು ಪ್ಯಾಚ್​ ವರ್ಕ್​ ಬಾಕಿ ಇದ್ದು ಆಗಸ್ಟ್ 16 ರ ನಂತರ ಚಿತ್ರೀಕರಣ ಆರಂಭಿಸಿ ಬೇಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಹೇಳಿದೆ.

ಹಾಸ್ಯ ನಟ ಕುರಿ ಪ್ರತಾಪ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.