ನಾಡಿನಾದ್ಯಂತ ದಸರಾ ಹಬ್ಬದ ಸಂಭ್ರಮ ಕಳೆ ಕಟ್ಟಿದೆ. ಅದೇ ರೀತಿ ಸ್ಯಾಂಡಲ್ವುಡ್ನಲ್ಲಿ ಬಹುತೇಕ ಎಲ್ಲಾ ಸೆಲಬ್ರಿಟಿಗಳ ಮನೆಯಲ್ಲಿ ನವರಾತ್ರಿ ಹಬ್ಬದ ಸಡಗರ ಜೋರಾಗಿದೆ. ಖಾಸಗಿ ಜಾಹೀರಾತೊಂದರ ಚಿತ್ರೀಕರಣದ ವೇಳೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಮಿತಾಬ್ ಬಚ್ಚನ್ ಜೊತೆ ಹಬ್ಬ ಆಚರಿಸಿದ್ದಾರೆ.
ಇನ್ನು ತುಪ್ಪದ ಬೆಡಗಿ ಅಂತಾ ಬ್ರಾಂಡ್ ಆಗಿರುವ ರಾಗಿಣಿ ದ್ವಿವೇದಿ ಮನೆಯಲ್ಲೂ ನವರಾತ್ರಿ ಹಬ್ಬದ ಸಂಭ್ರಮ ಜೋರಾಗಿದೆ. 'ಅಧ್ಯಕ್ಷ ಇನ್ ಅಮೆರಿಕ' ಸಿನಿಮಾದ ಯಶಸ್ಸಿನ ಅಲೆಯಲ್ಲಿರುವ ರಾಗಿಣಿ ಚೆಂದದ ಸೀರೆಯುಟ್ಟು, ತಮ್ಮ ಮನೆಯಲ್ಲಿ ಹಲವು ವಿಶೇಷ ಬಗೆಯ ಅಡುಗೆ ಮಾಡಿ, ಮಕ್ಕಳ ಜೊತೆ ನವರಾತ್ರಿ ಹಬ್ಬ ಆಚರಿಸಿದ್ದಾರೆ. ಪ್ರತಿ ವರ್ಷವೂ ಪಂಜಾಬಿ ಶೈಲಿಯಲ್ಲಿ ರಾಗಿಣಿ ದ್ವಿವೇದಿ ಅನಾಥ ಮಕ್ಕಳ ಜೊತೆ ಹಬ್ಬ ಆಚರಿಸುವಂತೆ ಈ ಬಾರಿ ಕೂಡಾ ಹಬ್ಬ ಆಚರಿಸಿದ್ದಾರೆ. ಕನ್ಯಾ ಪೂಜೆ ಮಾಡಿ ಹಬ್ಬದ ಸಂಭ್ರಮವನ್ನು ದುಪ್ಪಟ್ಟುಗೊಳಿಸಿದ್ದಾರೆ. ನಂತರ ಮನೆಯಲ್ಲಿ ಮಾಡಿರುವ ಅಡುಗೆಯನ್ನು ಮಕ್ಕಳಿಗೆ ಉಣಬಡಿಸುವ ಮೂಲಕ ನವರಾತ್ರಿ ಹಬ್ಬವನ್ನು ಆಚರಿಸಿದ್ದು, ತಂದೆ ರಾಕೇಶ್ ಕುಮಾರ ದ್ವಿವೇದಿ ಮಗಳ ಸಂಭ್ರಮದಲ್ಲಿ ಜೊತೆಯಾಗಿದ್ದಾರೆ.