ETV Bharat / sitara

ಚಂದನವನದಲ್ಲಿ ಹೆಚ್ಚಾದ ಸೈಕ್ಲಿಂಗ್ ಕ್ರೇಜ್​: ಇಲ್ಲಿದೆ ನೋಡಿ ನಿಮ್ಮ ನೆಚ್ಚಿನ ನಟರ ಸೈಕಲ್ ಸವಾರಿ!

author img

By

Published : Jul 30, 2020, 5:35 PM IST

ಸಿನಿಮಾ ತಾರೆಯರಿಗೆ ಸೈಕ್ಲಿಂಗ್ ಅಂದ್ರೆ ಪಂಚ ಪ್ರಾಣ. ಈ ಕ್ರೇಜ್ ಈಗ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿದ್ದು, ಯಾವ ಕಲಾವಿದರು ಸೈಕ್ಲಿಂಗ್ ಮಾಡ್ತಾರೆ ಅನ್ನೋ ಮಾಹಿತಿ ಇಲ್ಲಿದೆ.

sandal wood Actors' Cycle Riding Slug
ಸೈಕ್ಲಿಂಗ್ ಕ್ರೇಜ್

ಸಿನಿಮಾ ಸೆಲೆಬ್ರಿಟಿಗಳ ಬಳಿ ದುಬಾರಿ ಐಶಾರಾಮಿ ಕಾರುಗಳು ಇರುತ್ತವೆ. ಸಿನಿಮಾ ಶೂಟಿಂಗ್ ಹಾಗೂ ಯಾವುದೇ ಕಾರ್ಯಕ್ರಮಗಳಿಗೆ ತಮ್ಮ ದುಬಾರಿ ಕಾರಿನಲ್ಲಿ ಹೋಗುವುದು ಕಾಮನ್. ಹೀಗೆ ಐಶಾರಾಮಿ ಕಾರುಗಳಿದ್ರೂ ಸಿನಿಮಾ ತಾರೆಯರಿಗೆ ಸೈಕ್ಲಿಂಗ್ ಅಂದ್ರೆ ಪಂಚ ಪ್ರಾಣ. ಈ ಕ್ರೇಜ್ ಈಗ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿದೆ.

sandal wood Actors' Cycle Riding Slug
ಗೆಳೆಯರೊಂದಿಗೆ ಗಣೇಶ್

ಈ ಸಾಲಿನಲ್ಲಿ ಪವರ್ ಸ್ಟಾರ್ ಮೊದಲ ಸ್ಥಾನದಲ್ಲಿ ಇದ್ದು, ಫಿಟ್ನೆಸ್ ಬಗ್ಗೆ ಹೆಚ್ಚು ಒತ್ತು ಕೊಡುವ ಪುನೀತ್ ರಾಜ್‍ಕುಮಾರ್ ತಮ್ಮ ಬಳಿ ದುಬಾರಿ ಕಾರುಗಳಿದ್ರೂ ಸ್ನೇಹಿತರ ಜೊತೆಗೂಡಿ ಸೈಕ್ಲಿಂಗ್ ಹೋಗೋದು ಜಾಸ್ತಿ. ಕಳೆದ ವರ್ಷ ರಾಜಕುಮಾರ ಸ್ನೇಹಿತರೊಟ್ಟಿಗೆ ಬೆಂಗಳೂರು ಟೂ ನಂದಿ ಬೆಟ್ಟಕ್ಕೆ ಸೈಕ್ಲಿಂಗ್ ಹೋಗಿದ್ದನ್ನು ಮರೆಯೋದಿಕ್ಕೆ ಆಗಲ್ಲ.

ಕನ್ನಡ ಚಿತ್ರರಂಗದಲ್ಲಿ ವಯಸ್ಸು 58 ಆದ್ರೂ ಯಂಗ್ ಅಂಡ್ ಎನರ್ಜಿಟಿಕ್ ಆಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಫಿಟ್ನೆಸ್ ಹಾಗೂ ಸ್ಪೋರ್ಟ್ಸ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ದುಬಾರಿ ಕಾರುಗಳು ಇದ್ರೂ ಶಿವಣ್ಣ ಸೈಕ್ಲಿಂಗ್ ಹೋಗ್ತಾರೆ. ನಾಗವಾರದ ಮನೆಯ ಪಕ್ಕದಲ್ಲಿರುವ ಪಾರ್ಕ್​​​ನಲ್ಲಿ ಅವರು ಸೈಕ್ಲಿಂಗ್ ‌ಮಾಡ್ತಾರೆ.

sandal wood Actors' Cycle Riding Slug
ಶಿವರಾಜ್ ಕುಮಾರ್

ಜಿಮ್​​​ನಿಂದ ದೂರ ಉಳಿದಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಈಗ ಫಿಟ್ನೆಸ್​​ಗೆ ಹೆಚ್ಚು ಒತ್ತು ಕೊಡ್ತಾರೆ. ಸದ್ಯ ಫ್ಯಾಂಟಮ್ ಸಿನಿಮಾಕ್ಕೆ ಬಾಡಿ ಬಿಲ್ಡ್ ಮಾಡಿರುವ ಕೋಟಿಗೊಬ್ಬ, ಸೈಕಲ್​​ನಲ್ಲಿ ಹೋಗೋದಕ್ಕೆ ಇಷ್ಟ ಪಡ್ತಾರೆ. ಕೆಲ ದಿನಗಳ ಹಿಂದೆ ಕೋಟಿಗೊಬ್ಬ 3 ಸಿನಿಮಾ ಶೂಟಿಂಗ್ ಸ್ಪಾಟ್​​ಗೆ ಮನೆಯಿಂದ ಸೈಕಲ್​​ನಲ್ಲಿ ಹೋಗಿ ಅವರು ಗಮನ ಸೆಳೆದಿದ್ರು.

sandal wood Actors' Cycle Riding Slug
ಕಿಚ್ಚ ಸುದೀಪ್

ವೀಕೆಂಡ್​​ನಲ್ಲಿ ಮಿಸ್ ಮಾಡದೆ ಸೈಕಲ್​​​ನಲ್ಲಿ ಲಾಂಗ್ ರೈಡ್​​ ಹೋಗುವ ಸ್ಟಾರ್​ಗಳು ಅಂದ್ರೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ದೂದ್ ಪೇಡಾ ದಿಗಂತ್. ಗಣಿ ಮತ್ತು ದಿಗಂತ್, ಕೆಲ ಸ್ನೇಹಿತರ ಜೊತೆಗೂಡಿ ಬೆಂಗಳೂರಿನ ಕೆಲವು ಜಾಗಗಲ್ಲಿ ಸೈಕ್ಲಿಂಗ್ ಹೋಗ್ತಾರೆ. ಫಿಟ್ನೆಸ್​​ಗಾಗಿ ಗಣೇಶ್ ಮತ್ತು ದಿಗಂತ್ ಪ್ರತಿ ವೀಕೆಂಡ್​​ನಲ್ಲಿ ಸೈಕ್ಲಿಂಗ್ ಹೋಗ್ತಾರೆ.

sandal wood Actors' Cycle Riding Slug
ದಿಗಂತ್ ಹಾಗೂ ಗಣೇಶ್

ದಿಗಂತ್ ಪತ್ನಿ ಐಂದ್ರಿತಾ ರೇ ಜೊತೆಗೂಡಿ ಬೆಂಗಳೂರಿನ ಬ್ಯೂಟಿಫುಲ್ ಲೊಕೇಷನ್​​ಗಳಿಗೆ ಸೈಕ್ಲಿಂಗ್ ಹೋಗ್ತಾರೆ. ಸೈಕಲ್​​ನಲ್ಲಿ ರೈಡಿಂಗ್ ಹೋಗೋದನ್ನ ಸಖತ್ ಎಂಜಾಯ್ ಮಾಡ್ತಾರೆ.

sandal wood Actors' Cycle Riding Slug
ದಿಗಂತ್ ಹಾಗೂ ಐಂದ್ರಿತಾ

ಬುದ್ಧಿವಂತ ನಿರ್ದೇಶಕ ಕಮ್ ನಟ ಉಪೇಂದ್ರ ಅವರಿಗೆ ಸೈಕ್ಲಿಂಗ್ ಅಂದ್ರೆ ತುಂಬಾ ಇಷ್ಟ. ಲಾಕ್​​ಡೌನ್ ಟೈಮ್​ನಲ್ಲಿ ತಮ್ಮ ಉಪ್ಪಿ ರೆಸಾರ್ಟ್​ನಲ್ಲಿರುವ ಉಪೇಂದ್ರ, ಗೆಳೆಯ ಗುರುಕಿರಣ್ ಜೊತೆಗೂಡಿ ಸೈಕ್ಲಿಂಗ್ ಹೋಗಿದ್ರು. ಚೆಲುವಿನ ಚಿತ್ತಾರದ ಚೆಲುವೆ ಅಮೂಲ್ಯ ಕೂಡ ಪತಿ ಜಗದೀಶ್ ಜೊತೆ ಸೈಕ್ಲಿಂಗ್ ಹೋಗುವುದಕ್ಕೆ ಇಷ್ಟ ಪಡ್ತಾರೆ.

sandal wood Actors' Cycle Riding Slug
ಗಣೇಶ್ ಹಾಗೂ ಅಮೂಲ್ಯ ದಂಪತಿ

ಒಟ್ಟಾರೆ ಸ್ಯಾಂಡಲ್​​ವುಡ್ ಸ್ಟಾರ್​​ಗಳ ಹತ್ತಿರ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳಿದ್ರೂ ಸೈಕ್ಲಿಂಗ್ ಅಂದ್ರೆ ಇಷ್ಟ ಪಡ್ತಾರೆ ಅನ್ನೋದಿಕ್ಕೆ ಈ ಕಲಾವಿದರೇ ಸಾಕ್ಷಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.