ETV Bharat / sitara

'ಪುಕ್ಸಟ್ಟೆ ಲೈಫು' ಪ್ರಚಾರಕ್ಕೆ ಬಂದ ಸಂಚಾರಿ ವಿಜಯ್: ಸ್ಯಾಂಡಲ್​ವುಡ್​ ಮೇರು ನಟರು ಸಾಥ್​​ - ಸ್ಯಾಂಡಲ್ ವುಡ್

ಟ್ರೇಲರ್ ಹಾಗು ಚಿತ್ರದ ಶೀರ್ಷಿಕೆಯಿಂದಲೇ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆಯುತ್ತಿರುವ 'ಪುಕ್ಸಟ್ಟೆ ಲೈಫು' ಸಿನಿಮಾ ಸೆ.24ರಂದು ಥಿಯೇಟರ್​​ಗೆ ಲಗ್ಗೆಯಿಡುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ತಂಡ ಪ್ರಮೋಶನ್​​ಗಾಗಿ ಸಂಚಾರಿ ವಿಜಯ್ ಅವರನ್ನ ಕಾರ್ಟೂನ್ ರೂಪದಲ್ಲಿ ಬಳಸಿಕೊಂಡು ವಿಭಿನ್ನ ಪ್ರಚಾರಕ್ಕೆ ಕೈ ಹಾಕಿದೆ.

sanchari vijay new movie puksatte life promotion
'ಪುಕ್ಸಟ್ಟೆ ಲೈಫು' ಸಿನಿಮಾ ಪ್ರಚಾರ
author img

By

Published : Sep 20, 2021, 6:39 PM IST

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಬದುಕಿರುವಾಗ ಸಾಲು ಸಾಲು ಸಿನಿಮಾಗಳ‌ ನಟನೆ ಜತೆಗೆ ಬಿಡುಗಡೆಗೆ ಸಿದ್ಧವಾಗಿದ್ದವು. ಸಂಚಾರಿ ವಿಜಯ್ ಬೈಕ್ ಅಪಘಾತದಲ್ಲಿ ಅಕಾಲಿಕವಾಗಿ ನಿಧನರಾಗಿದ್ದು, ಸ್ಯಾಂಡಲ್ ವುಡ್ ನ ಅಪಾರ ಅಭಿಮಾನಿಗಳನ್ನು ಅಗಲಿ ಹೋಗಿದ್ದಾರೆ. ಇದೀಗ ಟ್ರೇಲರ್ ಹಾಗು ಚಿತ್ರದ ಶೀರ್ಷಿಕೆಯಿಂದಲೇ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆಯುತ್ತಿರುವ 'ಪುಕ್ಸಟ್ಟೆ ಲೈಫು' ಸಿನಿಮಾ ಸೆ.24ರಂದು ಥಿಯೇಟರ್​​ಗೆ ಲಗ್ಗೆಯಿಡಲು ಸಜ್ಜಾಗಿದೆ.

ಈ ಹಿನ್ನೆಲೆಯಲ್ಲಿ ಸಿನಿಮಾ ತಂಡ ಪ್ರಮೋಶನ್​​ಗಾಗಿ ಸಂಚಾರಿ ವಿಜಯ್ ಅವರನ್ನ ಕಾರ್ಟೂನ್ ರೂಪದಲ್ಲಿ ಬಳಸಿಕೊಂಡು ವಿಭಿನ್ನ ಪ್ರಚಾರಕ್ಕೆ ಕೈ ಹಾಕಿದೆ. ಕನ್ನಡ ಚಿತ್ರರಂಗದ ದಿಗ್ಗಜ ನಟರಾದ ಡಾ.ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಹಲವು ಕಲಾವಿದರನ್ನು ಬಳಸಿಕೊಂಡು ಅವರೊಂದಿಗೆ ಸಂಚಾರಿ ವಿಜಯ್ ತೆರೆ ಮೇಲೆ ತಮ್ಮ ಚಿತ್ರವನ್ನು ಬೆಂಬಲಿಸುವಂತೆ ಕಾರ್ಟೂನ್ ರೂಪದಲ್ಲಿ ಸಿದ್ಧಪಡಿಸಲಾಗಿದೆ‌.

ಇದರಲ್ಲಿ ತಮ್ಮ'ಪುಕ್ಸಟ್ಟೆ ಲೈಫು' ಟ್ರೇಲರ್ ಮೆಚ್ಚಿದ ನೀವೆಲ್ಲರೂ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಿ ಎಂದು ಸಂಚಾರಿ ವಿಜಯ್ ಮನವಿ ಮಾಡಿದ್ದಾರೆ. ಅದಕ್ಕೆ ಎಲ್ಲ ಹಿರಿಯ ಕಲಾವಿದರು ಧ್ವನಿಗೂಡಿಸಿದ್ದಾರೆ. ಮಾತ್ರವಲ್ಲ, ಕನ್ನಡಿಗರು ಯಾವತ್ತೂ ಒಂದೊಳ್ಳೆ ಸಿನಿಮಾ ಕೈ ಬಿಡಲ್ಲ ಎಂದು ಅಂಬರೀಶ್ ಅವರು ವಿಜಯ್​​ಗೆ ಧೈರ್ಯ ತುಂಬಿದ್ದಾರೆ.

ಅಲ್ಲದೇ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದ ಸಂಚಾರಿ ವಿಜಯ್ ಗೆ ನಟ ಶಂಕರ ನಾಗ್ ನನ್ನ ತರನೇ ಬೇಗ ಬಂದು ಬಿಟ್ಟೆ ಎಂದು ಕಾಲೆಳೆದರೆ, ಹೌದಪ್ಪಾ ಹೇಳಿದ್ರೆ ನಾನು ನಿನ್ನ ಜೊತೆನೇ ಬರ್ತಿದ್ದೆ ಎಂದು ಅಂಬಿ ಕಿಚಾಯಿಸಿದಂತೆ ವಿಡಿಯೋವನ್ನ‌ ಸಿದ್ಧಪಡಿಸಲಾಗಿದೆ.

'ಪುಕ್ಸಟ್ಟೆ ಲೈಫು' ಸಿನಿಮಾ ಪ್ರಚಾರಕ್ಕೆ ಬಂದ ಸಂಚಾರಿ ವಿಜಯ್..

ಈ ಚಿತ್ರದಲ್ಲಿ ಸಂಚಾರಿ ವಿಜಯ್ ಬೀಗ ರಿಪೇರಿ ಮಾಡುವ ಕಾಯಕದ ಶಹಜಹಾನ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅತ್ತ ಬೀಗ ರಿಪೇರಿಯಿಂದ ಬರುವ ಹಣದಿಂದ ಸಂಸಾರದ ಭಾರ ಹೊರಲಾರದೆ ಕಂಗಾಲಾಗಿರುವ ಶಹಜಹಾನ್ ಈ ವ್ಯವಸ್ಥೆಯ ಚಕ್ರದ ಸುಳಿಗೆ ಸಿಲುಕಿ ನಲುಗುವ ಅಪರೂಪದ ಕಥೆ 'ಪುಕ್ಸಟ್ಟೆ ಲೈಫು' ಸಿನಿಮಾದಲ್ಲಿದೆ.

ಇದೊಂದು ಭಿನ್ನ ಕಥಾ ಹಂದರದ ಹೊಸ ಅಲೆಯ ಚಿತ್ರ. ಈ ಚಿತ್ರದಲ್ಲಿ ಸಂಚಾರಿ ವಿಜಯ್‌ಗೆ ಜೋಡಿಯಾಗಿ ಮಾತಂಗಿ ಪ್ರಸನ್ನ ನಟಿಸಿದ್ದಾರೆ. ಅಚ್ಯುತ್ ಕುಮಾರ್ ಮತ್ತು ರಂಗಾಯಣ ರಘು ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿಯವರ ಹಿನ್ನೆಲೆ ಸಂಗೀತ ಮತ್ತು ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ನಾಗರಾಜ್ ಸೋಮಯಾಜಿ ಹಣ ಹಾಕಿದ್ದಾರೆ. ಕೊನೆಯಲ್ಲಿ ಎಲ್ಲ ಕಲಾವಿದರು ಸೆ. 24 ರಂದು ಬಿಡುಗಡೆಯಾಗುತ್ತಿರುವ ಸಂಚಾರಿ ವಿಜಯ್ ಅಭಿನಯದ ಸಿನಿಮಾ ವೀಕ್ಷಿಸುವಂತೆ ಮತ್ತೊಮ್ಮೆ ಮನವಿ ಮಾಡಿದ್ದಾರೆ.

ನಿರ್ದೇಶಕ ಅರವಿಂದ್ ಕುಪ್ಳೀಕರ್ ನಿರ್ದೇಶನ ಮಾಡಿರುವ 'ಪುಕ್ಸಟ್ಟೆ ಲೈಫು' ಲೈಫು ಸಿನಿಮಾಗೆ ಸ್ಯಾಂಡಲ್ ವುಡ್ ದಿಗ್ಗಜ ನಟರು ಹಾರೈಸಿರುವುದು ಚಿತ್ರತಂಡಕ್ಕೆ ಆತ್ಮವಿಶ್ವಾಸ ಮೂಡಿಸಿದೆ.

ಇದನ್ನೂ ಓದಿ: ಅಯ್ಯಪ್ಪನ ಭಜನೆ ಮಾಡ್ತಿದೆ ಪುಕ್ಸಟ್ಟೆ ಲೈಫು ಚಿತ್ರ ತಂಡ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.