ETV Bharat / sitara

ಕನಸನ್ನು ನನಸು ಮಾಡಿಕೊಂಡಿದ್ದ ವಿಜಯ್​.. ಹುಟ್ಟುಹಬ್ಬದಂದು ಸಂಚಾರಿಯ​ ಮೆಲುಕು

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ನಟನೆ ಮೂಲಕ ಗುರುತಿಸಿಕೊಂಡಿದ್ದ ನಟ ಸಂಚಾರಿ ಇಂದು ನಮ್ಮೊಂದಿಗಿದ್ದಿದ್ದರೆ 39ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದ್ರೆ ಅಪಘಾತಕ್ಕೀಡಾಗಿ ಹಲವು ನೆನಪುಗಳನ್ನು ನಮ್ಮೊಂದಿಗೆ ಬಿಟ್ಟು ಹೋಗಿದ್ದಾರೆ.

author img

By

Published : Jul 17, 2021, 11:28 AM IST

sanchari vijay life and achievements
ಸಂಚಾರಿ ವಿಜಯ್ ನಡೆದು ಬಂದ ಹಾದಿ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ನಟನೆ ಮೂಲಕ ಗುರುತಿಸಿಕೊಂಡಿದ್ದ ನಟ ಸಂಚಾರಿ ವಿಜಯ್ ಇದೀಗ ನೆನಪು ಮಾತ್ರ. ಕನ್ನಡ ಚಿತ್ರರಂಗದಲ್ಲಿ ಹತ್ತಾರು ವಿಶಿಷ್ಠ ಪಾತ್ರಗಳನ್ನು ಮಾಡಬೇಕಿದ್ದ ಸಂಚಾರಿ ವಿಜಯ್ ಜೂನ್ 15ರ ರಾತ್ರಿ ಬೈಕ್ ಅಪಘಾತಕ್ಕೆ ತುತ್ತಾಗಿ, ಇಹಲೋಕ ತ್ಯಜಿಸಿದರು. ಸಂಚಾರಿ ವಿಜಯ್ ಇಂದು ನಮ್ಮೊಂದಿಗಿದ್ದಿದ್ದರೆ 39ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದ್ರೆ ಅಪಘಾತಕ್ಕೀಡಾಗಿ ಹಲವು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ.

ಸಂಚಾರಿ ವಿಜಯ್ ಜನನ:

1983ರ ಜುಲೈ 17ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿಯ ರಂಗಾಪುರ ಗ್ರಾಮದಲ್ಲಿ ಸಂಚಾರಿ ವಿಜಯ್ ಜನಿಸುತ್ತಾರೆ. ಸರಳ ವ್ಯಕ್ತಿತ್ವ ಹೊಂದಿದ್ದ ಸಂಚಾರಿ ವಿಜಯ್ ತಾವು ಅಂದುಕೊಂಡಂತೆ ನಿಜ ಜೀವನದಲ್ಲಿ ಸಾಧಿಸಿ ಹೋಗಿದ್ದಾರೆ. ಹೌದು, ಬಾಲ್ಯದಿಂದಲೂ ಸಿನಿಮಾ ನಟನಾಗುವ ಕನಸು ಕಂಡಿದ್ದ, ಸಂಚಾರಿ ವಿಜಯ್ ನಟನಾಗಿದ್ದು ಮಾತ್ರ ಇಂಟ್ರಸ್ಟಿಂಗ್.

ಬಾಲ್ಯದಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ವಿಜಯ್​:

ವಿಜಯ್ ಕುಮಾರ್ ಎಂಬದು ಸಂಚಾರಿ ವಿಜಯ್ ಅವ್ರ ಮೂಲ ಹೆಸರು. ಕಲೆ ಅನ್ನೋದು ರಕ್ತಗತವಾಗಿ ಬರುತ್ತೆ ಅನ್ನೋದಕ್ಕೆ ಪ್ರತ್ಯಕ್ಷ ಉದಾಹರಣೆ ಸಂಚಾರಿ ವಿಜಯ್. ತಂದೆ ಬಸವರಾಜಯ್ಯನವರು ಚಿತ್ರ ಕಲಾವಿದರು. ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮನವರು, ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ರೇಡಿಯೋದಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡಿದ್ದಾರೆ.

sanchari vijay
ಸಂಚಾರಿ ವಿಜಯ್​​

ಇಂತಹ ಕಲಾರಾಧಕರ ಕುಟುಂಬದಲ್ಲಿ ಜನಿಸಿದ ವಿಜಯ್ ಕುಮಾರ್ ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಶಿಕ್ಷಣ-ವೃತ್ತಿ:

ಪ್ರತಿಷ್ಠಿತ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ, ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ವಿಜಯ್ ಹಲವು ತಿಂಗಳುಗಳ ಕಾಲ ಕೆಲಸ ಮಾಡಿದ್ದಾರೆ. ಆದರೆ ವಿಜಯ್‌ಗೆ ಜೀವನದಲ್ಲಿ ಉಪನ್ಯಾಸಕ ವೃತ್ತಿ ಅಷ್ಟೊಂದು ತೃಪ್ತಿ ನೀಡಿರಲಿಲ್ಲ. ವಿಜಯ್ ಅವರನ್ನು ರಂಗಭೂಮಿ ಹಾಗು ಸಿನಿಮಾ ಕೈಬೀಸಿ ಕರೆಯುತ್ತಿತ್ತು.

ನಟನಾಗುವ ಕನಸು:

ಕಾಲೇಜ್ ಟೀಚಿಂಗ್ ಮಾಡುತ್ತಿದ್ದ ವಿಜಯ್ ಬಾಲ್ಯದಿಂದಲೂ ನಟನಾಗುವ ಕನಸು ಕಂಡಿದ್ದರು‌ .ಅದರಂತೆ ವಿಜಯ್ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ತಮ್ಮ ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹತ್ತು ವರ್ಷಗಳಿಂದ ಸಂಚಾರಿ ವಿಜಯ್, ಥಿಯೇಟರ್‌ನಲ್ಲಿ ರಂಗತಂಡದ ಹಲವಾರು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಕನ್ನಡದ ಹಲವಾರು ರಂಗತಂಡಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲದೇ, ಎರಡು ನಾಟಕಗಳನ್ನು ನಿರ್ದೇಶಿಸಿರೋದು ವಿಜಯ್ ಪ್ರತಿಭೆಗೆ ಸಾಕ್ಷಿ.

ಸಂಚಾರಿ ಹೆಸರು ಬಂದಿದ್ದು ಹೀಗೆ:

ವಿಜಯ್ ಕುಮಾರ್ ಮುಂದೆ ಸಂಚಾರಿ ಎಂಬ ಹೆಸರು ಸೇರಿಕೊಳ್ಳುವುದಕ್ಕೆ ಒಂದು ಕಾರಣವಿದೆ. ಸಂಚಾರಿ ಹೆಸರಿನ ನಾಟಕ ತಂಡದಲ್ಲಿ ವಿಜಯ್ ಒಬ್ಬರಾಗಿರುವುದರಿಂದ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂತು. ಅಲ್ಲಿಂದ ವಿಜಯ್ ಕುಮಾರ್ ಬದಲು ಸಂಚಾರಿ ವಿಜಯ್ ಎಂಬ ಹೆಸರು ಸೇರಿಕೊಂಡಿದೆ.

ಚಿತ್ರರಂಗಕ್ಕೆ ಎಂಟ್ರಿ:

2011ರಲ್ಲಿ ತೆರೆಗೆ ಬಂದ ರಂಗಪ್ಪ ಹೋಗ್​ಬಿಟ್ನಾ ಸಿನಿಮಾ ಮೂಲಕ ಸಂಚಾರಿ ವಿಜಯ್​ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ. ಆದರೆ ಈ ಸಿನಿಮಾ ಸಂಚಾರಿ ವಿಜಯ್‌ಗೆ ಅಷ್ಟೊಂದು ಹೆಸರು ತಂದುಕೊಡುವುದಿಲ್ಲ. ಈ ಚಿತ್ರದ ಬಳಿಕ, ದಾಸವಾಳ, ಒಗ್ಗರಣೆ ಚಿತ್ರಗಳಲ್ಲಿ ಅವರು ನಟಿಸುತ್ತಾರೆ. ಈ ಚಿತ್ರಗಳು ಕೂಡ ವಿಜಯ್ ಅಂದುಕೊಂಡಂತೆ ಯಶಸ್ಸು ಸಿಗುವುದಿಲ್ಲ.

nanu avanalla avalu film
ಯಶಸ್ಸು ತಂದುಕೊಟ್ಟ ಚಿತ್ರ

ಅತ್ಯುತ್ತಮ ನಟ - ರಾಷ್ಟ್ರ ಪ್ರಶಸ್ತಿ:

2014ರಲ್ಲಿ ಸಂಚಾರಿ ವಿಜಯ್ ನಟಿಸಿದ ಹರಿವು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. 2015ರಲ್ಲಿ ತೆರೆಗೆ ಬಂದ ನಾನು ಅವನಲ್ಲ ಅವಳು ಈ ಚಿತ್ರದಲ್ಲಿ ಮಾಡಿರುವ ಪಾತ್ರ ಸಂಚಾರಿ ವಿಜಯ್ ಯಾರು ಅನ್ನೋದನ್ನು ಇಡೀ ಭಾರತೀಯ ಚಿತ್ರರಂಗಕ್ಕೆ ಪರಿಚಯಿಸುತ್ತೆ. ಯಾಕಂದರೆ ಈ ಚಿತ್ರದ ಅಮೋಘ ಅಭಿನಯಕ್ಕಾಗಿ ಅತ್ಯುತ್ತಮ ನಟ ಎಂಬ ರಾಷ್ಟ್ರ ಪ್ರಶಸ್ತಿಯನ್ನು ಸಂಚಾರಿ ವಿಜಯ್ ಪಡೆದುಕೊಳ್ಳುತ್ತಾರೆ. ಇಲ್ಲಿಂದ ಸಂಚಾರಿ ವಿಜಯ್ ಕನ್ನಡ ಚಿತ್ರರಂಗಲ್ಲಿ ಕಿಲ್ಲಿಂಗ್ ವೀರಪ್ಪನ್, ವರ್ತಮಾನ, ಕೃಷ್ಣ ತುಳಸಿ, ನಾತಿಚರಾಮಿ, ಜೆಂಟಲ್ ಮ್ಯಾನ್, ಆಕ್ಟ್ 1978 ಹೀಗೆ ಹತ್ತಾರು ಸಿನಿಮಾಗಳಲ್ಲಿ ಸೈ ಎನ್ನಿಸಿಕೊಂಡಿದ್ದರು.

ಅನಂತವಾಗಿರು ಪುಸ್ತಕ ಬಿಡುಗಡೆ :

ಸದ್ಯಕ್ಕೆ ಸಂಚಾರಿ ವಿಜಯ್ ಅಭಿನಯದ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಫಿರಂಗಿಪುರ, ತಲೆದಂಡ, ಮೇಲೊಬ್ಬ ಮಾಯಾವಿ ಹೀಗೆ ಹಲವು ಚಿತ್ರಗಳು ರಿಲೀಸ್ ಆಗಬೇಕಿದೆ. ಈಗಾಗಲೇ ಸಂಚಾರಿ ವಿಜಯ್ ಹುಟ್ಟು ಹಬ್ಬದ ಅಂಗವಾಗಿ ಲಂಕೆ, ಫಿರಂಗಿಪುರ ಚಿತ್ರದ ಪೋಸ್ಟರ್​ಗಳನ್ನ ಬಿಡುಗಡೆ ಮಾಡಲಾಗಿದೆ‌. ಹಾಗೇ ಸಂಚಾರಿ ವಿಜಯ್ ಜೀವನದ ಬಗ್ಗೆ 'ಅನಂತವಾಗಿರು' ಎಂಬ ಪುಸ್ತಕ ಕೂಡ ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಮರೆಯಲಾಗದ ಸಂಚಾರಿ.. ವಿಜಯ್​ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್..

ರಂಗಭೂಮಿ, ಸಿನಿಮಾ ಹಾಗು ಸಂಗೀತದಲ್ಲಿ ತನ್ನದೇ ಛಾಪು ಮೂಡಿಸಿದ್ದ ಸಂಚಾರಿ ವಿಜಯ್ ಬೇಗ ತಮ್ಮ ಬದುಕಿನ ಪಯಾಣ ಮುಗಿಸಿದ್ದು, ಇದೀಗ ನಮಗೆ ನೆನಪು ಮಾತ್ರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.