ಕಾಂಟ್ರೋವರ್ಸಿಯಲ್ ಕಾಮೆಂಟ್ ಹಾಗೂ ಹೇಳಿಕೆಗಳಿಂದ ಹೆಚ್ಚು ಗಮನ ಸೆಳೆದಿರುವ ಸ್ಯಾಂಡಲ್ವುಡ್ ನಟಿ ಸಂಯುಕ್ತಾ ಹೆಗಡೆ ಬೋಲ್ಡ್ ಹಾಗೂ ಹಾಟೆಸ್ಟ್ ಫೋಟೋಗಳನ್ನು ಜಾಲತಾಣದಲ್ಲಿ ಹಾಕಿ ಮತ್ತೆ ಗಮನ ಸೆಳೆದಿದ್ದಾರೆ.
ತಮ್ಮ ಸೌಂದರ್ಯದ ಬಗ್ಗೆ ಆಗಾಗ್ಗೆ ಜಾಲತಾಣದಲ್ಲಿ ತರಹೇವಾರು ಕಾಮೆಂಟ್ ಮಾಡುತ್ತಿದ್ದ ನೆಟಿಜನ್ಗಳಿಗೆ ಈ ಬಾರಿ ತೀಕ್ಷ್ಣವಾಗಿ ಉತ್ತರ ಕೊಟ್ಟಿರುವ ಕಿರಿಕ್ ಬೆಡಗಿ 'ಅರ್ಥ ಮಾಡಿಕೊಳ್ಳುವವರು ಇದನ್ನು ಅರ್ಥೈಸಿಕೊಳ್ಳಲಿ' ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ. ನಟಿಯ ಬಿಕಿನಿ ತೊಟ್ಟ ಹಾಟ್ ಫೋಟೋ ಮತ್ತು ಅವರ ಇನ್ಸ್ಟಾದಲ್ಲಿನ ಕ್ಯಾಪ್ಶನ್ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಾನು ತೆಳ್ಳಗಿರುವುದು ಎಷ್ಟು ಅದೃಷ್ಟ ಎಂದು ನಿರಂತರವಾಗಿ ತಿಳಿಸಿಕೊಟ್ಟಿದ್ದಕ್ಕೆ, ನನ್ನ ದೇಹದ ಪ್ರಕೃತಿಯ ಬಗ್ಗೆ ಗಮನಹರಿಸಿರುವುದಕ್ಕೆ, ನಾನು ಫಿಟ್ ಆಗಿರಲು ಮಾಡುವ ಎಲ್ಲ ಪ್ರಯತ್ನಗಳನ್ನು ತಿರಸ್ಕರಿಸಿ ನಾನು ಪುಣ್ಯ ಮಾಡಿದ್ದೇನೆ ಎಂದು ಹೇಳುತ್ತಿರುವುದಕ್ಕೆ, 45 ಕೆಜಿಯಿಂದ 50ಕೆಜಿ ಆಗುವವರೆಗೆ ನಾನು ಮಾಡಿದ ಪ್ರಯತ್ನಗಳನ್ನು ತಿರಸ್ಕರಿಸುವುದಕ್ಕೆ ಧನ್ಯವಾದಗಳು.
- " class="align-text-top noRightClick twitterSection" data="
">
ಅಲ್ಲದೇ ನೀನು ಏನು ಬೇಕಾದರೂ ತಿನ್ನು, ಅದು ನಿನ್ನ ದೇಹ ತೋರಿಸಲ್ಲ ಎಂದು ಹೇಳಿದ್ದಕ್ಕೆ, ತೆಳ್ಳಗಿರುವವರು ಫಿಟ್ ಆಗಿರೋದು ಲೆಕ್ಕಕ್ಕೆ ಬರೋದಿಲ್ಲ, ದಪ್ಪಗಿರುವವರು ಫಿಟ್ ಆಗಿರೋದು ಮಾತ್ರ ಲೆಕ್ಕಕ್ಕೆ ಬರುತ್ತದೆ ಎಂದು ತಿಳಿಸಿಕೊಟ್ಟಿದ್ದಕ್ಕೂ ಧನ್ಯವಾದಗಳು ಎಂದು ತಮ್ಮ ದೇಹ ಸೌಂದರ್ಯದ ಬಗ್ಗೆ ಕಾಳಜಿ ತೋರಿಸಿ ಕಾಮೆಂಟ್ ಮಾಡಿದವರಿಗೆ ಕಿರಿಕ್ ಸುಂದರಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಇಷ್ಟಕ್ಕೆ ತಮ್ಮ ವಿವರಣೆ ನಿಲ್ಲಿಸದ ಸಂಯುಕ್ತಾ, ಶಾಂತಿಯಿಂದ ಪ್ರತಿಯೊಬ್ಬರು ಒಂದೊಂದು ಹೋರಾಟ ಮಾಡುತ್ತಿರುತ್ತಾರೆ. ನೀವು ಏನು ನೋಡುತ್ತೀರೋ ಅದರ ಆಧಾರದ ಮೇಲೆ ನಿರ್ಣಯಕ್ಕೆ ಬರಬೇಡಿ. ಕೆಲವರು ತೂಕ ಕಳೆದುಕೊಳ್ಳಲು ಹೋರಾಟ ಮಾಡಿದರೆ, ಕೆಲವರು ತೂಕ ಹೆಚ್ಚಿಸಿಕೊಳ್ಳಲು ಹೋರಾಟ ಮಾಡುತ್ತಿರುತ್ತಾರೆ. ಕೆಲವರು ಫಿಟ್ ಆಗಿರಲು ನಿರಂತರ ಅವರ ಪ್ರಯತ್ನ ಹಾಕುತ್ತಿರುತ್ತಾರೆ. ಯಾರೂ ಅದೃಷ್ಟವಂತರಲ್ಲ ಎಂದಿದ್ದಾರೆ.
ಎಲ್ಲರೂ ಹುಟ್ಟಿನಿಂದ ಪರ್ಫೆಕ್ಟ್ ಅಲ್ಲ, ಪರಿಪೂರ್ಣತೆಯನ್ನು ಪಡೆಯಲು ಯಾವುದೇ ಪ್ರಯಾಣವಿಲ್ಲ. ಏಕೆಂದರೆ, ಅದು ಅಸ್ತಿತ್ವದಲ್ಲಿಲ್ಲ. ಮಾನಸಿಕವಾಗಿ, ದೈಹಿಕವಾಗಿ ಫಿಟ್ ಆಗಿರೋದು ಮುಖ್ಯ. ನಿಮ್ಮ ದೇಹವನ್ನು ಪೋಷಿಸುವುದು ಮತ್ತು ತರಬೇತಿ ನೀಡುವುದು ಮುಖ್ಯ ಎಂದು ನಟಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಅಜಯ್ ರಾವ್ 'ಲವ್ ಯು ರಚ್ಚು' ಚಿತ್ರಕ್ಕೆ ಆ್ಯಕ್ಷನ್ ಪ್ರಿನ್ಸ್ ಸಪೋರ್ಟ್