ETV Bharat / sitara

ಕೇರಳದಲ್ಲಿ ಸಮಂತಾ : ಅತಿರಪ್ಪಿಲ್ಲಿ ಜಲಪಾತದ ಬಳಿ ಧ್ಯಾನ ಮಾಡಿದ ನಟಿ ವಿಡಿಯೋ - ಅತಿರಪ್ಪಿಲ್ಲಿ ಜಲಪಾತದ ಬಳಿ ಸ್ಯಾಮ್​ ಧ್ಯಾನ

ಸದ್ಯ ನಟಿ ಸಮಂತಾ ಕೇರಳದ ಅತಿರಪ್ಪಿಲ್ಲಿ ಫಾಲ್ಸ್‌ಗೆ ಭೇಟಿ ನೀಡಿದ್ದು, ಗುಲಾಬಿ ಬಣ್ಣದ ಈಜುಡುಗೆಯಲ್ಲಿ ಬೆರಗುಗೊಳಿಸುವ ಚಿತ್ರಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..

Samantha is in Kerala Athirappilly Falls
ಕೇರಳದ ಅತಿರಪ್ಪಿಲ್ಲಿ ಜಲಪಾತದಲ್ಲಿ ಸಮಂತಾ
author img

By

Published : Feb 20, 2022, 5:22 PM IST

ಹೈದರಾಬಾದ್​​: ನಟ ಅಲ್ಲು ಅರ್ಜುನ್​ ಅಭಿನಯದ ಬ್ಲಾಕ್‌ಬಸ್ಟರ್ ಚಿತ್ರ ಪುಷ್ಪದಲ್ಲಿ ಸೊಂಟ ಬಳುಕಿಸಿ ನಟಿ ಸಮಂತಾ ಸಾಕಷ್ಟು ಜನಪ್ರಿಯತೆ ಪಡೆದಿದ್ದು, ಅವರ ಬೇಡಿಕೆ ಕೂಡ ಹೆಚ್ಚಾಗಿದೆ. ಇದರ ಜೊತೆಗೆ ನಟ ನಾಗಚೈತನ್ಯರಿಂದ ಬೇರ್ಪಟ್ಟಾಗಿನಿಂದ ಸಮಂತಾ ತನ್ನ ಮನಸ್ಸು ಮತ್ತು ಆತ್ಮ ಶಾಂತಿಗಾಗಿ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.

ಕೇರಳದ ಅತಿರಪ್ಪಿಲ್ಲಿ ಜಲಪಾತದಲ್ಲಿ ಸಮಂತಾ

ಸದ್ಯ ನಟಿ ಸಮಂತಾ ಕೇರಳದ ಅತಿರಪ್ಪಿಲ್ಲಿ ಫಾಲ್ಸ್‌ಗೆ ಭೇಟಿ ನೀಡಿದ್ದು, ಗುಲಾಬಿ ಬಣ್ಣದ ಈಜುಡುಗೆಯಲ್ಲಿ ಬೆರಗುಗೊಳಿಸುವ ಚಿತ್ರಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಜೀವನದಲ್ಲಿ 'ಏರಿಳಿತಗಳು ಸಹಜ, ನೀವು ಅದನ್ನು ಆನಂದಿಸಿ ಅಥವಾ ಅದು ಹೇಗೆ ಬರುತ್ತೋ ಹಾಗೆ ತೆಗೆದುಕೊಳ್ಳಿ' ಎನ್ನುವ ಜೀವನದ ಸಂದೇಶವನ್ನು ಸಾರುವ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ.

ನಟಿ ಬಂಡೆಗಳ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದು, ಸದ್ಗುರುಗಳ ಉಲ್ಲೇಖವನ್ನು ಬರೆದಿದ್ದಾರೆ. 'ಧ್ಯಾನವು ನಿಮ್ಮ ಅಸ್ತಿತ್ವದ ಸೌಂದರ್ಯವನ್ನು ಅರಿತುಕೊಳ್ಳುವ ಸಾಧನ'ವಾಗಿದೆ ಎಂದು ಬರೆದುಕೊಂಡಿದ್ದಾರೆ.

ಸಮಂತಾ 2022ರಲ್ಲಿ ತಮಿಳು ರೊಮ್ಯಾಂಟಿಕ್ ಹಾಸ್ಯ ಕಾತುವಾಕುಲ ರೆಂದು ಕಾದಲ್ ಮತ್ತು ತೆಲುಗಿನ ಪೌರಾಣಿಕ ನಾಟಕ ಶಾಕುಂತಲಂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ದೊಡ್ಮನೆ ಕುಟುಂಬಕ್ಕೆ ಮತ್ತೊಂದು ಆಘಾತ: ಅಶ್ವಿನಿ ಪುನೀತ್​ ರಾಜ್​ಕುಮಾರ್​ ತಂದೆ ನಿಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.