ಹೈದರಾಬಾದ್: ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ಸಮಂತಾ ರುತ್ ಪ್ರಭು ಇದೀಗ ಹಾಲಿವುಡ್ಗೂ ಎಂಟ್ರಿ ಕೊಡ್ತಾ ಇರೋದು ನಮ್ಮೆಲ್ಲರಿಗೂ ತಿಳಿದಿದೆ. 'ಏಮ್ ಮಾಯಾ ಚೇಸಾವೆ' ಸಿನಿಮಾದಿಂದ 'ಫ್ಯಾಮಿಲಿ ಮ್ಯಾನ್-2' ವೆಬ್ ಸರಣಿವರೆಗೂ ಇವರು ನಟನೆ ವಿಭಿನ್ನವಾದದ್ದು.
ಇತ್ತೀಚೆಗಷ್ಟೇ ಮ್ಯಾಗಜಿನ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಟೈಪ್ಕಾಸ್ಟ್ನಿಂದ ಹೇಗೆ ತಪ್ಪಿಸಿಕೊಂಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ಯಾಮ್, "ನಾನು ಯಾವಾಗಲೂ ಬಬ್ಲಿ, ಪಕ್ಕದ ಮನೆಯ ಮುದ್ದಾದ ಹುಡುಗಿಯಿಂದ ಹಿಡಿದು ಧೈರ್ಯವಂತ ವ್ಯಕ್ತಿಯಾಗಿ ಟೈಪ್‌ಕಾಸ್ಟ್ ವಿರುದ್ಧ ಹೋರಾಡುತ್ತೇನೆ. ನಾನು ಆಯ್ಕೆ ಮಾಡಿಕೊಳ್ಳುವ ಪ್ರತಿಯೊಂದು ಪಾತ್ರವೂ ಹಿಂದಿನದಕ್ಕಿಂತ ಭಿನ್ನವಾರುತ್ತದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡಿವೋರ್ಸ್ ಬಳಿಕ ಇದೇ ಮೊದಲ ಬಾರಿಗೆ ಐಟಂ ಸಾಂಗ್ಗೆ ಸೊಂಟ ಬಳುಕಿಸಿದ ನಟಿ ಸಮಂತಾ
ನಾಗ ಚೈತನ್ಯ ಅವರಿಂದ ಬೇರ್ಪಡುವುದಾಗಿ ಘೋಷಿಸಿದ ನಂತರ ಸಮಂತಾ ಚಾರ್ ಧಾಮ್ ಯಾತ್ರೆಯನ್ನು ಪೂರ್ಣಗೊಳಿಸಿದರು. ಈ ಸಂದರ್ಶನದಲ್ಲಿ ಸಮಂತಾ ತಮ್ಮ ಆಧ್ಯಾತ್ಮಿಕ ಪಯಣದ ಬಗ್ಗೆಯೂ ಮಾತನಾಡಿದ್ದಾರೆ. "ನಿಮ್ಮಲ್ಲಿ ಏನೋ ಶಾಶ್ವತವಾಗಿ ಬದಲಾಗುತ್ತದೆ. ದೇವರು ನನಗೆ ಮುಂದುವರಿಯಲು ಸರಿಯಾದ ಶಕ್ತಿಯನ್ನು ನೀಡಿದ್ದಾನೆ ಎಂದು ನಾನು ಭಾವಿಸುತ್ತೇನೆ. ಲಾಕ್‌ಡೌನ್ ಸಮಯದಲ್ಲಿ ನಾನು ಧ್ಯಾನ ಮಾಡಲು ಪ್ರಾರಂಭಿಸಿದೆ" ಎಂದರು.
- " class="align-text-top noRightClick twitterSection" data="
">
ಸಮಂತಾ ಅವರು ತಮ್ಮ ಮುಂದಿನ 'ಶಾಕುಂತಲಂ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬ್ರಿಟಿಷ್ ನಿರ್ದೇಶಕ ಫಿಲಿಪ್ ಜಾನ್ ಅವರ ‘ಅರೇಂಜ್ಮೆಂಟ್ಸ್ ಆಫ್ ಲವ್' ಸಿನಿಮಾದಲ್ಲಿ ಸಮಂತಾ ಮುಖ್ಯ ಪಾತ್ರ ನಿಭಾಯಿಸಲಿದ್ದಾರೆ.
ಇದನ್ನೂ ಓದಿ: Good news: 'ಅರೇಂಜ್ಮೆಂಟ್ಸ್ ಆಫ್ ಲವ್'ನಲ್ಲಿ ನಟಿ ಸಮಂತಾ