ETV Bharat / sitara

ಶೇ.100ರಷ್ಟು ಅವಕಾಶ ನೀಡಿದ್ರೆ ಮಾತ್ರ 'ಸಲಗ', 'ಕೋಟಿಗೊಬ್ಬ 3' ರಿಲೀಸ್ - ಸಲಗ ಕನ್ನಡ ಸಿನಿಮಾ

ಮೂಲಗಳ ಪ್ರಕಾರ ಇತ್ತೀಚೆಗೆ, 'ಸಲಗ' ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮತ್ತು 'ಕೋಟಿಗೊಬ್ಬ 3' ಚಿತ್ರಗಳ ನಿರ್ಮಾಪಕ ಸೂರಪ್ಪ ಬಾಬು ಇಬ್ಬರೂ ಸಮಾಲೋಚನೆ ನಡೆಸಿದ್ದು, ಇಂತಹ ಸಂದರ್ಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿಯಾದ್ದರಿಂದ. ಸದ್ಯಕ್ಕೆ ಚಿತ್ರವನ್ನು ಬಿಡುಗಡೆ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರಂತೆ.

'Salga', 'Kotigobba 3' Kannada Cinema Release Date Announced
'ಸಲಗ', 'ಕೋಟಿಗೊಬ್ಬ 3' ರಿಲೀಸ್
author img

By

Published : Apr 7, 2021, 11:43 AM IST

ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ, ಇಂದಿನಿಂದ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ ನೀಡಿರುವುದು ಹಲವರಿಗೆ ಆತಂಕವನ್ನುಂಟು ಮಾಡಿದೆ. ಏಕೆಂದರೆ, ಶೇ. 100ರಷ್ಟು ಹಾಜರಾತಿ ಘೋಷಿಸಿದ ಮೇಲೆ 'ಪೊಗರು', 'ರಾಬರ್ಟ್' 'ಯುವರತ್ನ್​' ಚಿತ್ರಗಳು ಬಿಡುಗಡೆಯಾಗಿದ್ದು, ಏಪ್ರಿಲ್ ತಿಂಗಳಲ್ಲಿ 'ಸಲಗ' ಮತ್ತು 'ಕೋಟಿಗೊಬ್ಬ- 3' ಚಿತ್ರಗಳು ಬಿಡುಗಡೆಯಾಗಬೇಕಿತ್ತು.

ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಹಾಜರಾತಿ ಘೋಷಿಸಿರುವುದರಿಂದ, ಈ ಚಿತ್ರಗಳು ಬಿಡುಗಡೆಯಾಗುತ್ತವೋ ಅಥವಾ ಮುಂದಕ್ಕೆ ಹೋಗುತ್ತವೋ ಎಂಬ ಗೊಂದಲ ಎಲ್ಲರಲ್ಲೂ ಮೂಡಿತ್ತು. ಇದೀಗ ಎರಡೂ ಚಿತ್ರತಂಡದವರು ಈ ಕುರಿತು ನಿರ್ಧಾರ ತೆಗೆದುಕೊಂಡಿದ್ದು, ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿದ ನಂತರವಷ್ಟೇ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕರು ತೀರ್ಮಾನಿಸಿದ್ದಾರಂತೆ.

ಮೂಲಗಳ ಪ್ರಕಾರ ಇತ್ತೀಚೆಗೆ, 'ಸಲಗ' ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮತ್ತು 'ಕೋಟಿಗೊಬ್ಬ 3' ಚಿತ್ರಗಳ ನಿರ್ಮಾಪಕ ಸೂರಪ್ಪ ಬಾಬು ಇಬ್ಬರೂ ಸಮಾಲೋಚನೆ ನಡೆಸಿದ್ದು, ಇಂತಹ ಸಂದರ್ಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿಯಾದ್ದರಿಂದ, ಸದ್ಯಕ್ಕೆ ಚಿತ್ರವನ್ನು ಬಿಡುಗಡೆ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರಂತೆ. ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿದ ನಂತರವೇ, ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವ ನಿರ್ಧಾರಕ್ಕೆ ಅವರು ಬಂದಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ : ಸಲಗ, ಕೋಟಿಗೊಬ್ಬ 3 ಪ್ರೀ - ರಿಲೀಸ್ ಇವೆಂಟ್​ಗೆ ಕಂಟಕವಾದ ಕೋವಿಡ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.