ETV Bharat / sitara

ಲಾಕ್​​ಡೌನ್​ ಸಡಿಲಿಕೆ ನಂತರ ಬಿಡುಗಡೆಗೆ ಕಾದಿರುವ 'ಸಲಗ'ನ ತಯಾರಿ ಹೇಗಿದೆ ನೋಡಿ - Salaga team is in Post production

ಭೂಗತ ಲೋಕದ ಕಥೆ ಹೊಂದಿರುವ ದುನಿಯಾ ವಿಜಯ್ ನಿರ್ದೇಶನದ 'ಸಲಗ' ಸಿನಿಮಾ ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲೇ ಸಿನಿಮಾ ಸೆನ್ಸಾರ್​​ ಮುಂದೆ ಬರಲಿದ್ದು ಲಾಕ್​​ಡೌನ್ ಫ್ರೀ ನಂತರ ಬಿಡುಗಡೆಯಾಗಲಿದೆ.

salaga is in post production work
'ಸಲಗ'
author img

By

Published : Jun 3, 2020, 6:56 PM IST

ದುನಿಯಾ ವಿಜಯ್ ನಿರ್ದೇಶನದ 'ಸಲಗ' ಸಿನಿಮಾ ಆರಂಭವಾದಾಗಿನಿಂದ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಭಾರೀ ಕುತೂಹಲ ಹೆಚ್ಚಾಗಿದೆ. ವಿಜಯ್ ಮೊದಲ ಬಾರಿಗೆ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ಸಿನಿಮಾ ಇದು. 'ಮಾಸ್ತಿಗುಡಿ' ಚಿತ್ರದ ನಂತರ ಬ್ರೇಕ್​​​​​ಗಾಗಿ ಕಾಯುತ್ತಿದ್ದ ವಿಜಯ್​​​ಗೆ ಈ ಚಿತ್ರದ ಮೇಲೆ ಸಾಕಷ್ಟು ಭರವಸೆ ಇದೆ.

salaga is in post production work
ದುನಿಯಾ ವಿಜಯ್

ಸಿನಿಮಾ ಶೂಟಿಂಗ್ ಎಲ್ಲಾ ಮುಗಿದಿದ್ದು ಪೋಸ್ಟ್​ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದೆ. ಲಾಕ್​​ಡೌನ್ ಸಡಿಲಿಕೆ ನಂತರ ಸಿನಿಮಾ ಬಿಡುಗಡೆಯಾಗುವುದರಿಂದ ಚಿತ್ರದ ಚಟುವಟಿಕೆಗಳು ಜೋರಾಗಿ ನಡೆಯುತ್ತಿದೆ ಎಂದು ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್​​ ಹೇಳಿದ್ದಾರೆ. ಸಂಗೀತ ನಿರ್ದೇಶಕ ಚರಣ್​​​ರಾಜ್​​​​​ ರೀ ರೆಕಾರ್ಡಿಂಗ್ ಕೆಲಸದಲ್ಲಿ ಮಗ್ನರಾಗಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆನ್ಸಾರ್ ಮುಂದೆ ಬರಲಿದೆ.

salaga is in post production work
'ಸಲಗ' ಚಿತ್ರದ ಮುಹೂರ್ತದ ವೇಳೆ ಶುಭ ಹಾರೈಸಿದ್ದ ಸುದೀಪ್

ಇನ್ನು ಚಿತ್ರದ ಕಥೆ ಏನು ಎಂಬುದರ ಬಗ್ಗೆ ಅಭಿಮಾನಿಗಳಿಗೆ ಬಹಳ ಕುತೂಹಲವಿತ್ತು. ಭೂಗತ ಲೋಕದ ವ್ಯಕ್ತಿಗಳು ಹಾಗೂ ಪೊಲೀಸ್​​​​​​ ಇಲಾಖೆ ನಡುವಿನ ವಿಚಾರವನ್ನು ಚಿತ್ರದಲ್ಲಿ ತೋರಿಸಲಾಗಿದೆ ಎನ್ನಲಾಗುತ್ತಿದೆ. ರೌಡಿಗಳು, ಭೂಗತ ವ್ಯಕ್ತಿಗಳು ಹಾಗೂ ಪೊಲೀಸ್ ವ್ಯವಸ್ಥೆ ಸುತ್ತ ಕಥೆ ಸುತ್ತಲಿದೆಯಂತೆ. ಓಂ, ಕರಿಯ ಚಿತ್ರದಂತೆ ಇಲ್ಲೂ ಕೂಡಾ ರಿಯಲ್ ರೌಡಿಗಳನ್ನು ಬಳಸಿಕೊಳ್ಳಲಾಗಿದ್ದು ಅವರ ಸ್ಥಳದಲ್ಲೇ ಕೆಲವೊಂದು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆಯಂತೆ.

salaga is in post production work
ಸಂಜನಾ ಆನಂದ್

ಚಿತ್ರದಲ್ಲಿ ಡಾಲಿ ಧನಂಜಯ್, ರಂಗಾಯಣ ರಘು, ಕೆಮಿಸ್ಟ್ರಿ ಆಫ್ ಕರಿಯಪ್ಪ ನಾಯಕಿ ಸಂಜನಾ ಆನಂದ್, ಯಶ್​​​​​​​​​​​​​​​ ಶೆಟ್ಟಿ, ಕಾಕ್ರೋಚ್ ಸುಧಿ, ಅಚ್ಯುತ್ ಕುಮಾರ್, ಬಿ.ವಿ. ಭಾಸ್ಕರ್, ನಾಗಭೂಷಣ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ. ಎ 2 ಮ್ಯೂಜಿಕ್​​​​​ ಚಿತ್ರದ ಹಾಡುಗಳ ಹಕ್ಕು ಪಡೆದಿದೆ. ವೀನಸ್ ಎಂಟರ್​​​ಟೈನ್ಮೆಂಟ್​​​ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಶಿವಸೇನಾ ಛಾಯಾಗ್ರಹಣ, ವಿನೋದ್ ಸಾಹಸ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.