ETV Bharat / sitara

30 ಮಿಲಿಯನ್​ ಗಡಿ ದಾಟಿದ ಆರ್​ಆರ್​ಆರ್​ 'ನಾಟು.. ನಾಟು' ಸಾಂಗ್​ - ದಾಖಲೆ ಸೃಷ್ಟಿಸಿದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡು

ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್‌ಆರ್‌ಆರ್' ಸಿನಿಮಾದ ನಾಟು.. ನಾಟು ಹಾಡು ರಿಲೀಸ್​ ಆದಾಗಿನಿಂದ ಈವರೆಗೆ ಬರೋಬ್ಬರಿ 30 ಮಿಲಿಯನ್​ ಗಡಿ ದಾಟಿದೆ..

RRR movie
ಆರ್​ಆರ್​ಆರ್ ಸಿನಿಮಾ
author img

By

Published : Nov 19, 2021, 10:13 PM IST

Updated : Nov 19, 2021, 10:21 PM IST

ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್‌ಆರ್‌ಆರ್' ಸಿನಿಮಾ ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಬಿಗ್​ ಬಜೆಟ್​ನಲ್ಲಿ ನಿರ್ಮಾಣವಾಗಿರುವ ಚಿತ್ರ ಇದಾಗಿದೆ. ಕೆಲ ದಿನಗಳ ಹಿಂದೆ ಬಿಡುಗಡೆಯಾದ ನಾಟು... ನಾಟು ಹಾಡು ಯೂಟ್ಯೂ​ಬ್‌ನಲ್ಲಿ ದಾಖಲೆ ಸೃಷ್ಟಿಸಿದೆ.

ನ.10ರಂದು ಆರ್​ಆರ್​ಆರ್ ಚಿತ್ರತಂಡ ನಾಟು.. ನಾಟು ಹಾಡನ್ನು ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡದಲ್ಲಿ ರಿಲೀಸ್​ ಮಾಡಿತ್ತು. ಅಂದಿನಿಂದ ಇಂದಿನವರಗೆ ಎಲ್ಲಾ ಭಾಷೆಗಳನ್ನೂ ಒಗ್ಗೂಡಿಸಿ ಯೂಟ್ಯೂಬ್‌​ನಲ್ಲಿ ಬರೋಬ್ಬರಿ 30 ಮಿಲಿಯನ್ ಗಡಿ ದಾಟಿದೆ.

ಹಾಡಿನಲ್ಲಿ ನಟ ರಾಮ್ ಚರಣ್ ಮತ್ತು ಎನ್​​ಟಿಆರ್ ಮಾಡಿರುವ ನೃತ್ಯ ಅಭಿಮಾನಿಗಳ ಮನಸೂರೆಗೊಳಿಸಿದೆ. ಹಾಡಿಗೆ ಪ್ರೇಮರಕ್ಷಿತ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಎಂ ಎಂ ಕೀರವಾಣಿ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ.

RRR movie
ಆರ್​ಆರ್​ಆರ್ ಸಿನಿಮಾ

ಚಿತ್ರದಲ್ಲಿ ಚರಣ್ ಅಲ್ಲೂರಿ ಸೀತಾರಾಮರಾಜನಾಗಿ ಮತ್ತು ಎನ್‌ಟಿಆರ್ ಕೋಮರಂ ಭೀಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷ ಜ.7 ರಂದು ಚಿತ್ರವು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

Last Updated : Nov 19, 2021, 10:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.