ETV Bharat / sitara

'ಶಾಟ್​ ರೆಡಿ ಎಂದಾಗ ಬರಲಿಲ್ಲ ರಾಕ್​ಲೈನ್​ ಸುಧಾಕರ್'​... ಹೀಗಿತ್ತು ಅವರ ಬದುಕಿನ ಕೊನೆಯ ದಿನ! - ರಾಕ್​ಲೈನ್​ ಸುಧಾಕರ್​​​

ರಾಕ್​ಲೈನ್​​​ ಸುಧಾಕರ್​​ ಶೂಟಿಂಗ್​ ಸೆಟ್​​ನಲ್ಲಿ‌ ಮೇಕಪ್ ಹಾಕಿಸಿಕೊಳ್ಳೊ ಮುನ್ನ ಸ್ಯಾನಿಟೈಸ್​ ಮಾಡಿಸಿಕೊಂಡ್ರಂತೆ. ಬಳಿಕ ಮೇಕಪ್ ಹಾಕಿಸಿಕೊಂಡು ಹತ್ತು ನಿಮಿಷ ವಿಶ್ರಾಂತಿ ಬೇಕೆಂದು ಹೋದ್ರಂತೆ. ನಂತ್ರ ನಿರ್ದೇಶಕರು ಹೋಗಿ ಮಾತನಾಡಿಸಿದಾಗ ಮತನಾಡಲಿಲ್ವಂತೆ

rocklin sudhakar last moments
ರಾಕ್​​ಲೈನ್ ಸುಧಾಕರ್​​​ ಕೊನೆಯ ಕ್ಷಣಗಳು ಹೇಗಿದ್ದವು ಗೊತ್ತಾ?
author img

By

Published : Sep 24, 2020, 7:51 PM IST

ಸ್ಯಾಂಡಲ್​​ವುಡ್​ನಲ್ಲಿ ರಾಕ್ ಲೈನ್ ಸುಧಾಕರ್ ಎಂದೇ ಪ್ರಖ್ಯಾತಿ ಹೊಂದಿದ್ದ ಸುಧಾಕರ್ ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಈ ಹಿಂದೆ ರಾಕ್ ಲೈನ್ ವೆಂಕಟೇಶ್ ಕೊರೊನಾ ಸೋಂಕಿತರಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ನಂತರ ಶುಗರ್ ಲೆಸ್ ಚಿತ್ರದಲ್ಲಿ ಒಂದು ಪಾತ್ರ ಮಾಡುವುದಕ್ಕೆ ರಾಕ್ ಲೈನ್ ಸುಧಾಕರ್​​ಗೆ ಅವಕಾಶ ಸಿಕ್ಕಿತ್ತು.

ರಾಕ್​​ಲೈನ್ ಸುಧಾಕರ್​​​ ಕೊನೆಯ ಕ್ಷಣಗಳು

ಅದೇ ಉತ್ಸಾಹದಲ್ಲಿ ಶುಗರ್ ಲೆಸ್ ಚಿತ್ರದ ಚಿತ್ರೀಕರಣಕ್ಕೆ ರಾಕ್ ಲೈನ್ ಸುಧಾಕರ್ ಬಂದಿದ್ದರು. ಬಂದ ತಕ್ಷಣ ನಿರ್ದೇಶಕ ಶಶಿಧರ್ ಹಾಗು ಸಿನಿಮಾ ತಂಡದವರನ್ನ ಮಾತನಾಡಿಸಿ, ಸೀದಾ ತಿಂಡಿ ತಿನ್ನೋದಿಕ್ಕೆ ಹೋಗಿದ್ದರು. ಹಾಗೇ ಫೋನ್​​ನಲ್ಲಿ ಮಾತನಾಡುತ್ತಾ ತಿಂಡಿ ತಿಂದಿದ್ದರಂತೆ. ಬಳಿಕ‌ ಮೇಕಪ್ ಹಾಕಿಸಿಕೊಳ್ಳುವ ಮುನ್ನ ಸ್ಯಾನಿಟೈಸ್​ ಮಾಡಿಸಿಕೊಂಡ್ರಂತೆ. ಬಳಿಕ ಮೇಕಪ್ ಹಾಕಿಸಿಕೊಂಡು ಹತ್ತು ನಿಮಿಷ ವಿಶ್ರಾಂತಿ ಬೇಕೆಂದು ಹೋಗಿದ್ದರಂತೆ.

ಶಾಟ್ ರೆಡಿಯಾಗಿದೆ ಅಂತಾ ಕರೆಯೋದಿಕ್ಕೆ ನಿರ್ದೇಶಕ ಶಶಿಧರ್, ತಂಡದ ಸದಸ್ಯರು ಹೋದಾಗ ಅವರು ಮಾತನಾಡಲಿಲ್ವಂತೆ. ಆಗ ಚಿತ್ರತಂಡ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ರಾಕ್ ಲೈನ್ ಸುಧಾಕರ್ ಪ್ರಾಣಪಕ್ಷಿ ಹಾರಿ ಹೋಗಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.