ಕಳೆದ ಎರಡು ದಿನಗಳ ಹಿಂದೆ ಫೇಸ್ಬುಕ್ನಲ್ಲಿ ನಟಿ ರಾಧಿಕಾ ಪಂಡಿತ್ ಒಂದು ಪೋಸ್ಟ್ ಹಾಕಿದ್ದರು. ಕೈಯಲ್ಲಿ 'ಆರ್' ಅಕ್ಷರದ ವಸ್ತುವೊಂದನ್ನು ಹಿಡಿದು 'R Stand for.... ಎಂದು ತಮ್ಮ ಫೇಸ್ಬುಕ್ ಫೇಜ್ನಲ್ಲಿ ಆ ಫೋಟೋ ಹಾಕಿಕೊಂಡಿದ್ದರು.
ಈ ಪೋಸ್ಟ್ ನೋಡಿದ ಯಶ್ ಮತ್ತು ರಾಧಿಕಾ ಪಂಡಿತ್ ಅಭಿಮಾನಿಗಳು, ಮಗಳಿಗೆ ಆರ್ ಅಕ್ಷರದಿಂದ ಹೆಸರಿಡಲು ನಿರ್ಧರಿಸಿರಬಹುದು. ಅದಕ್ಕೆ ಆರ್ ಎಂದು ಸುಳಿವು ಕೊಡ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯಿಸಿದ್ದಾರೆ. ನೀವು ಅಂದುಕೊಂಡಂತೆ ಏನೂ ಇಲ್ಲ. ರಾಧಿಕಾ ಮತ್ತು ರಾಕಿಂಗ್ ಸ್ಟಾರ್ ಅಂತಹ ಹೆಸರಿರಬೇಕು ಅಂತ ಪೋಸ್ಟ್ ಹಾಕಿದ್ದಾರೆ ಅಷ್ಟೇ. ಮಗಳಿಗೆ ಇನ್ನು ಯಾವುದು ಹೆಸರು ಅಂತಿಮ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
- " class="align-text-top noRightClick twitterSection" data="">
ಅಭಿಮಾನಿಗಳೇ ಮಗಳಿಗೆ ಹಲವು ಹೆಸರುಗಳನ್ನು ಸೂಚಿಸುತ್ತಿರುವುದು ನಿಜಕ್ಕೂ ಖುಷಿ ಕೊಟ್ಟಿದೆ. ಸದ್ಯದಲ್ಲೇ ಸಂಪ್ರದಾಯಬದ್ಧವಾಗಿ ನಾಮಕರಣ ಮಾಡಿ ಒಂದು ಹೆಸರಿಡುತ್ತೇವೆ. ಆಮೇಲೆ ಬೇಕಾದರೆ ನಮಗೆ ಇಷ್ಟ ಬಂದಂತೆ ಕರೆಯೋಣ ಎಂದು ಯಶ್ 'ಪಂಚತಂತ್ರ' ಸಿನಿಮಾ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.