ದರ್ಶನ್ ನಟನೆಯ ರಾಬರ್ಟ್ ಚಿತ್ರದ ಟ್ರೈಲರ್ ರಿಲೀಸ್ ದಿನಾಂಕವನ್ನು ಚಿತ್ರತಂಡ ಬಹಿರಂಗ ಮಾಡಿದೆ. ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ಫೆಬ್ರವರಿ 16 ರಂದು ರಾಬರ್ಟ್ ಟ್ರೈಲರ್ ತೆರೆಗೆ ತರಲಾಗುತ್ತಿದೆ. ಈ ಮೂಲಕ ದರ್ಶನ್ಗೆ ಉಡುಗೊರೆ ಸಿಕ್ಕಂತಾಗುತ್ತಿದೆ. ಇದೇ ದಿನ ಕನ್ನಡ ಮತ್ತು ತೆಲುಗಿನಲ್ಲಿ ರಾಬರ್ಟ್ ಟ್ರೈಲರ್ ರಿಲೀಸ್ ಆಗಲಿದೆ.
-
#RoberrtTrailerRoarOnFeb16 #RoberrtStromMarch11 #Roberrt https://t.co/RhlPueRxox
— Darshan Thoogudeepa (@dasadarshan) February 11, 2021 " class="align-text-top noRightClick twitterSection" data="
">#RoberrtTrailerRoarOnFeb16 #RoberrtStromMarch11 #Roberrt https://t.co/RhlPueRxox
— Darshan Thoogudeepa (@dasadarshan) February 11, 2021#RoberrtTrailerRoarOnFeb16 #RoberrtStromMarch11 #Roberrt https://t.co/RhlPueRxox
— Darshan Thoogudeepa (@dasadarshan) February 11, 2021
ಈ ಹಿಂದೆ ಸಿನಿಮಾದ ಜೈ ಶ್ರೀರಾಮ್ ಎಂಬ ಹಾಡನ್ನು ಚಿತ್ರ ತಂಡ ರಿಲೀಸ್ ಮಾಡಿತ್ತು. ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿರುವ ಈ ಹಾಡನ್ನು ಶಂಕರ್ ಮಹಾದೇವನ್ ಹಾಡಿದ್ದರು. ಅರ್ಜುನ್ ಜನ್ಯ ಸಂಗೀತ ನೀಡಿದ್ದರು.
ರಾಬರ್ಟ್ ಸಿನಿಮಾ ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿದ್ದು, ಚಿತ್ರದಲ್ಲಿ ದರ್ಶನ್, ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು ಸೇರಿದಂತೆ ಹಲವರು ನಟಿಸಿದ್ದಾರೆ. ಅಲ್ಲದೆ ಸಿನಿಮಾಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ.