ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ. ಈ ಸುದ್ದಿಯನ್ನು ಚಿತ್ರತಂಡ ಈಗಾಗಲೇ ಬಹಿರಂಗಪಡಿಸಿದೆ. ಅಲ್ಲದೆ ಸಿನಿಮಾಕ್ಕಾಗಿ ದುಡಿದ ತಂತ್ರಜ್ಞರಿಗೆ ದಚ್ಚು ನಿನ್ನೆ ಉಡುಗೊರೆಯನ್ನೂ ನೀಡಿದ್ದಾರೆ.
ಇನ್ನು ಬರೋಬ್ಬರಿ 108 ದಿನಗಳ ಕಾಲ ಶೂಂಟಿಂಗ್ ಮಾಡಿರುವ ಚಿತ್ರತಂಡ ಇದೀಗ ಸಾಂಗ್ ರೆಕಾರ್ಡಿಂಗ್ ಕೆಲಸಕ್ಕೆ ಕೈ ಹಾಕಿದೆ. ರಾಬರ್ಟ್ ಸಿನಿಮಾಕ್ಕೆ ಬೆಂಗಳೂರು, ಮೈಸೂರು, ಹೈದರಾಬಾದ್, ಪುದುಚೇರಿ, ವಾರಣಾಸಿ, ಲಕ್ನೋ ಸೇರಿದಂತೆ ಹಲವು ಕಡೆ ಶೂಟಿಂಗ್ ಮಾಡಲಾಗಿತ್ತು.
-
Roberrt song recording 🔥🔥😍😍 pic.twitter.com/loiJ52DO8I
— D Company(R)Official (@Dcompany171) January 23, 2020 " class="align-text-top noRightClick twitterSection" data="
">Roberrt song recording 🔥🔥😍😍 pic.twitter.com/loiJ52DO8I
— D Company(R)Official (@Dcompany171) January 23, 2020Roberrt song recording 🔥🔥😍😍 pic.twitter.com/loiJ52DO8I
— D Company(R)Official (@Dcompany171) January 23, 2020
ಇದೀಗ ಸಾಂಗ್ ರೆಕಾರ್ಡಿಂಗ್ ಮಾಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವ ರಾಬರ್ಟ್ ತಂಡ, ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ. ಈ ವಿಡಿಯೋದಲ್ಲಿ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಮತ್ತು ನಿರ್ದೇಶಕ ತರುಣ್ ಸುಧೀರ್ ಕಾಣಿಸಿಕೊಂಡಿದ್ದಾರೆ.
ರಾಬರ್ಟ್ಸಿನಿಮಾಕ್ಕೆ ಉಮಾಪತಿ ಬಂಡವಾಳ ಹೂಡಿದ್ದು, ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಚಿತ್ರದಲ್ಲಿ ಆಶಾ ಭಟ್ ಮತ್ತು ವಿನೋದ್ ಪ್ರಭಾಕರ್ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾದ್ದಾರೆ.