ಮದಗಜ ಟ್ರೇಲರ್ ರಿಲೀಸ್.. 1 ಗಂಟೆಯಲ್ಲೇ 1 ಮಿಲಿಯನ್ ದಾಖಲೆಯ ವೀಕ್ಷಣೆ - Roaring Star Sri Murali
ರೋರಿಂಗ್ ಸ್ಟಾರ್ (Roaring Star Sri Murali) ಅಭಿನಯದ ಮದಗಜ ಟ್ರೇಲರ್ (Madagaja Trailer) ರಿಲೀಸ್ ಆದ ಕೆಲವೇ ಸಮಯದಲ್ಲಿ 1 ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದಿದೆ..

ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ (Roaring Star Sri Murali) ಬಹು ನಿರೀಕ್ಷಿತ ಮದಗಜ ಚಿತ್ರದ ಟ್ರೇಲರ್ ರಿಲೀಸ್ (Madagaja Trailer) ಆಗಿದೆ. ಅಷ್ಟೇ ಅಲ್ಲ, ಅದು ರಿಲೀಸ್ ಆದ ಒಂದು ಗಂಟೆಯಲ್ಲೇ 1 ಮಿಲಿಯನ್ ವೀಕ್ಷಣೆ ಪಡೆದಿದೆ.
ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು ಮದಗಜ ಟ್ರೇಲರ್ ಲಾಂಚ್ ಮಾಡಿದರು. ನಿರ್ದೇಶಕ ಮಹೇಶ್ ಕುಮಾರ್ ಚಿತ್ರ ನಿರ್ದೇಶಿಸಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ.
ಶ್ರೀಮುರಳಿ, ಜಗಪತಿ ಬಾಬು ರಗಡ್ ಲುಕ್, ರವಿ ಬಸ್ರೂರ್ ಸಂಗೀತ ಚಿತ್ರಕ್ಕೆ ಫ್ಲಸ್ ಪಾಯಿಂಟ್. ನಾಯಕಿಯಾಗಿ ಆಶಿಕಾ ರಂಗನಾಥ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಡಿ.3ರಂದು ಮದಗಜ ಚಿತ್ರ ರಿಲೀಸ್ ಆಗಲಿದೆ.
- " class="align-text-top noRightClick twitterSection" data="">
(ಬಹುನಿರೀಕ್ಷಿತ ಮದಗಜ ಟೀಸರ್-2 ಔಟ್; ಖಡಕ್ - ಪಂಚಿಂಗ್ ಡೈಲಾಗ್ಗಳು ಹೇಗಿದೆ ಅಂದ್ರೆ...)