ETV Bharat / sitara

'ಹೋಂ ಮಿನಿಸ್ಟರ್' ಚಿತ್ರಕ್ಕಾಗಿ ರಿಯಲ್ ಸ್ಟಾರ್ ಮಾಡಿದ್ದೇನು ಗೊತ್ತೇ? ನೋಡಿ - ಹೋಂ ಮಿನಿಸ್ಟರ್ ಚಿತ್ರ ಪ್ರಚಾರ

ಓ ಗಂಡಸರೇ ನಿಮ್ಮ ಹೋಂ ಮಿನಿಸ್ಟರ್ ಜೊತೆ ಈ ಸವಾಲನ್ನು ನೀವು ಒಪ್ಪುವಿರಾ? ಎಂದು ಕೇಳಿರುವ ನಟ ಉಪೇಂದ್ರ ವಿವಾಹಿತರು ಪತ್ನಿಯ ಸೇವೆ, ಮನೆಗೆಲಸ ಮಾಡುವಿರಾ? ಎಂದು ಚಾಲೆಂಜ್ ಬೇರೆ ಹಾಕಿದ್ದಾರೆ.

home-minister
ಹೋಂ ಮಿನಿಸ್ಟರ್ ಚಿತ್ರ
author img

By

Published : Mar 30, 2022, 10:56 PM IST

ಕೊರೊನಾದಿಂದಾಗಿ ದೇಶದೆಲ್ಲೆಡೆ ಅದೆಷ್ಟೋ ಜನರು ವರ್ಕ್ ಫ್ರಮ್ ಹೋಮ್‌‌ ಮಾಡುವ ಪರಿಸ್ಥಿತಿ ಉಂಟಾಗಿತ್ತು. ಬಹುತೇಕರಿಗೆ ಆಫೀಸ್ ಕೆಲಸದ ಜೊತೆಗೆ ಮನೆಗೆಲಸವನ್ನೂ ಮಾಡುವ ಅನಿವಾರ್ಯತೆ ಇತ್ತು. ಸೋಂಕಿನ ಅಬ್ಬರ ಕಡಿಮೆಯಾದರೂ ಕೂಡ ಬಹಳಷ್ಟು ಮಂದಿ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ.

ಇದೀಗ ಕನ್ನಡ ಚಿತ್ರರಂಗದ ನಟ ಹಾಗು ನಿರ್ದೇಶಕ ಉಪೇಂದ್ರ ಅವರಿಗೆ ಕೊರೊನಾ ಮುಗಿದ ಮೇಲೂ ವರ್ಕ್ ಪ್ರಮ್ ಹೋಂ ಶುರುವಾಗಿದೆ. ಹೌದು, ಉಪೇಂದ್ರ ಅವರು ಕೈಯಲ್ಲಿ ಪೊರಕೆ ಹಿಡಿದು ಕಸಗುಡಿಸಿ, ಅಡುಗೆ ಮಾಡಿ ಪಾತ್ರೆ ತೊಳೆದು ಬಟ್ಟೆ ಒಗೆದು ಒಣಗಿಸುವುದಷ್ಟೇ ಅಲ್ಲ, ಪತ್ನಿ ಪ್ರಿಯಾಂಕಾ ತಲೆಗೆ ಮಸಾಜ್ ಕೂಡಾ ಮಾಡಿ ಅವರು ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ತಾವು ಇವೆಲ್ಲವನ್ನೂ ಮಾಡಿದ್ದಲ್ಲದೇ ವಿವಾಹಿತ ಪುರುಷರಿಗೂ ನೀವೂ ಮಾಡಬಲ್ಲಿರಾ? ಎಂದು ಸವಾಲು ಬೇರೆ ಹಾಕಿದ್ದಾರೆ.

ಓ ಗಂಡಸರೇ ನಿಮ್ಮ ಹೋಂ ಮಿನಿಸ್ಟರ್ ಜೊತೆ ಈ ಸವಾಲನ್ನು ನೀವು ಒಪ್ಪುವಿರಾ? ಎಂದು ಕೇಳಿರುವ ಉಪೇಂದ್ರ ವಿವಾಹಿತರು ಪತ್ನಿಯ ಸೇವೆ, ಮನೆಗೆಲಸ ಮಾಡುವಿರಾ? ಎಂದು ಚಾಲೆಂಜ್ ಹಾಕಿದ್ದಾರೆ. ಇದನ್ನು ಗಂಡಸರು ಸವಾಲಾಗಿ ತೆಗೆದುಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ವಿವಾಹಿತ ಮಹಿಳೆಯರಂತೂ ಈ ವಿಡಿಯೋವನ್ನು ತಮ್ಮ ತಮ್ಮ ಗಂಡಂದಿರಿಗೆ ಫಾರ್ವರ್ಡ್ ಮಾಡಿ, 'ನೋಡಿ ಉಪೇಂದ್ರ ಸ್ಟಾರ್ ಆಗಿದ್ದರೂ ಹೆಂಡತಿ ಹೇಳಿದಂತೆ ಮನೆ ಕೆಲಸ ಮಾಡ್ತಿದ್ದಾರೆ' ಎಂದು ಹಂಗಿಸುತ್ತಿದ್ದಾರಂತೆ! .

ಅಷ್ಟಕ್ಕೂ ಉಪೇಂದ್ರ ಈ ಕೆಲಸಗಳನ್ನೇಕೆ ಮಾಡ್ತಿದ್ದಾರೆ? ಅಂತಾ ತಲೆಗೆ ಹುಳ ಬಿಟ್ಟುಕೊಳ್ಳುತ್ತೀರಾ? ಜಾಸ್ತಿ ತಲೆಗೆಡಿಸಿಕೊಳ್ಳಬೇಡಿ, ಉಪೇಂದ್ರ ಈ ಮನೆ ಕೆಲಸಗಳನ್ನು ತಮ್ಮ ಹೋಂ ಮಿನಿಸ್ಟರ್ ಸಿನಿಮಾ ಪ್ರಚಾರಕ್ಕಾಗಿ ಮಾಡಿದ್ದಾರೆ. ಈ ಸಿನಿಮಾ ಏಪ್ರಿಲ್ 1ಕ್ಕೆ ಬಿಡುಗಡೆ ಆಗುತ್ತಿದೆ.

ಉಪೇಂದ್ರ ಹೋಂ‌ ಮಿನಿಸ್ಟರ್ ಸಿನಿಮಾ ಟೈಟಲ್​ಗೆ ತಕ್ಕಂತೆ ಹೀಗೆಲ್ಲಾ ಮಾಡುವ ಮೂಲಕ ವಿಭಿನ್ನ ಪ್ರಚಾರ ಕೈಗೊಂಡಿದ್ದಾರೆ. ಚಿತ್ರದಲ್ಲಿ ಎರಡು ಶೇಡ್​ನಲ್ಲಿ ಇವರು ಕಾಣಿಸಿಕೊಂಡಿದ್ದು, ನಟಿ ವೇದಿಕಾ 'ಹೋಂ ಮಿನಿಸ್ಟರ್' ಆಗಿದ್ದಾರೆ.

ಇದನ್ನೂ ಓದಿ: ಹಾಸ್ಯ ನಟ ಬಿರಾದಾರ್ ನಟನೆಯ '90 ಹೊಡಿ ಮನೀಗ್ ನಡಿ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ತಕರಾರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.