ETV Bharat / sitara

ಎರಡು ವರ್ಷಗಳ ನಂತರ ಮತ್ತೆ ಸಿನಿಮಾದತ್ತ ಮುಖಮಾಡಿದ ನಟಿ ರಿಯಾ - ನಟಿ ರಿಯಾ ಚಕ್ರವರ್ತಿ ಸಿನೆಮಾ ಸುದ್ದಿ

ನಾನು 2 ವರ್ಷಗಳ ನಂತರ ಕೆಲಸಕ್ಕೆ ಹೋಗಿದ್ದೆ. ನನ್ನ ಕಷ್ಟದ ಸಮಯದಲ್ಲಿ ನನ್ನೊಂದಿಗೆ ನಿಂತ ಎಲ್ಲ ಜನರಿಗೆ ದೊಡ್ಡ ಧನ್ಯವಾದಗಳು. ಏನೇ ಇರಲಿ, ಸೂರ್ಯನು ಯಾವಾಗಲೂ ಹೊಳೆಯುತ್ತಾನೆ, ಎಂದಿಗೂ ನಿಮ್ಮ ಪ್ರಯತ್ನವನ್ನು ಬಿಟ್ಟುಕೊಡಬೇಡಿ ಎಂದು ನಟಿ ತಮ್ಮ ಇನ್​​ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

Rhea
ನಟಿ ರಿಯಾ
author img

By

Published : Feb 23, 2022, 7:33 PM IST

ಮುಂಬೈ(ಮಹಾರಾಷ್ಟ್ರ): ನಟಿ ರಿಯಾ ಚಕ್ರವರ್ತಿ ಅವರು ಕಳೆದ ಎರಡು ವರ್ಷಗಳಿಂದ ಸುತ್ತುವರೆದಿದ್ದ ಎಲ್ಲಾ ವಿವಾದಗಳ ನಂತರ ತಮ್ಮ ಜೀವನವನ್ನು 'ಪುನಶ್ಚೇತನ'ಗೊಳಿಸಿಕೊಳ್ಳುತ್ತಿದ್ದಾರೆ. ಎರಡು ವರ್ಷಗಳ ನಂತರ ಇದೀಗ ಮತ್ತೆ ಸಿನಿಮಾದತ್ತ ಮುಖಮಾಡಿದ್ದಾರೆ.

ನಟಿ ತಮ್ಮ ಇನ್​​​ಸ್ಟಾಗ್ರಾಂ ಪೇಜ್​ನಲ್ಲಿ ಹಳದಿ ಲೆಹೆಂಗಾ ಧರಿಸಿದ್ದ ಫೋಟೋವನ್ನು ಹಂಚಿಕೊಂಡಿದ್ದು, ಅದರ ಶೀರ್ಷಿಕೆಯಲ್ಲಿ 'ಸಮ್​ಟೈಮ್​ ಆರ್​ ದಿ ಅದರ್​​, ಸಮ್​ವೇರ್​​ ಸಮ್​ಹೌ, ಶಿ ಫೈನಲಿ ಲರ್ನ್ಂಟ್​ ಹೌ ದಿ ಲೀವ್​ ಇನ್​ ದಿ ನೌ' - ಆರ್​ಸಿ# ರೆನೀವ್​' ಎಂದು ಬರೆದುಕೊಂಡಿದ್ದಾರೆ.

ಆಕರ್ಷಕವಾದ ಪೋಸ್ಟ್​ ಹಂಚಿಕೊಂಡಿರುವ ಅವರು, 'ನಿನ್ನೆ, ನಾನು 2 ವರ್ಷಗಳ ನಂತರ ಕೆಲಸಕ್ಕೆ ಹೋಗಿದ್ದೆ. ನನ್ನ ಕಷ್ಟದ ಸಮಯದಲ್ಲಿ ನನ್ನೊಂದಿಗೆ ನಿಂತ ಎಲ್ಲ ಜನರಿಗೆ ದೊಡ್ಡ ಧನ್ಯವಾದಗಳು. ಏನೇ ಇರಲಿ, ಸೂರ್ಯನು ಯಾವಾಗಲೂ ಹೊಳೆಯುತ್ತಾನೆ, ಎಂದಿಗೂ ನಿಮ್ಮ ಪ್ರಯತ್ನವನ್ನು ಬಿಟ್ಟುಕೊಡಬೇಡಿ' ಎಂದು ಬರೆದುಕೊಂಡಿದ್ದಾರೆ.

ಫೋಟೋದಲ್ಲಿ ರಿಯಾ ಮೌವ್ ಲಿಪ್ ಮೇಕ್​ ಅಪ್ ಅನ್ನು ಹಾಕಿಕೊಂಡಿದ್ದಾರೆ. ಅಲ್ಲದೇ, ಮುತ್ತುಗಳಿಂದ ಕೂಡಿದ ಜುಮ್ಕಾಗಳು ಮತ್ತು ಬಳೆಗಳನ್ನು ಧರಿಸಿ ಆಕರ್ಷಕವಾಗಿ ಕಾಣಿಸಿದ್ದಾರೆ.

ನಟ ಸುಶಾಂತ್ ಸಿಂಗ್ ಸಾವು ಹಾಗೂ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಹಾಗೂ ಅವರ ಸಹೋದರ ಶೋಕ್ ಚಕ್ರವರ್ತಿ ಅವರನ್ನು ಎನ್​ಸಿಬಿ ಬಂಧಿಸಿತ್ತು. ನಟಿ ಮುಂಬೈನ ಬೈಕುಲ್ಲಾ ಜೈಲಿನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದರು.

ಓದಿ: ಸೋಷಿಯಲ್​ ಮೀಡಿಯಾದಲ್ಲಿ ಮದುವೆ ಚಿತ್ರ ಹಂಚಿಕೊಂಡ ಫರ್ಹಾನ್- ಶಿಬಾನಿ ದಾಂಡೇಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.