ಹೈದರಾಬಾದ್: ಟೈಗರ್ ಶ್ರಾಫ್ ಅವರ ಮುಂಬರುವ ಆ್ಯಕ್ಷನ್ ಚಿತ್ರವಾದ ಗಣಪತ್ನಲ್ಲಿ ನಟಿ ಕೃತಿ ಸನನ್ ಟೈಗರ್ ಜೊತೆ ಆಕ್ಷನ್ ಸೀನ್ನಲ್ಲಿ ನಟಿಸುತ್ತಿರುವುದಾಗಿ ನಿರ್ಮಾಪಕರು ಬಹಿರಂಗಪಡಿಸಿದ್ದಾರೆ.
ಚಿತ್ರದಲ್ಲಿ ಕೃತಿ ಸನನ್ ಪಾತ್ರ ಹಾಗೂ ಹೆಸರಿನ ಬಗ್ಗೆ ಜಾಕಿ ಭಗ್ನಾನಿ ಬ್ಯಾನರ್ನ ಪೂಜಾ ಎಂಟರ್‌ಟೈನ್‌ಮೆಂಟ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಹಿರಂಗಗೊಳಿಸಲಾಗಿದೆ. ಚಿತ್ರದಲ್ಲಿ ಕೃತಿ ಜಾಸ್ಸಿ ಎಂಬ ಮಹಿಳೆಯ ಪಾತ್ರಕ್ಕೆ ಬಣ್ಣ ಹಚ್ಚಿರುವುದಾಗಿ ರಿವೀಲ್ ಮಾಡಿದ್ದಾರೆ.
2014 ರಲ್ಲಿ ಒಟ್ಟಿಗೆ ವೃತ್ತಿ ಜೀವನವನ್ನು ಶುರುಮಾಡಿದ ಟೈಗರ್ ಮತ್ತು ಕೃತಿ ಆರು ವರ್ಷಗಳ ನಂತರ ಕ್ವೀನ್ ಖ್ಯಾತಿಯ ನಿರ್ದೇಶಕ ವಿಕಾಸ್ ಬಹ್ಲ್ ಅವರ ಆಕ್ಷನ್ ಚಿತ್ರಕ್ಕಾಗಿ ಇಬ್ಬರೂ ಒಟ್ಟಿಗೆ ಸೇರಿದ್ದಾರೆ, ಈ ಚಿತ್ರವನ್ನು ಜಾಕಿ ಭಗ್ನಾನಿ ಬ್ಯಾಂಕ್ರೊಲ್ ನಿರ್ಮಿಸುತ್ತಿದ್ದಾರೆ.
ಟೈಗರ್ ಶ್ರಾಫ್ ನಟಿಸಿರುವ ಎಲ್ಲ ಚಿತ್ರಕ್ಕಿಂತ ಗಣಪಥ್ ವಿಭಿನ್ನವಾಗಿದ್ದು, ಚಿತ್ರದಲ್ಲಿ ನಟಿಸಲು ಶ್ರಾಫ್ ನಟಿಸಲು ಉತ್ಸುಕರಾಗಿದ್ದಾರೆ. ಮುಂದಿನ ವರ್ಷದಲ್ಲಿ ಚಿತ್ರ ಬಿಡುಗಡೆಯಾಗಲಿದೆ.